
ಬೆಂಗಳೂರು (ಅ. 02): ಸಾಲ ಮನ್ನಾ ಯೋಜನೆಗೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಇನ್ನೂ 10 ದಿನಗಳಿಗೆ ವಿಸ್ತರಿಸಿ ಸೋಮವಾರ ಸಹಕಾರ ಇಲಾಖೆ ನಿಬಂಧಕರು ಸುತ್ತೋಲೆ ಹೊರಡಿಸಿದ್ದಾರೆ. ಈ ಗಡುವು ವಿಸ್ತರಣೆ ರೈತರಿಗೂ ನೆಮ್ಮದಿ ತಂದಿದೆ.
ಸಹಕಾರ ಸಂಘಗಳಲ್ಲಿ ಒಂದು ಲಕ್ಷ ರು.ವರೆಗೆ ಸಾಲ ಮನ್ನಾ ಯೋಜನೆಯಲ್ಲಿ ಫಲಾನುಭವಿ ರೈತರಿಂದ ಪಡೆಯಬೇಕಾದ ಅರ್ಜಿ ಮತ್ತು ಸ್ವಯಂ ದೃಢೀಕರಣ ಪತ್ರದ ನಮೂನೆಯನ್ನು ಮತ್ತು ಸೆಪ್ಟೆಂಬರ್ 10ಕ್ಕೆ ಹೊರ ಬಾಕಿ ಹೊಂದಿದ ಎಲ್ಲಾ ರೈತರ ಮಾಹಿತಿಯನ್ನು ತಂತ್ರಾಂಶದಲ್ಲಿ ಅಳವಡಿಸಲು ಸಹಕಾರ ಇಲಾಖೆ ಸೂಚಿಸಿತ್ತು.
ಸಂಘದಲ್ಲಿ ಲಭ್ಯವಿರುವ ಮಾಹಿತಿಯನ್ನು ಕೂಡಲೇ ಎಕ್ಸೆಲ್‌ಶೀಟ್‌ನಲ್ಲಿ ಸಿದ್ಧಪಡಿಸಿಕೊಳ್ಳಲು ಸೂಚಿಸಲಾಗಿದೆ. ಪೂರ್ವ ನಿಗದಿತ ಸೆಪ್ಟೆಂಬರ್‌ವರೆಗೆ ಗಡುವು ಮುಗಿಯುವ ಸಾಲಗಳಿಗೆ ರೈತರಿಂದ ಅರ್ಜಿ ಮತ್ತು ಸ್ವಯಂ ದೃಢೀಕರಣ ಪಡೆಯಲು ಅಕ್ಟೋಬರ್ 15 ವರೆಗೆ ಕಾಲಾವಕಾಶ ನೀಡಲಾಗಿತ್ತು. ಈಗ ಈ ಗಡುವು ಮುಗಿದ ನಂತರವೂ ಅರ್ಜಿ ಸಲ್ಲಿಸಲು ಅವಕಾಶ ಕೊಡಲಾಗಿದೆ. ಸಾಲ ಮನ್ನಾಕ್ಕೆ ರೈತರಿಂದ ಅರ್ಜಿ ಪಡೆಯಲು ಅಕ್ಟೋಬರ್ 25ವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಸಹಕಾರ ಸಂಘಗಳ ನಿಬಂಧಕ ಎಂ.ಕೆ.ಅಯ್ಯಪ್ಪ ಸುತ್ತೋಲೆ ಹೊರಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.