
ಬೆಂಗಳೂರು[ಜು.21] ಮುಖ್ಯಮಂತ್ರಿ ಕುಮಾರಸ್ವಾಮಿ ಶನಿವಾರ ಮೂರು ಗಂಟೆಗೂ ಅಧಿಕ ಕಾಲ 'ಕನ್ನಡ ಪ್ರಭ-ಸುವರ್ಣ ನ್ಯೂಸ್' ನಲ್ಲಿದ್ದರು. ರಾಜ್ಯದ ಮೂಲೆ ಮೂಲೆಗಳಿಂದ ಬಂದ ಕರೆಗೆ ಉತ್ತರ ನೀಡಿದರು. ಜನರ ಸಮಸ್ಯೆಗಳಿಗೆ ಕಿವಿಯಾದರು. ಉದ್ಯೋಗ ನೀಡುವ ಭರವಸೆ ನೀಡಿದರು. ತಮ್ಮ ಜೀವನ ಶೈಲಿಯ ಬಗ್ಗೆ ಹೇಳಿಕೊಂಡರು. ಹಿಂದೆ ಮುಖ್ಯಂತ್ರಿಯಾಗಿದ್ದಾಗ ಇದ್ದ ಸ್ಥಿತಿಗೂ ಈಗ ಇರುವ ಸ್ಥಿತಿಗೂ ನಡುವಿನ ಅಂತರ ಹೇಳಿದರು.
7 ಗಂಟೆಗೆ ಆರಂಭವಾದ ಮನವಿಗಳಿಗೆ ಸ್ಪಂದಿಸುವ ‘ಹಲೋ ಸಿಎಂ’ ರಾತ್ರಿ 9 ಗಂಟೆಯವರೆಗೂ ಮುಂದುವರಿದಿತ್ತು. ಕೆಪಿಎಸ್ಸಿ ಪರೀಕ್ಷಾ ಫಲಿತಾಂಶ ವಿಳಂಬ, ಅನ್ನಭಾಗ್ಯ ಅಕ್ಕಿ ಗೊಂದಲ, ಭ್ರಷ್ಟಾಚಾರ, ಅಧಿಕಾರಿಗಳ ದುರ್ವತನೆ, ಅಕ್ರಮ-ಸಕ್ರಮದಲ್ಲಿ ಸಿಕ್ಕಿ ಪೇಚಾಡುತ್ತಿರುವವರ ಸ್ಥಿತಿ, ಆಟೋ ಚಾಲಕರ ಬದುಕು ಎಲ್ಲದಕ್ಕೂ ಉತ್ತರ ನೀಡಿದರು.
ಸಿಎಂ ಸಮಸ್ಯೆ ಬಂದಾಗ ಯಾರಿಗೆ ಹೇಳ್ತಾರೆ?
ಯಶಸ್ವಿನಿ ಯೋಜನೆ ಎಲ್ಲವೂ ಚರ್ಚೆಗೆ ಬಂದವು. ಕುಮಾರಸ್ವಾಮಿ ಎಲ್ಲದಕ್ಕೂ ಪರಿಹಾರ ಕಂಡುಹಿಡಿಯುವ ಭರವಸೆ ನೀಡಿದರು. ನೇರವಾಗಿ ನನ್ನನ್ನು ಭೇಟಿ ಮಾಡಿ ಎಂದು ಕೆಲವರಿಗೆ ಹೇಳಿದರೆ ಇನ್ನುಳಿದವರಿಗೆ ಆಯಾ ಅಧಿಕಾರಿಗಳನ್ನು ಭೇಟಿ ಮಾಡಿ ಎಂದು ಸೂಚಿಸಿದರು. ಸಿಎಂ ತವರು ರಾಮನಗರ, ಚನ್ನಪಟ್ಟಣ, ಹಾಸನ, ಮಂಡ್ಯ, ಕಲಬುರಗಿ, ಮಂಗಳೂರು ಎಲ್ಲ ಕಡೆಯಿಂದ ಕರೆಗಳು ಬಂದವು.
ಸರಕಾರಿ ಶಾಲೆಯ ಶಿಕ್ಷಕರ ವರ್ಗಾವಣೆಯಲ್ಲಿನ ಕಷ್ಟ, ಗಂಡ-ಹೆಂಡತಿ ಒಂದೇ ಕಡೆ ಇರಲಾರದ ಸ್ಥಿತಿ, ಅತಿಥಿ ಉಪನ್ಯಾಸಕರ ನೇಮಕ ಎಲ್ಲ ವಿಚಾರಗಳಿಗೂ ಕುಮಾರಸ್ವಾಮಿ ಶಾಂತ ಚಿತ್ತವಾಗಿ ಉತ್ತರಿಸಿದರು. ಗದಗದಿಂದ ಕರೆ ಮಾಡಿದ ಗಂಗಾಧರ್ ಮತ್ತೊಮ್ಮೆ ಗ್ರಾಮ ವಾಸ್ತವ್ಯಕ್ಕೆ ಬರಬೇಕು, ಜನತಾ ದರ್ಶನ ಮಾಡಬೇಕು ಎಂಬ ಆಹ್ವಾನವೂ ಇದೇ ಕಾರ್ಯಕದಲ್ಲಿ ಬಂದಿತು.
ಸಾಲ ಮನ್ನಾ ಮಾಡಿದ್ದೇನೆ,, ಸುಸ್ತಿ ಸಾಲ ಮನ್ನಾ ಮಾಡಿದ್ದೇನೆ.. ರೈತರ ಹಿತ ಬಲಿಕೊಡುವ ಪ್ರಶ್ನೆಯೇ ಇಲ್ಲ ಎಂದುಪುನರುಚ್ಚಾರ ಮಾಡಿದ ಸಿಎಂ ಕಾವೇರಿ ವ್ಯಾಪ್ತಿಯ ಕೆರೆ ಕಟ್ಟೆ ತುಂಬಿಸುವ ಕೆಲಸ ಆರಂಭವಾಗುತ್ತದೆ ಎಂದು ಅಭಯ ನೀಡಿದರು. ಸುವರ್ಣ ನ್ಯೂಸ್ ಇನ್ನು ಪ್ರತಿ ಶನಿವಾರ ಹಲೋ ಮಿನಿಸ್ಟರ್ ಕಾರ್ಯಕ್ರಮ ನಡೆಸಿಕೊಡಲಿದ್ದು ನಿಮ್ಮ ಸಮಸ್ಯೆಗಳನ್ನು ನೇರವಾಗಿ ಸಂಬಂಧಿಸಿದ ಸಚಿವರಿಗೆ ತಿಳಿಸಬಹುದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.