(ವಿಡಿಯೋ) ಜಡ್ಜ್ ಸಮ್ಮತಿಯಿಂದ ಕೋರ್ಟ್'ನಲ್ಲಿ ತನ್ನ ತಂದೆಗೆ ತಾನೇ ಶಿಕ್ಷೆಯ ಪ್ರಮಾಣ ಘೋಷಿಸಿದ 5 ವರ್ಷದ ಮಗ!

Published : Jun 01, 2017, 03:17 PM ISTUpdated : Apr 11, 2018, 12:55 PM IST
(ವಿಡಿಯೋ) ಜಡ್ಜ್ ಸಮ್ಮತಿಯಿಂದ ಕೋರ್ಟ್'ನಲ್ಲಿ ತನ್ನ ತಂದೆಗೆ ತಾನೇ ಶಿಕ್ಷೆಯ ಪ್ರಮಾಣ ಘೋಷಿಸಿದ 5 ವರ್ಷದ ಮಗ!

ಸಾರಾಂಶ

ಪ್ರತಿಬಾರಿ ನಮಗೆ ನ್ಯಾಯಾಲಯದಲ್ಲಿ ಮಕ್ಕಳು ನೋಡಲು ಸಿಗುವುದಿಲ್ಲ. ಆದರೆ ಇಲ್ಲೊಬ್ಬ 5 ವರ್ಷದ ಬಾಲಕನಿಗೆ ತನ್ನ ತಂದೆಯೊಂದಿಗೆ ನ್ಯಾಯಾಲಯಕ್ಕೆ ಹೋಗಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಯಾಕೆಂದರೆ ಆತನ ತಂದೆಯ ಮೇಲೆ ಅನುಮತಿ ಇಲ್ಲದ ಸ್ಥಳದಲ್ಲಿ ಕಾರು ಪಾರ್ಕಿಂಗ್ ಮಾಡಿದ ಆರೋಪವಿತ್ತು. ಆದರೆ ಜಡ್ಜ್ ಕೋರ್ಟ್ ರೂಂನಲ್ಲಿ ಈ ಪುಟ್ಟ ಬಾಲಕನನ್ನು ನೋಡಿದ್ದೇ ತಡ, ಅವನನ್ನು ತನ್ನ ಬಳಿ(ನ್ಯಾಯ ಪೀಠ) ಕರೆಸಿಕೊಂಡಿದ್ದಾರೆ. ಅಲ್ಲದೇ ಆತನ ತಂದೆಗೆ ಶಿಕ್ಷೆ ವಿಧಿಸುವ ಅವಕಾಶವನ್ನೂ ನೀಡಿದ್ದಾರೆ. ಸದ್ಯ ಈ ಬಾಲಕ ನೀಡಿದ ಉತ್ತರ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ಆತ ಶಿಕ್ಷೆ ಏನು ಅಂತೀರಾ? ಇಲ್ಲಿದೆ ಉತ್ತರ.

ನವದೆಹಲಿ(ಜೂ.01): ಪ್ರತಿಬಾರಿ ನಮಗೆ ನ್ಯಾಯಾಲಯದಲ್ಲಿ ಮಕ್ಕಳು ನೋಡಲು ಸಿಗುವುದಿಲ್ಲ. ಆದರೆ ಇಲ್ಲೊಬ್ಬ 5 ವರ್ಷದ ಬಾಲಕನಿಗೆ ತನ್ನ ತಂದೆಯೊಂದಿಗೆ ನ್ಯಾಯಾಲಯಕ್ಕೆ ಹೋಗಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಯಾಕೆಂದರೆ ಆತನ ತಂದೆಯ ಮೇಲೆ ಅನುಮತಿ ಇಲ್ಲದ ಸ್ಥಳದಲ್ಲಿ ಕಾರು ಪಾರ್ಕಿಂಗ್ ಮಾಡಿದ ಆರೋಪವಿತ್ತು. ಆದರೆ ಜಡ್ಜ್ ಕೋರ್ಟ್ ರೂಂನಲ್ಲಿ ಈ ಪುಟ್ಟ ಬಾಲಕನನ್ನು ನೋಡಿದ್ದೇ ತಡ, ಅವನನ್ನು ತನ್ನ ಬಳಿ(ನ್ಯಾಯ ಪೀಠ) ಕರೆಸಿಕೊಂಡಿದ್ದಾರೆ. ಅಲ್ಲದೇ ಆತನ ತಂದೆಗೆ ಶಿಕ್ಷೆ ವಿಧಿಸುವ ಅವಕಾಶವನ್ನೂ ನೀಡಿದ್ದಾರೆ. ಸದ್ಯ ಈ ಬಾಲಕ ನೀಡಿದ ಉತ್ತರ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ಆತ ಶಿಕ್ಷೆ ಏನು ಅಂತೀರಾ? ಇಲ್ಲಿದೆ ಉತ್ತರ.

ಇಂತಹುದ್ದೊಂದು ಘಟನೆ ನಡೆದಿದ್ದು ಅಮೆರಿಕಾದ ರೋಡ್ ಮಹಾದ್ವೀಪದಲ್ಲಿ. ಇಲ್ಲಿನ ನ್ಯಾಯಾಲಯದ ನ್ಯಾಯಧೀಶ 80 ವರ್ಷದ ಫ್ರ್ಯಾಂಕ್ ಕ್ಯಾಫ್ರಿಯೋ ಅರೋಪಿಯ ಮಗನಿಗೆ ಶಿಕ್ಷೆ ವಿಧಿಸುವ ಅಧಿಕಾರ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ತಂದೆಯ ವಿಚಾರಣೆ ನಡೆಸುತ್ತಿದ್ದಾಗ ಬಾಲಕನನ್ನು ತನ್ನ ಬಳಿ ಕರೆಸಿಕೊಂಡ ನ್ಯಾಯಾಧೀಶ ಮೊದಲಿಗೆ ಆತನ ಬಳಿ ಸಾಮಾನ್ಯ ವಿಚಾರಗಳನ್ನು ಕೇಳಿದ್ದಾರೆ. ಬಳಿಕ ನಿಯಮ ಉಲ್ಲಂಘಿಸಿ ಆತನ ತಂದೆಗೆ ಶಿಕ್ಷೆ ನೀಡುವಲ್ಲಿ ತನಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ ಹಾಗೂ ಮಗನೆದುರು ಮೂರು ಆಯ್ಕೆಗಳನ್ನಿಟ್ಟಿದ್ದಾರೆ.

ಈ ಕುರಿತಾಗಿ ಪ್ರಶ್ನಿಸಿದ ನ್ಯಾಯಾಧೀಶ 'ನಾನು ನಿನ್ನ ತಂದೆಗೆ 90 ಡಾಲರ್'ನ ದಂಡ ವಿಧಿಸಲೇ ಅಥವಾ 30 ಡಾಲರ್ ದಂಡ ವಿಧಿಸಲೇ ಇಲ್ಲವಾದಲ್ಲಿ ಅವರನ್ನು ಯಾವುದೇ ದಂಡ ವಿಧಿಸದೇ ಹೋಗಲು ಬಿಡಲೇ?' ಎಂದು ಕೇಳಿದ್ದಾರೆ. ಇದಕ್ಕೆ ಬಾಲಕ ನೀಡಿದ ಉತ್ತರ ನ್ಯಾಯಾಲಯದಲ್ಲಿ ನೆರೆದಿದ್ದವರನ್ನು ಅಚ್ಚರಿಗೀಡು ಮಾಡಿತ್ತು. 'ತಂದೆಗೆ 30 ಡಾಲರ್ರ್ ದಂಡ ವಿಧಿಸಿ' ಎಂದು ಬಾಲಕ ತಿಳಿಸಿದ್ದಾನೆ. ಆತನ ಉತ್ತರ ಕೇಳಿದ ಜಡ್ಜ್ ಕೂಡಾ ಖುಷಿಯಾಗಿ 'ನೀನು ನಿಜಕ್ಕೂ ಓರ್ವ ಅತ್ಯುತ್ತಮ ಜಡ್ಜ್' ಎಂದು ಶ್ಲಾಘಿಸಿದ್ದಾರೆ.

ಸಾಮಾಜಿಕ ಜಾಲಾತಾಣಗಳಲ್ಲೂ ವಿಡಿಯೋ ನೋಡಿದ ವೀಕ್ಷಕರು ಈತ ನೀಡಿದ ತೀರ್ಪು ಕೇಳಿ ಆನಂದಪಟ್ಟಿದ್ದಾರೆ. ಬಾಲಕ ಯಾವುದೇ ಪೂರ್ವಾಗ್ರಹಪೀಡಿತನಾಗದೆ ತೀರ್ಪು ನೀಡಿರುವುದೇ ಇವರ ಆನಂದಕ್ಕೆ ಕಾರಣವಾಗಿದೆ. ಬಾಲಕನಿಗೆ ತನ್ನ ತಂದೆಗೆ ಯಾವುದೇ ದಂಡ ವಿಧಿಸದಿರುವ ಅವಕಾಶವೂ ಇತ್ತು ಆದರೂ ಆತ ತನ್ನ ತಂದೆಯ ಪರ ನಿಲ್ಲದೇ 30ಡಾಲರ್ ದಂಡ ವಿಧಿಸುವಂತೆ ಸೂಚಿಸಿದ್ದ. ಇನ್ನೊಂದೆಡೆ 90 ಡಾಲರ್ ವಿಧಿಸುವ ಅವಕಾಶವೂ ಇತ್ತು. ದಿಟ್ಟತನದ ಉತ್ತರದಿಂದ ತಂದೆಗೆ ನಿಯಮಗಳನ್ನು ಪಾಲಿಸುವುದು ಎಷ್ಟು ಅಗತ್ಯ ಎಂಬುವುದನ್ನು ಕಲಿಸುವುದರೊಂದಿಗೆ ದಂಡದ ಭಾರ ಬೀಳದಿರುವಂತೆಯೂ ನೋಡಿಕೊಂಡಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜೀವ ನೀಡಿದವಳೇ ಉಸಿರು ತೆಗೆದಳು: ಅಡ್ಡದಾರಿ ಹಿಡಿದ ತಾಯಿ: ಬುದ್ದಿ ಹೇಳಿದ 16ರ ಹರೆಯದ ಮಗಳ ಕೊಲೆ
ಹೊಸ ವರ್ಷದಲ್ಲಿ ಸಂಪುಟ ವಿಸ್ತರಣೆ ಖಚಿತ; ನಾನೂ ಸಚಿವ ಸ್ಥಾನದ ಆಕಾಂಕ್ಷಿ-ಶಾಸಕ ಡಾ. ಅಜಯ್ ಸಿಂಗ್