
ನವದೆಹಲಿ (ಅ. 02): ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ, ಸೋಮವಾರ ಕಡೆಯದಾಗಿ ತಮ್ಮ ಕರ್ತವ್ಯ ನಿರ್ವಹಿಸಿದರು. ಲೆಕ್ಕಾಚಾರದ ಪ್ರಕಾರ ಅವರು ಮಂಗಳವಾರ ನಿವೃತ್ತರಾಗಬೇಕಿತ್ತಾದರೂ, ಮಂಗಳವಾರ ಗಾಂಧೀ ಜಯಂತಿಗೆ ಸರ್ಕಾರಿ ರಜೆ ಇರುವ ಹಿನ್ನೆಲೆಯಲ್ಲಿ ಸೋಮವಾರ ಅವರ ಕಡೆಯ ಕರ್ತವ್ಯದ ದಿನವಾಗಿತ್ತು. ಬುಧವಾರ ನೂತನ ಸಿಜೆಐ ಆಗಿ ನ್ಯಾ.ರಂಜನ್ ಗೊಗೋಯ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಸೋಮವಾರ ಕೇವಲ 25 ನಿಮಿಷಗಳಲ್ಲಿ ಕಲಾಪ ಮುಗಿಸಿದ ನ್ಯಾ.ಮಿಶ್ರಾ ಈ ವೇಳೆ ಭಾವುಕರಾದರು. ಇದೇ ವೇಳೆ ನ್ಯಾಯವಾದಿಯೊಬ್ಬರು, ನ್ಯಾ.ಮಿಶ್ರಾ ಕುರಿತು ‘ಸಾವಿರಾರು ವರ್ಷ ಬಾಳಿ’ ಎಂಬ ಹಾಡು ಹಾಡಿದಾಗ, ಅವರನ್ನು ಅರ್ಧಕ್ಕೇ ತಡೆದ ಅವರು, ಈಗ ನಾನು ಹೃದಯದಿಂದ ಪ್ರತಿಕ್ರಿಯಿಸುತ್ತಿದ್ದೇನೆ, ಸಂಜೆ ಮನಸ್ಸಿನಿಂದ ಪ್ರತಿಕ್ರಿಯಿಸಲಿದ್ದೇನೆ ಎಂದರು.
ಮಿಶ್ರಾ ಹಿರಿಮೆ: 2017, ಆ.28ರಂದು ಸಿಜೆಐ ಆಗಿ ಅಧಿಕಾರ ಸ್ವೀಕರಿಸಿದ್ದ ನ್ಯಾ.ಮಿಶ್ರಾ, ನಿವೃತ್ತಿಯ ಅಂಚಿನಲ್ಲಿ ಕಳೆದ ವಾರ ಕೇವಲ ಐದು ದಿನಗಳಲ್ಲಿ 20 ಪ್ರಮುಖ ಪ್ರಕರಣಗಳ ತೀರ್ಪು ನೀಡಿ ಗಮನ ಸೆಳೆದಿದ್ದರು. ಇದರ ಜೊತೆಗೆ ಮೂಲಭೂತ ಹಕ್ಕುಗಳ ವ್ಯಾಪ್ತಿ ವಿಸ್ತರಿಸಿದುದು, ನ್ಯಾಯಾಂಗ ಸ್ವಾತಂತ್ರ್ಯತೆಯ ಅಧಿಕಾರ ಎತ್ತಿಹಿಡಿದುದು, ಆಧಾರ್ ಷರತ್ತುಬದ್ಧಗೊಳಿಸಿದುದು, ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅವಕಾಶ, ವ್ಯಭಿಚಾರ ಅಪರಾಧವಲ್ಲ, ಸಲಿಂಗಕಾಮ ಅಪರಾಧವಲ್ಲ ಮುಂತಾದ ಹಲವು ಪ್ರಮುಖ ತೀರ್ಪುಗಳಿಗೆ ನ್ಯಾ.ಮಿಶ್ರಾ ಪ್ರಸಿದ್ಧರಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.