
ಬೆಂಗಳೂರು[ಮೇ.08]: SSLC ಫಲಿತಾಂಶ ಈಗಾಗಲೇ ಪ್ರಕಟಗೊಂಡಿದೆ. ಆದರೀಗ ಪರೀಕ್ಷೆಯಲ್ಲಿ ಮೌಲ್ಯಮಾಪಕರ ಚೆಲ್ಲಾಟದಿಂದಾಗಿ ಟಾಪರ್ ಅಗ್ಬೇಕಿದ್ದ ವಿದ್ಯಾರ್ಥಿನಿ ಫೇಲ್ ಆಗಿದ್ದು, ಬಾಲಕಿಯನ್ನು ಆತಂಕಕ್ಕೀಡು ಮಾಡಿದೆ.
SSLC ಪರೀಕ್ಷೆಯಲ್ಲಿ ಗಾರೆ ಕೆಲಸ ಮಾಡುವವರ ಮಗಳು ಶಾಲಿನಿ ಟಾಪರ್ ಆಗಬೇಕಿತ್ತು, ಆದರೆ ಮೌಲ್ಯಮಾಪಕರು ಮಾಡಿದ ಎಡವಟ್ಟಿನಿಂದಾಗಿ 509 ಅಂಕ ಪಡೆದ್ರೂ ವಿದ್ಯಾರ್ಥಿನಿ ಫೇಲ್ ಎಂದು ಫಲಿತಾಂಶ ಬಂದಿದೆ. ಮರು ಮೌಲ್ಯಮಾಪನದಿಂದ ಈ ಎಡವಟ್ಟು ಬೆಳಿಕಿಗೆ ಬಂದಿದ್ದು, ಸದ್ಯ ವಿದ್ಯಾರ್ಥಿನಿ ಶಾಲಿನಿ ನಾಗವಾರದ ಖಾಸಗಿ ಶಾಲೆಯ ಟಾಪರ್ ಆಗಿ ಹೊರ ಹೊಮ್ಮಿದ್ದಾಳೆ.
ದ್ವಿತೀಯ ಭಾಷೆ ಕನ್ನಡ ಪರೀಕ್ಷೆಯಲ್ಲಿ ಶಾಲಿನಿ 75 ಅಂಕಗಳನ್ನ ಪರಿಗಣಿಸದೆಯೇ ಬಿಟ್ಟು ಬಿಟ್ಟಿದ್ದಾರೆ. 17 ಪುಟ ಉತ್ತರ ಬರೆದ ವಿದ್ಯಾರ್ಥಿನಿಗೆ 75 ಅಂಕ ಗಳಿಸಿದರೂ, ಮೌಲ್ಯಮಾಪಕರು ಮಾತ್ರ ಕೇವಲ 17 ಅಂಕ ನೀಡಿದ್ದಾರೆ.ಉತ್ತಮ ಅಂಕ ಗಳಿಸುವ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿನಿ ಫೇಲ್ ಆಗಿದ್ದೇನೆಂದು ತಿಳಿದು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾಳೆ
.ಮಗಳ ಪರಿಸ್ಥಿತಿ ಗಮನಿಸಿದ ಪೋಷಕರು ಆಕೆಯ ಉತ್ತರ ಪತ್ರಿಕೆಯನ್ನು ತರಿಸಿಕೊಂಡಾಗ ಮೌಲ್ಯಮಾಪಕರ ಬೇಜವ್ದಾರಿ ಬೆಳಕಿಗೆ ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.