ಮಂಡ್ಯಕ್ಕೆ ಅಂಬಿ ಪಾರ್ಥಿವ ಶರೀರ: ಪ್ರತಿಭಟನೆ-ನಿಷೇಧಾಜ್ಞೆ ಜಾರಿ

By Web DeskFirst Published Nov 25, 2018, 9:32 AM IST
Highlights

ಅಂಬಿ ಅವರ ಪಾರ್ಥಿವ ಶರೀರವನ್ನು ಕೆಲಗಂಟೆಗಳ ಮಟ್ಟಿಗಾದರೂ ಮಂಡ್ಯಕ್ಕೆ ತರಬೇಕು ಎನ್ನುವ ಆಗ್ರಹ ಜೋರಾಗಿದೆ. ಒಂದು ವೇಳೆ ಅಂಬಿ ಅವರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತರದಿದ್ದಾರೆ, ನಾನು ಸತ್ತರೂ ಚಿಂತೆಯಿಲ್ಲ, ಎದೆಗೆ ಚಾಕು ಚುಚ್ಚಿಕೊಳ್ಳುತ್ತೇನೆಂದು ಮೈಸೂರಿನ ಅಭಿಮಾನಿ ಮಹದೇವು ಒತ್ತಾಯಿಸಿದ್ದಾರೆ.

ಮಂಡ್ಯ[ನ.25] ಒಂದೆರಡು ಗಂಟೆಗಳ ಮಟ್ಟಿಗಾದರೂ ಅಂಬರೀಷ್ ಅವರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತರಬೇಕು ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.

’ಅಂಬ್ರೀಶಣ್ಣ ಬೈದ್ರು’ ಎಂದು ಖುಷಿ ಪಡುತ್ತಿದ್ದ ಅಭಿಮಾನಿಗಳು!

ಮಂಡ್ಯದ ಸಂಜಯ ವೃತ್ತದಲ್ಲಿ ಅಭಿಮಾನಿಗಳು ಜಮಾಯಿಸುತ್ತಿದ್ದು, ಅಂಬಿ ಅವರ ಪಾರ್ಥಿವ ಶರೀರವನ್ನು ಕೆಲಗಂಟೆಗಳ ಮಟ್ಟಿಗಾದರೂ ಮಂಡ್ಯಕ್ಕೆ ತರಬೇಕು ಎನ್ನುವ ಆಗ್ರಹ ಜೋರಾಗಿದೆ. ಒಂದು ವೇಳೆ ಅಂಬಿ ಅವರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತರದಿದ್ದಾರೆ, ನಾನು ಸತ್ತರೂ ಚಿಂತೆಯಿಲ್ಲ, ಎದೆಗೆ ಚಾಕು ಚುಚ್ಚಿಕೊಳ್ಳುತ್ತೇನೆಂದು ಮೈಸೂರಿನ ಅಭಿಮಾನಿ ಮಹದೇವು ಒತ್ತಾಯಿಸಿದ್ದಾರೆ.

"

ಅಭಿಮಾನಿಗಳೇ ಗಮನಿಸಿ: ಅಂತಿಮ ದರ್ಶನ ಸ್ಟುಡಿಯೋನಲ್ಲಲ್ಲ, ಸ್ಟೇಡಿಯಂನಲ್ಲಿ

ಇನ್ನು ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮಂಡ್ಯ ಜಿಲ್ಲೆಯಾದ್ಯಂತ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಅಂಬಿಗೆ ಸಂತಾಪ ಸೂಚಿಸುವ ಸಂದರ್ಭದಲ್ಲಿ ಹೆಚ್ಚಿನ ಜನ ಸೇರುವ ಸಾಧ್ಯತೆಯಿದ್ದು, ಈ ವೇಳೆ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆಯಾಗಿ ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ 144 ಸೆಕ್ಷನ್ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.

ಬಸ್‌ ದುರಂತಕ್ಕೆ ಸಂತಾಪ ಹೇಳಿದ್ದ 'ಮಂಡ್ಯದ ಗಂಡು' ಅಂಬಿ!

ಇದೇವೇಳೆ ಸಂಜಯ ವೃತ್ತದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಅಂಬಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಡ್ಯದಲ್ಲಿ ಅಂಬಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡದ್ದಕ್ಕೆ ಕುಮಾರಸ್ವಾಮಿ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಅಲ್ಲದೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಾಠ ಕಲಿಸುವುದಾಗಿ ಅಂಬಿ ಅಭಿಮಾನಿಗಳು ಎಚ್ಚರಿಕೆ ನೀಡಿದ್ದಾರೆ. 

"

click me!