ಸಂಪುಟ ವಿಸ್ತರಣೆ ಸರ್ಕಸ್, ಫೇಸ್‌ಬುಕ್‌ಗೆ ಕಾಲಿಟ್ಟ ಸುದೀಪ್; ಡಿ.11ರ ಟಾಪ್ 10 ಸುದ್ದಿ!

By Web Desk  |  First Published Dec 11, 2019, 5:13 PM IST

ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದಿ ಬಿಜೆಪಿಗೆ ಇದೀಗ ಹೊಸ ತಲೆನೋವು  ಶುರುವಾಗಿದೆ. ಎಲ್ಲರೂ ತನಗೂ ಮಂತ್ರಿ ಪದವಿ ಬೇಕು ಎಂದು ಸಿಎಂ ಯಡಿಯೂರಪ್ಪ ಹಿಂದೆ ಬಿದ್ದಿದ್ದಾರೆ. ಹೀಗಾಗಿ ಸಂಪುಟ ವಿಸ್ತರಣೆ ಕಗ್ಗಂಟಾಗಿದೆ. 2000 ರೂಪಾಯಿ ನೋಟ್ ಬ್ಯಾನ್ ಆಗುತ್ತಾ? ಈ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಸಾನಿಯಾ ತಂಗಿ ಅನಮ್ ಮಿರ್ಜಾ ಅದ್ದೂರಿ ಮೆಹಂದಿ ಕಾರ್ಯಕ್ರಮ, ಕುಚ್ಚ ಸದೀಪ್ ಫೇಸ್‌ಬುಕ್ ಖಾತೆ ಸೇರಿದಂತೆ ಡಿಸೆಂಬರ್ 11ರ ಟಾಪ್ 10 ಸುದ್ದಿ ಇಲ್ಲಿವೆ.


1) ಹೀಗಿದೆ ಹಾಲಿ Vs ಹೊಸ ಸಚಿವ ಸಂಪುಟದ ಜಾತಿ ಸಮೀಕರಣ; ಇದೇ ಅಣ್ಣ ರಾಜಕಾರಣ!

Latest Videos

undefined

ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ವಿಸ್ತರಣೆಯದ್ದೇ ಚರ್ಚೆ. ಬೇರೆ ಪಕ್ಷಗಳಿಂದ ವಲಸೆ ಬಂದು ನೂತನ ಶಾಸಕರಾಗಿ ಆಯ್ಕೆಯಾದವರು ಒಂದು ಕಡೆ, ಇಷ್ಟು ವರ್ಷ ಪಕ್ಷಕ್ಕಾಗಿ ದುಡಿದ  ಮೂಲ ಬಿಜೆಪಿಗರು ಇನ್ನೊಂದು ಕಡೆ. ಒಟ್ಟಿನಲ್ಲಿ ಸಚಿವ ಸಂಪುಟ ವಿಸ್ತರಣೆ ಬಿ.ಎಸ್. ಯಡಿಯೂರಪ್ಪಗೆ ಕಬ್ಬಿಣದ ಕಡಲೆಯಾಗಿದೆ. 


2) ಗುಜರಾತ್ ಗಲಭೆ: ಮೋದಿಗೆ ನಾನಾವತಿ ಆಯೋಗದ ಕ್ಲೀನ್‌ಚಿಟ್!

2002 ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ನ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಸರ್ಕಾರಕ್ಕೆ ನಾನಾವತಿ ಆಯೋಗ ಕ್ಲೀನ್‌ಚಿಟ್ ನೀಡಿದೆ. ವರದಿಯನ್ನು ಗುಜರಾತ್ ಗೃಹ ಸಚಿವ ಪ್ರದೀಪ್ ಸಿನ್ಹಾ ಜಡೇಜಾ, ಇಂದು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ.

3) ಕಾಂಗ್ರೆಸ್ ಗೆ ಮತ್ತೆ ರಾಹುಲ್ ಗಾಂಧಿ ಅಧ್ಯಕ್ಷ ?

ಅಖಿಲ ಭಾರತ ಕಾಂಗ್ರೆಸ್ ಸಮಿತಿಯನ್ನು ಜನವರಿ ಮಾಸಾಂತ್ಯದ ವೇಳೆಗೆ ಪುನರ್ ರಚನೆ ಮಾಡುವ ಉದ್ದೇಶವನ್ನು ಕಾಂಗ್ರೆಸ್ ಹೈಕಮಾಂಡ್ ಹೊಂದಿದೆ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಮತ್ತೆ ಎಐಸಿಸಿ ಅಧ್ಯಕ್ಷ ಸ್ಥಾನದ ಹೊಣೆ ಹೊರಬಹುದು ಎಂದು ಮೂಲಗಳು ತಿಳಿಸಿವೆ. 

4) ರಾಜ್ಯ ರಾಜಕೀಯಲ್ಲಿ ಬಿಗ್ ಟ್ವಿಸ್ಟ್: ಮೂರೂ ಡಿಸಿಎಂ ಹುದ್ದೆಗಳು ರದ್ದು?

ಹಾಲಿ ಇರುವ ಉಪಮುಖ್ಯಮಂತ್ರಿ ಹುದ್ದೆಗಳನ್ನೂ ರದ್ದುಪಡಿಸುವ ಬಗ್ಗೆ ಪಕ್ಷದ ವರಿಷ್ಠರನ್ನು ಕೋರಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಪಾಳೆಯ ಚಿಂತನೆ ನಡೆಸಿದೆ. ಸದ್ಯ ಮೂವರು ಉಪಮುಖ್ಯಮಂತ್ರಿಗಳಿದ್ದಾರೆ. ಹೀಗಾಗಿ ಈ ಸ್ಥಾನ ಅನರ್ಹರ ಪಾಲಾಗುವ ಸಾಧ್ಯತೆಗಳಿವೆ.

5) ಅಮ್ಮನ ಗುದ್ದಿದ ಕಾರು ಒದ್ದ ಪೋರ: ಪುಟಾಣಿಯ ಕೋಪದ ಮರೆಯಲ್ಲಿ ತಾಯಿ ಪ್ರೀತಿ!...

ಚೀನಾದ ಬಾಲಕನೊಬ್ಬ ದಿನಬೆಳಗಾಗುತ್ತಿದ್ದಂತೆಯೇ ಹೀರೋ ಆಗಿದ್ದಾನೆ. ರಸ್ತೆ ದಾಟುವ ವೇಳೆ ತಾಯಿಗೆ ಕಾರು ಗುದ್ದಿದ ಕಾರಣಕ್ಕೆ ಕಾರಿಗೆ ಪುಟ್ಟ ಬಾಲ ಒದ್ದು ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾನೆ. 

6) ‘ರಾಷ್ಟ್ರೀಯ ಪಕ್ಷಗಳಿಂದ ಅಧಿಕಾರ ಶಿಫ್ಟ್ : ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಜೆಡಿಎಸ್’

ರಾಜ್ಯದಲ್ಲಿ ನಡೆದ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಜೆಡಿಎಸ್ ಶೂನ್ಯ ಫಲಿತಾಂಶ ದಾಖಲಿಸಿದ್ದರು, ಜೆಡಿಎಸ್ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

7) ಸಾನಿಯಾ ತಂಗಿಯ ಅದ್ಧೂರಿ ಮೆಹೆಂದಿ ಕಾರ್ಯಕ್ರಮ; ಅಜರ್ ಮಗನ ಜೊತೆ ಮದುವೆ!

ಭಾರತದ  ಟೆನಿಸ್ ತಾರೆ ಸಾನಿಯಾ ಮಿರ್ಜಾ ತಂಗಿ ಅನಮ್ ಮಿರ್ಜಾ ಹಾಗೂ ಟೀಂ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಪುತ್ರ ಮೊಹಮ್ಮದ್ ಅಸಾದುದ್ದೀನ್ ಮದುವೆ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಇದೀಗ ಅನಮ್ ಮಿರ್ಜಾ ಮನೆಯಲ್ಲಿ ಅದ್ಧೂರಿಯಾಗಿ ಮೆಹಂದಿ ಕಾರ್ಯಕ್ರಮ ನಡೆದಿದೆ. 

8) ಫೇಸ್‌ಬುಕ್‌ ಲೋಕಕ್ಕೆ ಕಾಲಿಟ್ಟ ಕಿಚ್ಚ ಸುದೀಪ್!

ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್ ಟ್ವಿಟರ್‌ನಲ್ಲಿ ಹೆಚ್ಚು ಸಕ್ರಿಯರಾಗಿದ್ದರು. ತಮ್ಮ ಸಿನಿಮಾಗಳ ಅಪ್‌ಡೇಟ್, ಅಭಿಮಾನಿಗಳ ಪ್ರಶ್ನೆಗಳಿಗೆ ಅಲ್ಲಿಯೇ ಪ್ರತಿಕ್ರಿಯಿಸುತ್ತಿದ್ದರು.  ಇದೀಗ ಫೇಸ್‌ಬುಕ್‌ಗೆ ಕಾಲಿಟ್ಟಿದ್ದಾರೆ. 

9) ಬ್ಯಾನ್ ಆಗುತ್ತಾ 2000 ರು. ನೋಟು?: ಕೇಂದ್ರ ಸರ್ಕಾರದ ಸ್ಪಷ್ಟನೆ

ಡಿಮಾನಿಟೈಸೇಶನ್ ಬಳಿಕ 2000 ರೂಪಾಯಿ ಮುಖಬೆಲೆಯ ನೋಟುಗಳು ಚಲಾವಣೆಗೆ ಬಂದಿತ್ತು. ಇದೀಗ ಈ 2000 ರೂ ನೋಟುಗಳು ಬ್ಯಾನ್ ಆಗಲಿದೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ. ಈ ಕುರಿತು ಕೇಂದ್ರ ಸರ್ಕಾರ ವಿವರಣೆ ನೀಡಿದೆ.

10) ಹೊಸ ವರ್ಷಕ್ಕೆ ಕಾರು ಖರೀದಿಸಲು ಬಯಸಿದರೆ, ಚೇಂಜ್ ಮಾಡಿ ಪ್ಲಾನ್!

ಹೊಸ ಹೊಸ ವರ್ಷಕ್ಕೆ ಹೊಸ ವಸ್ತು, ಹೊಸ ವಾಹನ ಸೇರಿದಂತೆ ಹೊಸತು ಖರೀದಿ ಸಾಮಾನ್ಯ. 2020ರಲ್ಲಿ ಹೊಸ ವಾಹನ ಖರೀದಿ ಪ್ಲಾನ್ ನಿಮ್ಮದಾಗಿದ್ದರೆ, ಕೊಂಚ ಬದಲಾಯಿಸುವುದು ಒಳಿತು. ಕಾರಣ ಹೊಸ ವರ್ಷ ನಿಮ್ಮ ಜೇಬಿಗೆ ಕತ್ತರಿ ಹಾಕಲಿದೆ.

click me!