'ಸಿದ್ದರಾಮಯ್ಯ ಮತ್ತೆ ಸಿಎಂ ಆಗೋದು ನಿಶ್ಚಿತ'

By Web DeskFirst Published May 8, 2019, 5:08 PM IST
Highlights

ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಅನ್ನೋದು ಎಲ್ಲರ ಆಸೆ| ಕರ್ನಾಟಕದ ಜನಕ್ಕೆ ಈಗ ತಪ್ಪಿನ ಅರಿವಾಗಿದೆ| ಮುಂದೆ ಸಿದ್ದರಾಮಯ್ಯ ಸಿಎಂ ಆಗೋದು ನಿಶ್ಚಿತ

ಹಾವೇರಿ[ಮೇ.08]: ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಲಿ ಎಂಬ ಕೂಗು ಕಾಂಗ್ರೆಸ್ ವಲಯದಲ್ಲಿ ಜೊರಾದ ಬೆನ್ನಲ್ಲಿ ಸ್ವಾಮೀಜಿಯೊಬ್ಬರು ಮುಂದೆ ಸಿದ್ದರಾಮಯ್ಯ ಸಿಎಂ ಆಗೋದು ನಿಶ್ಚಿತ ಎಂದಿದ್ದಾರೆ. ಸದ್ಯ ಈ ಹೇಳಿಕೆ ಭಾರೀ ಸಂಚಲನ ಮೂಡಿಸಿದೆ.

'ಸಿಎಂ' ಸಿದ್ದರಾಮಯ್ಯ ಪರ ಹೇಳಿಕೆ ಬರುತ್ತಿರೋದೇಕೆ? ಇಲ್ಲಿವೆ 5 ಕಾರಣಗಳು

ಹೌದು ಕಾಗಿನೆಲೆ ಕನಕ ಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಇಂತಹುದ್ದೊಂದು ಹೆಳಿಕೆಯನ್ನು ನೀಡಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಬೇಕೆಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಸ್ವಾಮೀಜಿಗಳು 'ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಅನ್ನೋದು ಎಲ್ಲರ ಆಸೆ. ಕರ್ನಾಟಕದ ಜನಕ್ಕೆ ಈಗ ತಪ್ಪಿನ ಅರಿವಾಗಿದೆ. ನಾವು ಸಿದ್ದರಾಮಯ್ಯನವರನ್ನ ಗೆಲ್ಲಿಸದೇ ತಪ್ಪು ಮಾಡಿದ್ದಿವಿ ಅಂತಾ ಅರಿವಾಗಿದೆ. ಈಗ ಎಲ್ರೂ ಮುಂದಿನ ಸಿಎಂ ಆಗಿ ಸಿದ್ದರಾಮಯ್ಯನವರೇ ಬರಬೇಕು ಅಂತಿದಾರೆ. ಮುಂದೆ ಸಿದ್ದರಾಮಯ್ಯ ಸಿಎಂ ಆಗೋದು ನಿಶ್ಚಿತ' ಎಂದಿದ್ದಾರೆ.

ಸಿದ್ದರಾಮಯ್ಯ ಪರ ಹೆಚ್ಚಿದ ಕೂಗು; ಈಗ ಡಿಕೆಶಿ ಸರದಿ!

ಇಷ್ಟೇ ಅಲ್ಲದೇ ನಮ್ಮ ಸಮುದಾಯದವರ ಆಶೀರ್ವಾದ ಸಿದ್ದರಾಮಯ್ಯನವರ ಮೇಲೆ ಸದಾ ಇರತ್ತೆ ಎನ್ನುವ ಮೂಲಕ ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ.

ಈಗಾಗಲೇ ಕಾಂಗ್ರೆಸ್ ವಲಯದಲ್ಲಿ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಲಿ ಎಂಬ ಕೂಗು ಜೋರಾಗಿದೆ.ಕೈ ಪಕ್ಷದ ಘಟಾನುಘಟಿ ನಾಯಕರಾದ ಡಿ. ಕೆ ಶಿವಕುಮಾರ್, ಗೃಹ ಸಚಿವ ಎಂ. ಬಿ ಪಾಟೀಲ್, ಸತೀಶ್ ಜಾರಕಿಹೊಳಿ ಸೇರಿದಂತೆ ಈ ಇಂಗಿತ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಮಾಸ್ ಲೀಡರ್, ನಮ್ಮ ಹೋರಾಟವೇ ಬೇರೆ ಇದೆ ಎಂದ ಮಿನಿಸ್ಟರ್

'ಸಿದ್ದರಾಮಯ್ಯ ಮತ್ತೆ ಸಿಎಂ’; ಸುಧಾ‘ಸ್ವರ’ಕ್ಕೆ ಧ್ವನಿಗೂಡಿಸಿದ ಸಚಿವರು!

ಮತ್ತೆ ಸಿದ್ದರಾಮಯ್ಯಗೆ ಸಿಗಲಿದೆಯಾ ಮುಖ್ಯಮಂತ್ರಿ ಪಟ್ಟ?

click me!