
ತುಮಕೂರು(ಜೂ.01): ಜೀವನದಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಕೆಲವರು ತಪ್ಪು ಮಾಡಿ ಜೈಲಿಗೆ ಹೋಗುತ್ತಾರೆ. ಆದರೆ ಅಲ್ಲಿ ಅವರ ಮನಪರಿವರ್ತನೆ ಮಾಡಿ ಮತ್ತೆ ತಪ್ಪು ಮಾಡದ ಹಾಗೆ ಮಾಡಬೇಕಿರುವ ಜೈಲು ಸಿಬ್ಬಂದಿ ಅವರನ್ನೇ ದುರುಪಯೋಗ ಪಡಿಸಿಕೊಂಡರೆ? ಹೌದು ಅಂತಹ ಒಂದು ಅನಾಹುತಕಾರಿ ಘಟನೆ ಗೃಹ ಸಚಿವರ ತವರು ಜಿಲ್ಲೆ ತುಮಕೂರಿನ ಮಹಿಳಾ ಕಾರಾಗೃಹದಲ್ಲಿ ನಡೆಯುತ್ತಿದೆ.
ಈ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಗಳು ಸುರಕ್ಷಿತವಾಗಿ ಇರಬೇಕು ಎಂದರೆ ಕಾರಾಗೃಹದ ಅಧೀಕ್ಷಕಿ ಮನೆ ಬಟ್ಟೆ ಒಗೆಯಬೇಕು. ಉತ್ತಮವಾದ ಸೆಲ್ ಸಿಗಬೇಕೆಂದರೆ ಅವರ ಮನೆಯ ಕಸ ಗುಡಿಸಬೇಕು. ಮಹಿಳಾ ಕಾರಾಗೃಹದ ಅಧೀಕ್ಷಕಿ ಲತಾ, ಕೈದಿಗಳಿಂದ ಇಷ್ಟೆಲ್ಲಾ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಕೈದಿಗಳು ಬಟ್ಟೆ ಒಗೆಯುತ್ತಿರುವ ಜೊತೆಗೆ ಮೂಟೆಯನ್ನು ಹೊತ್ತುಕೊಂಡು ಹೋಗಿ ತೊಟ್ಟಿಗೆ ಹಾಕುತ್ತಿರುವ ದೃಶ್ಯ ಸುವರ್ಣ ನ್ಯೂಸ್'ಗೆ ಲಭ್ಯವಾಗಿದೆ. ಕೈದಿಗಳಿಂದ ಮನೆ ಕೆಲಸಗಳನ್ನು ಮಾಡುವಂತಿಲ್ಲ ಎಂದು ನಿಯಮವಿದ್ದರೂ ಇಲ್ಲಿ ಮಾತ್ರ ಆ ನಿಯಮಗಳನ್ನು ಗಾಳಿಗೆ ತೂರಲಾಗಿದೆ.
ಇನ್ನು ಬೇಸತ್ತ ಇದೇ ಮಹಿಳಾ ಕಾರಾಗೃಹದ ಜೈಲರ್ ಸೈನಾಜ್ ಮತ್ತೊಬ್ಬ ಜೈಲರ್ ಅಧಿಕಾರಿ ಜೊತೆ ಮಾತನಾಡಿರುವ ಆಡಿಯೋ ಲಭ್ಯವಾಗಿದ್ದು ಪ್ರಭಲ ಸಾಕ್ಷಿ ಸಿಕ್ಕಂತಾಗಿದೆ. ಅಡಿಯೋದಲ್ಲಿ ಸೈನಾಜ್ ಇಂಚು ಇಂಚಾಗಿ ಲತಾ ದರ್ಬಾರ್ ಬಿಚ್ಚಿಟ್ಟು ನೋವು ತೋಡಿಕೊಂಡಿದ್ದು ಮಹಿಳಾ ಕಾರಾಗೃಹದಲ್ಲಿ ಮಹಿಳೆಯಿಂದಲೇ ಈ ರೀತಿಯ ಕಿರುಕುಳ ನಡೆಯುತ್ತಿರುವುದು ಜೈಲಿನ ನಾಲ್ಕುಗೋಡೆಗಳ ಮಧ್ಯದ ಸತ್ಯ ಹೊರಬಂದಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.