BJP ಸಭೆಯಲ್ಲಿ ಕಾಂಗ್ರೆಸ್ ನಾಯಕ, ಚಂಡಮಾರುತ ಭೀತಿಯಲ್ಲಿ ಕರ್ನಾಟಕ; ನ.24ರ ಟಾಪ್ 10 ಸುದ್ದಿ!

By Suvarna NewsFirst Published Nov 24, 2020, 4:58 PM IST
Highlights

BJP ಸಚಿವರು, ಸಂಸದರಿಗೆ ಸಂತೋಷ್ ವಾರ್ನಿಂಗ್ ನೀಡಿದ್ದಾರೆ. ದಕ್ಷಿಣ ಭಾರತದ ಮೇಲೆ ಅವಳಿ ಚಂಡಮಾರುತ ದಾಳಿ ಭೀತಿ ಎದುರಾಗಿದೆ. ಸದ್ಯವೆ ಬಿಗ್ ಬಾಸ್ ಮನೆ ಪ್ರವೇಶದ ಸೂಚನೆ ಸಿಕ್ಕಿದೆ. ಬಿಜೆಪಿ ನಾಯಕರ ಸಭೆಯಲ್ಲಿ ಕಾಂಗ್ರೆಸ್‌ ನಾಯಕ ಹಾಜರಾಗೋ ಮೂಲಕ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಶುರುವಾಗುತ್ತಿದೆ ಕನ್ನಡ ಬಿಗ್ ಬಾಸ್, ಆರಂಭಿಕ 2 ಟೆಸ್ಟ್ ಪಂದ್ಯದಿಂದ ರೋಹಿತ್ ಶರ್ಮಾ ಔಟ್ ಸೇರಿದಂತೆ ನವೆಂಬರ್ 24ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

BJP ಸಚಿವರು, ಸಂಸದರಿಗೆ BLಸಂತೋಷ್ ವಾರ್ನಿಂಗ್ : ಒಪ್ಪಿಕೊಳ್ಳಲಾಗಲ್ಲ ಎಂದು ಎಚ್ಚರಿಕೆ...

ಬಿಜೆಪಿ ಸಚಿವರು ಹಾಗೂ ಸಂಸದರಿಗೆ ಬಿಜೆಪಿ ಸಂಘಟನಾ ಕಾರ್ಯದರ್ಶಿ ಎಚ್ಚರಿಕೆ ನೀಡಿದ್ದಾರೆ. ಹೀಗೆಲ್ಲಾ ಮಾಡಿದ್ರೆ ನಿಮ್ಮನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ

ದಕ್ಷಿಣ ಭಾರತದ ಮೇಲೆ ಅವಳಿ ಚಂಡಮಾರುತ ದಾಳಿ, 4 ರಾಜ್ಯಗಳಲ್ಲಿ ಮಳೆಯ ಮುನ್ನೆಚ್ಚರಿಕೆ...

ನೈಋುತ್ಯ ಅರಬ್ಬಿ ಸಮುದ್ರದಲ್ಲಿ ‘ಗತಿ’ ಹೆಸರಿನ ಚಂಡಮಾರುತ ಎದ್ದಿದ್ದು, ನವೆಂಬರ್‌ 24 ಹಾಗೂ 25ಕ್ಕೆ ಪುದುಚೇರಿ ಹಾಗೂ ಕಾರೈಕಲ್‌ ಮಧ್ಯೆ ಅಪ್ಪಳಿಸುವ ಸಂಭವವಿದೆ. 

ಟೀಂ ಇಂಡಿಯಾಗೆ ಆಘಾತ; ಮೊದಲೆರಡು ಟೆಸ್ಟ್‌ ಪಂದ್ಯಗಳಿಂದ ರೋಹಿತ್-ಇಶಾಂತ್ ಔಟ್..!...

ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಹಾಗೂ ವೇಗದ ಬೌಲರ್‌ ಇಶಾಂತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಿಂದ ಹೊರಬಿದ್ದಿದ್ದಾರೆ. 

ದೆಹಲಿ ಗ್ಯಾಂಗ್ ರೇಪ್ ಆಧರಿತ ವೆಬ್‌ ಶೋಗೆ ಸಿಕ್ತು ಅಂತಾರಾಷ್ಟ್ರೀಯ ಎಮ್ಮಿ ಪ್ರಶಸ್ತಿ...

ದೇಶವನ್ನೇ ಬೆಚ್ಚಿ ಬೀಳಿಸಿದ್ದ ದೆಹಲಿ ಗ್ಯಾಂಗ್ ರೇಪ್ ಘಟನೆಯಾಧರಿತ ಸಿರೀಸ್‌ಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಈ ಮೂಲಕ ಈ ಪ್ರಶಸ್ತಿ ಪಡೆದ ಮೊದಲ ಹಿಂದಿ ವೆಬ್ ಸಿರೀಸ್ ಎಂಬ ಕೀರ್ತಿಗೂ ಪಾತ್ರವಾಗಿದೆ

ಬಿಗ್ ಬಾಸ್ ಮಾತುಕತೆ,  ಅತಿದೊಡ್ಡ ರಿಯಾಲಿಟಿ ಶೋ ಯಾವಾಗಿನಿಂದ?...

ಕೊರೋನಾ ಕಾರಣಕ್ಕೆ ಈ ಬಾರಿ ಕನ್ನಡದ ಬಿಗ್ ಬಾಸ್ ಸಹ ಮುಂದಕ್ಕೆ ಹೋಗಿತ್ತು. ಆದರೆ ಸಿದ್ಧತೆಗಳು ಮಾತ್ರ ಸದ್ದಿಲ್ಲದೆ ನಡೆಯುತ್ತಿದ್ದು ವೇದಿಕೆ ಸಿದ್ಧವಾಗಿದೆ.  ಕಲರ್ಸ್ ಕನ್ನಡದ ಬಿಜಿನಸ್ ಹೆಡ್  ಪರಮೇಶ್ವರ ಗುಂಡ್ಕಲ್ ಕಿಚ್ಚ ಸುದೀಪ್ ಜತೆ ಸಂವಾದ ನಡೆಸುತ್ತಿರುವ ಪೋಟೋ ಹಂಚಿಕೊಂಡಿದ್ದು ಸದ್ಯವೆ ಬಿಗ್ ಬಾಸ್ ಮನೆ ಪ್ರವೇಶದ ಸೂಚನೆ ನೀಡಿದ್ದಾರೆ.

8T ಬೆನ್ನಲ್ಲೇ ಒನ್‌ಪ್ಲಸ್‌ನಿಂದ ಹೊಸ ವರ್ಷದಲ್ಲಿ 9 ಪ್ರೋ ಫೋನ್?...

ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಪ್ರಭುತ್ವ ಸಾಧಿಸಿರುವ ಒನ್‌ಪ್ಲಸ್ ಇತ್ತೀಚೆಗಷ್ಟೇ 8ಟಿ ಫೋನ್‌ ಬಿಡುಗಡೆ ಮಾಡಿತ್ತು. ಇದೀಗ ವರದಿಯಾಗುತ್ತಿರುವ ಸುದ್ದಿಗಳ ಪ್ರಕಾರ, ಮುಂದಿನ ವರ್ಷದ ಮಾರ್ಚ್‌ನಲ್ಲಿ ಒನ್‌ಪ್ಲಸ್ 9 ಸೀರಿಸ್ ಸ್ಮಾರ್ಟ್‌ಫೋನ್ ಬಿಡುಗಡೆಯಾಗುವ ಸಾಧ್ಯತೆ ಇದೆ.

ನಿರೀಕ್ಷೆಗೂ ಮೀರಿ ಕುಸಿದ ಚಿನ್ನದ ದರ, ಗ್ರಾಹಕರಿಗೆ ಸಂಭ್ರಮ: ಇಲ್ಲಿದೆ ಇಂದಿನ ಗೋಲ್ಡ್ ರೇಟ್!...

ಕೊರೋನಾ ಹಾವಳಿ ಹೆಚ್ಚಿದಾಗಿನಿಂದಲೂ ಚಿನ್ನದ ದರ ಗ್ರಾಹಕರನ್ನು ಕಂಗಾಲುಗೊಳಿಸಿದೆ. ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದ ಗೋಲ್ಡ್ ರೇಟ್ ಬಳಿಕ ಕೊಂಚ ಕುಸಿದಿತ್ತಾದರೂ ಹಾವೇಣಿ ಆಟ ಮುಂದುವರೆಸಿತ್ತು. ದೀಪಾವಳಿ ವೇಳೆಗೆ ಕಡಿಮೆಯಾಗಬಹುದೆಂದು ಭಾವಿಸಿದ್ದರೂ ಈ ನಿರೀಕ್ಷೆ ಹುಸಿಯಾಗಿತ್ತು. 

ದೇಶದಲ್ಲಿನ್ನು ಎಲೆಕ್ಟ್ರಿಕ್ ವಾಹನ ಚಾರ್ಚಿಂಗ್ ಸುಲಭ; ಕೇಂದ್ರದ ಮಹತ್ವದ ಹೆಜ್ಜೆ!...

ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ವಾಹನ ಮೇಲೆ ಸಬ್ಸಿಡಿ ನೀಡುತ್ತಿದೆ. ಈ ಮೂಲಕ ಎಲೆಕ್ಟ್ರಿಕ್ ವಾಹನಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಇದೀಗ ಎಲೆಕ್ಟ್ರಿಕ್ ವಾಹನ ಖರೀದಿಸಿದವರಿಗೆ ಇದೀಗ ಕೇಂದ್ರ ಮತ್ತೊಂದು ಕೂಡುಗೆ ನೀಡುತ್ತಿದೆ.

ಶಾಸಕಿ ಅನಿತಾ ಕುಮಾರಸ್ವಾಮಿ ಬಾಯಿಂದ ಇದೆಂಥಾ ಮಾತು..!...

ಸ್ಥಳೀಯರು ಶಾಸಕಿ ಅನಿತಾ ಕುಮಾರಸ್ವಾಮಿ ಕೆಲಸಗಳಿ ಅಸಮಾಧನಗೊಂಡಿದ್ದು, ಈ ಬಗ್ಗೆ ರಾಮನಗರಕ್ಕಿಂದು ಆಗಮಸಿದ ಶಾಸಕಿ ಮಾಧ್ಯಮಗಳ ಮೇಲೆ ಬೇಸರಗೊಂಡಿದ್ದಾರೆ. 

ಬಿಜೆಪಿ ನಾಯಕರ ಸಭೆಯಲ್ಲಿ ಕಾಂಗ್ರೆಸ್‌ ಹಾಜರ್: ಹಲ್‌-ಚಲ್ ಎಬ್ಬಿಸಿದ ರಮೇಶ್ ಜಾರಕಿಹೊಳಿ...

ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಮತ್ತೆ ಕೆಲ  ಬಿಜೆಪಿ ನಾಯಕರು ಸಭೆ ಸೇರಿದ್ದಾರೆ. ಈ ಸಭೆಯಲ್ಲಿ ಕಾಂಗ್ರೆಸ್ ನಾಯಕ ಹಾಜರು ಇರುವುದು ರಾಜ್ಯ 

click me!