ನನ್ನ ಅಜ್ಜಿಗೆ ಮಾಡಿದ ಉಪಕಾರ ಮರೆಯಲ್ಲ: ರಾಹುಲ್ ಗಾಂಧಿ

By Suvarna Web DeskFirst Published Mar 22, 2018, 8:40 AM IST
Highlights

ನಾಲ್ಕು ದಶಕದ ಹಿಂದೆ ಇದೇ ಮೈದಾನದಲ್ಲಿ ನಿಂತು ನನ್ನ ಅಜ್ಜಿ ನಿಮ್ಮ ನೆರವು ಕೋರಿದ್ದರು. ಅಜ್ಜಿಯ ಅತ್ಯಂತ ಸಂಕಷ್ಟದ ಸಂದರ್ಭದಲ್ಲಿ ನೀವು ಅವರಿಗೆ ನೆರವಾದಿರಿ, ಶಕ್ತಿ ನೀಡಿದಿರಿ. ಇದನ್ನು ಜೀವವಿರುವವರೆಗೂ ನಾನು ಮರೆಯೋದಿಲ್ಲ.  1978ರಲ್ಲಿ ಚಿಕ್ಕಮಗಳೂರು ಲೋಕಸಭೆ ಚುನಾವಣೆಯಲ್ಲಿ ರಾಜಕೀಯ ಪುನರ್ಜನ್ಮ ಪಡೆದ ಇಂದಿರಾ ಗಾಂಧಿ ಹಾಗೂ ಚಿಕ್ಕಮಗಳೂರು ಜನತೆಯ ಸಂಬಂಧವನ್ನು ನೆನೆದು ಭಾವುಕರಾದ ರಾಹುಲ್‌ ಗಾಂಧಿ ಹೇಳಿದ ನುಡಿಗಳಿವು.

ಚಿಕ್ಕಮಗಳೂರು (ಮಾ. 22): ನಾಲ್ಕು ದಶಕದ ಹಿಂದೆ ಇದೇ ಮೈದಾನದಲ್ಲಿ ನಿಂತು ನನ್ನ ಅಜ್ಜಿ ನಿಮ್ಮ ನೆರವು ಕೋರಿದ್ದರು. ಅಜ್ಜಿಯ ಅತ್ಯಂತ ಸಂಕಷ್ಟದ ಸಂದರ್ಭದಲ್ಲಿ ನೀವು ಅವರಿಗೆ ನೆರವಾದಿರಿ, ಶಕ್ತಿ ನೀಡಿದಿರಿ. ಇದನ್ನು ಜೀವವಿರುವವರೆಗೂ ನಾನು ಮರೆಯೋದಿಲ್ಲ.  1978ರಲ್ಲಿ ಚಿಕ್ಕಮಗಳೂರು ಲೋಕಸಭೆ ಚುನಾವಣೆಯಲ್ಲಿ ರಾಜಕೀಯ ಪುನರ್ಜನ್ಮ ಪಡೆದ ಇಂದಿರಾ ಗಾಂಧಿ ಹಾಗೂ ಚಿಕ್ಕಮಗಳೂರು ಜನತೆಯ ಸಂಬಂಧವನ್ನು ನೆನೆದು ಭಾವುಕರಾದ ರಾಹುಲ್‌ ಗಾಂಧಿ ಹೇಳಿದ ನುಡಿಗಳಿವು.

ಚಿಕ್ಕಮಗಳೂರು ಜಿಲ್ಲಾ ಆಟದ ಮೈದಾನದಲ್ಲಿ ಬುಧವಾರ ಕಾಂಗ್ರೆಸ್‌ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ನನ್ನ ಅಗತ್ಯ ನಿಮಗೆ ಬಂದಾಗ ಕೇವಲ ಒಂದು ಸಂಜ್ಞೆಯನ್ನು ಮಾಡಿ ಸಾಕು ನಾನು ನಿಮ್ಮ ಮುಂದೆ ಹಾಜರಾಗುತ್ತೇನೆ. ಈ ಕ್ಷೇತ್ರದೊಂದಿಗೆ ನನ್ನ ಕುಟುಂಬದ ಸಂಬಂಧ ಅತ್ಯಂತ ಪುರಾತನವಾದದ್ದು. ನನ್ನ ಅಜ್ಜಿಗೆ ನೀವು ಶಕ್ತಿ ನೀಡಿದಿರಿ. ಆ ಶಕ್ತಿಯನ್ನು ಬಳಸಿಕೊಂಡು ಇಂದಿರಾ ಅವರು ಬಡವರು, ಶೋಷಿತರು ಹಾಗೂ ರೈತರ ಕಲ್ಯಾಣಕ್ಕಾಗಿ ದುಡಿದರು. ನನ್ನ ಆಲೋಚನೆಯೂ ಸಹಾ ನನ್ನ ಅಜ್ಜಿಯ ಆಲೋಚನೆಯಂತೆಯೇ ಇದೆ. ನನಗೆ ನೀವು ಶಕ್ತಿ ತುಂಬಿದರೆ, ಅಜ್ಜಿಯಂತೆಯೇ ಶೋಷಿತರು, ಬಡವರ ಕಲ್ಯಾಣಕ್ಕಾಗಿ ಆ ಶಕ್ತಿಯನ್ನು ಧಾರೆಯೆರೆಯುವೆ. ಬಿಜೆಪಿ ಈ ದೇಶವನ್ನು ವಿಭಜಿಸಲು ಯತ್ನಿಸುತ್ತಿದೆ. ನೀವು ನೀಡುವ ಶಕ್ತಿಯನ್ನು ನಾನು ದೇಶವನ್ನು ಜೋಡಿಸಲು ಬಳಸುವೆ ಎಂದು ಹೇಳಿದರು.

click me!