ದೇಶದಲ್ಲಿ 4 ಲಕ್ಷ ಭಿಕ್ಷುಕರು: ಬಂಗಾಳ ನಂ.1 ಸ್ಥಾನದಲ್ಲಿದ್ದರೆ ಕರ್ನಾಟಕ ಎಷ್ಟನೇ ಸ್ಥಾನ?

By Suvarna Web DeskFirst Published Mar 22, 2018, 8:48 AM IST
Highlights

ದೇಶದಲ್ಲಿ ಭಿಕ್ಷಾಟನೆ ನಿರ್ಮೂಲನಕ್ಕೆ ಸರ್ಕಾರಗಳು ಸಾಕಷ್ಟುಕಾರ್ಯಕ್ರಮಗಳನ್ನು ರೂಪಿಸಿದ್ದರೂ, ಭಿಕ್ಷಾಟನೆ ಕಾನೂನು ಬಾಹಿರ ಎಂಬ ನಿಯಮ ರೂಪಿಸಿದ್ದರೂ, ದೇಶದಲ್ಲೂ ಈಗಲೂ 4 ಲಕ್ಷಕ್ಕೂ ಅಧಿಕ ಭಿಕ್ಷುಕರಿದ್ದಾರೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ. ಸಾಮಾಜಿಕ ನ್ಯಾಯ ಸಚಿವ ಥಾವರ್‌ಚಂದ್‌ ಗೆಹ್ಲೋಟ್‌ ಈ ಮಾಹಿತಿ ನೀಡಿದ್ದಾರೆ.

ನವದೆಹಲಿ (ಮಾ. 22): ದೇಶದಲ್ಲಿ ಭಿಕ್ಷಾಟನೆ ನಿರ್ಮೂಲನಕ್ಕೆ ಸರ್ಕಾರಗಳು ಸಾಕಷ್ಟುಕಾರ್ಯಕ್ರಮಗಳನ್ನು ರೂಪಿಸಿದ್ದರೂ, ಭಿಕ್ಷಾಟನೆ ಕಾನೂನು ಬಾಹಿರ ಎಂಬ ನಿಯಮ ರೂಪಿಸಿದ್ದರೂ, ದೇಶದಲ್ಲೂ ಈಗಲೂ 4 ಲಕ್ಷಕ್ಕೂ ಅಧಿಕ ಭಿಕ್ಷುಕರಿದ್ದಾರೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ. ಸಾಮಾಜಿಕ ನ್ಯಾಯ ಸಚಿವ ಥಾವರ್‌ಚಂದ್‌ ಗೆಹ್ಲೋಟ್‌ ಈ ಮಾಹಿತಿ ನೀಡಿದ್ದಾರೆ.

ಬೇರೆ ರಾಜ್ಯಗಳಿಗೆ ಹೋಲಿಸಿದಲ್ಲಿ, ಈ ವಿಷಯದಲ್ಲಿ ಕರ್ನಾಟಕದಲ್ಲಿ ಕೊಂಚ ಸಮಾಧಾನಕರ ಸ್ಥಿತಿಯಿದೆ. ದೇಶದ 29 ರಾಜ್ಯಗಳು, ಏಳು ಕೇಂದ್ರಾಡಳಿತ ಪ್ರದೇಶಗಳಲ್ಲಿ ಭಿಕ್ಷುಕರ ಸಂಖ್ಯೆಯಲ್ಲಿ ಕರ್ನಾಟಕ 29ನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಒಟ್ಟು 12,270 ಭಿಕ್ಷುಕರಿದ್ದು, ಅವರಲ್ಲಿ 6,436 ಪುರುಷರು, 5,834 ಮಹಿಳೆಯರು ಎಂದು ವರದಿ ಹೇಳಿದೆ.

ದೇಶದಲ್ಲಿ ಒಟ್ಟು 4,13,670 ಭಿಕ್ಷುಕರಿದ್ದು, ಅವರಲ್ಲಿ 2,21,673 ಪುರುಷರು, 1,91,997 ಮಹಿಳೆಯರು. ಪಶ್ಚಿಮ ಬಂಗಾಳದಲ್ಲಿ ಅತ್ಯಧಿಕ 81,000 ಭಿಕ್ಷುಕರಿದ್ದರೆ, ಲಕ್ಷದ್ವೀಪದಲ್ಲಿ ಅತ್ಯಂತ ಕಡಿಮೆ ಇಬ್ಬರು ಭಿಕ್ಷುಕರು ಮಾತ್ರ ಇದ್ದಾರೆ. ಪಶ್ಚಿಮ ಬಂಗಾಳದ ನಂತರ ಉತ್ತರ ಪ್ರದೇಶ (65835), ಆಂಧ್ರಪ್ರದೇಶ (30218), ಬಿಹಾರ (29723), ಮಧ್ಯಪ್ರದೇಶ (28695) ಮತ್ತು ರಾಜಸ್ಥಾನ (25853) ಕ್ರಮವಾಗಿ ಟಾಪ್‌ 5 ಸ್ಥಾನ ಪಡೆದಿವೆ.

click me!