ಕುಮಾರ ಸ್ವಾಮಿ ಜೆಡಿಎಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತಾರಾ ?

By Suvarna Web DeskFirst Published Dec 7, 2016, 3:26 PM IST
Highlights

ಏಕೆಂದರೆ ಇನ್ನು ಒಂದೂವರೆ ವರ್ಷದಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದೆ.

ಬೆಂಗಳೂರು(ಡಿ.07): ಕರ್ನಾಟಕ ಘಟಕದ ಜೆಡಿಎಸ್'ನ ಅಧ್ಯಕ್ಷ ಸ್ಥಾನದಿಂದ ಕುಮಾರ ಸ್ವಾಮಿ ಕೆಳಗಿಳಿಯುತ್ತಾರಾ ? ಇಂತಹದೊಂದು ಪ್ರಶ್ನೆ ಜೆಡಿಎಸ್'ನಲ್ಲಿ ಚರ್ಚೆಯಾಗುತ್ತದೆ. ಏಕೆಂದರೆ ಡಿ.9 ರಂದು ಕರ್ನಾಟಕ ಜಾತ್ಯಾತೀತ ಜನತಾದಳದ ನೂತನ ಅಧ್ಯಕ್ಷರ ನೇಮಕ ನಡೆಯಲಿದ್ದು, ಪ್ರಸ್ತುತ ಅಧ್ಯಕ್ಷರಾಗಿರುವ ಕುಮಾರಸ್ವಾಮಿಯವರೆ ಮುಂದುವರಿಯುತ್ತಾರಾ ಅಥವಾ ಬೇರೆಯವರಿಗೆ ಬಿಟ್ಟುಕೊಡುತ್ತಾರಾ ನಾಡಿದ್ದು ಫೈನಲ್ ಆಗಲಿದೆ.

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಅವರ ಒಲವು ಮಗನ ಮೇಲಿದೆಯೇ ಇಲ್ಲವೇ ಬೇರೆಯವರನ್ನು ರಾಜ್ಯ ಘಟಕದಲ್ಲಿ ಕೂರಿಸುತ್ತಾರೆಯೇ ಎಂಬುದು ಸದ್ಯದ ಪ್ರಶ್ನೆಯಾಗಿದೆ? ಏಕೆಂದರೆ ಇನ್ನು ಒಂದೂವರೆ ವರ್ಷದಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಂತದಲ್ಲಿ ನಾಯಕರನ್ನು ಒಗ್ಗೂಡಿಸಿ ಪಕ್ಷವನ್ನು ಅಧಿಕಾರಕ್ಕೆ ತರುವ ಚಾರ್ಮ್ ಇರುವುದು ಕುಮಾರಸ್ವಾಮಿ ಅವರಿಗೆ ಮಾತ್ರ.  

ಹೆಚ್ಡಿಕೆ ಹುಬ್ಬಳ್ಳಿಯಲ್ಲಿ ಸ್ವಂತ ಮನೆಯನ್ನು ಮಾಡಿ ಕೆಲವು ದಿನಗಳ ಹಿಂದಷ್ಟೆ ಗೃಹಪ್ರವೇಶವನ್ನು ನೆರವೇರಿಸಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್'ಗೆ ನೆಲೆ ಇಲ್ಲದ ಕಾರಣ ಪಕ್ಷವನ್ನು ಭದ್ರಪಡಿಸುವುದ್ದಕ್ಕಾಗಿ ಹೆಚ್ಚಿನ ಒಲವನ್ನು ಅವರು ಅಲ್ಲಿ ತೋರಿಸುತ್ತಿದ್ದಾರೆ.

ಬೇರೆಯವರಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟು ಸಾಮಾನ್ಯ ಕಾರ್ಯಕರ್ತರಾಗಿ ಪಕ್ಷವನ್ನು ಸಂಘಟಿಸಿ ಜೆಡಿಎಸ್ ಅಧಿಕಾರಕ್ಕೆ ತರುತ್ತಾರೋ ಅಲ್ಲವೇ ತಾವೇ ಮುಂದುವರೆದುಕೊಂಡು ಜೆಡಿಎಸ್'ಅನ್ನು ಗಟ್ಟಿಗೊಳಿಸುತ್ತಾರೆ ಇನ್ನೆರಡು ದಿನಗಳಲ್ಲಿ ತಿಳಿಯಲಿದೆ.

click me!