ರಿಚಿ ಮೆಹ್ತಾ ನಿರ್ದೇಶನದ ದೆಹಲಿ ಕ್ರೈಂ ಸಿರೀಸ್‌ಗೆ ಅಂತಾರಾಷ್ಟ್ರೀಯ ಎಮ್ಮಿ ಪ್ರಶಸ್ತಿ ಬಂದಿದೆ. ಶೆಫಾಲಿ ಶಾ ಪ್ರಮುಖ ಪಾತ್ರದಲ್ಲಿ ನಟಿಸಿದ ಈ ಶೋ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಿತ್ತು. ಈ ಸಿನಿಮಾ ಅಂತಾರಾಷ್ಟ್ರೀಯ ಎಮ್ಮಿ ಪ್ರಶಸ್ತಿ ಪಡೆದ ಮೊದಲ ಹಿಂದಿ ಭಾಷೆಯ ಸಿರೀಸ್ ಆಗಿದೆ.

ದೆಹಲಿ ಗ್ಯಾಂಗ್‌ರೇಪ್ ಘಟನೆ ಆಧರಿತ ಸಿರೀಸ್‌ ಬೆಸ್ಟ್ ಡ್ರಾಮಾ ಸಿರೀಸ್ ಆಗಿ ಹೊರಹೊಮ್ಮಿದೆ. ಈ ಕ್ಯಾಟಗರಿಯಲ್ಲಿ ಅರ್ಜಟೈಂನಾದ ದಿ ಬ್ರೋನ್ಸ್ ಗಾರ್ಡನ್, ಜರ್ಮನಿಯ ಚರಿತೆ, ಯುಕೆಯ ಕ್ರಿಮಿನಲ್ ನಾಮಿನಿಯಾಗಿತ್ತು.

ಮಕ್ಕಳು ಅಂದ್ರೆ ಬರೀ ಕಿರಿಕಿರಿ ಅಂತಾರೆ ಈ ನಟಿ..!

ಇದೀಗ ನೆಟ್ಟಿಗರು ದೆಹಲಿ ಕ್ರೈಂ ತಂಡದ ಕಲಾವಿದರಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಟ್ವಿಟರ್‌ನಲ್ಲಿಯೂ ಇದು ಟ್ರೆಂಡ್ ಆಗಿದೆ. ಈ ಸಿರೀಸ್‌ನಲ್ಲಿ ಮನ ನೋಯಿಸುವ ದೃಶ್ಯಗಳಿದ್ದರೂ ಇದು ಅತ್ಯಂತ ಒಳ್ಳೆಯ ಸಿರೀಸ್ ಆಗಿತ್ತು ಎಂದಿದ್ದಾರೆ ನಟ್ಟಿಗರು