ಡಿ.5ರ ಬೆಳಗ್ಗೆಯೇ ಮೃತಪಟ್ಟಿದ್ದರೇ ಜಯಲಲಿತಾ..? ಅಣ್ಣಾಡಿಎಂಕೆ ಟ್ವಿಟ್ಟರ್ ಬಿಚ್ಚಿಟ್ಟ ಸತ್ಯ

By suvarna web deskFirst Published Dec 7, 2016, 3:12 PM IST
Highlights

ಜಯಲಲಿತಾ ಸಾವಿನ ಬೆನ್ನಲ್ಲೇ ಎಐಎಡಿಎಂಕೆ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿತ್ತು. ಜಯಾ ಸಾವಿನ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ಪನ್ನೀರ್ ಸೆಲ್ವಂ ಆಯ್ಕೆ ವಿರೋಧ ಎದುರಾಗಿತ್ತು. ಕೊನೆಯುಸಿರೆದು ಮಲಗಿದ್ದ ಜಯಾ ಎದುರೇ ಅಧಿಕಾರಕ್ಕಾಗಿ ಕಿತ್ತಾಟ ಶುರುವಾಗಿತ್ತು. ಸಚಿವರಾದ ತಂಬಿದೊರೈ, ಎಡಪ್ಪಾಡಿ ಪಳನಿಸ್ವಾಮಿ ಸೇರಿ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಮಧ್ಯಪ್ರವೇಶಿಸಿದ ವೆಂಕಯ್ಯ ನಾಯ್ಡು ವಿವಾದ ಬಗೆಹರಿಸಿದ್ದರು.

ಚೆನ್ನೈ(ಡಿ.07):  ತಮಿಳುನಾಡು ಸಿಎಂ ಜಯಲಲಿತಾರ ಸಾವಿನ ಸುದ್ದಿಯನ್ನ ಡಿಸೆಂಬರ್ 5ರ ರಾತ್ರಿ 11.30ರ ಸುಮಾರಿಗೆ ಘೋಷಣೆ ಮಾಡಲಾಯ್ತು.  ಆದರೆ, ಬೆಳಗ್ಗೆ 14.45ರ ಸುಮಾರಿಗೆ ಅಣ್ಣಾಡಿಎಂಕೆ ಟ್ವಿಟ್ಟರ್`ನಲ್ಲಿ ಜಯಲಲಿತಾ ಮೃತಪಟ್ಟಿರುವುದಾಗಿ ಟ್ವೀಟ್ ಮಾಡಲಾಗಿದೆ. ಹಾಗಾದರೆ, ಜಯಲಲಿತಾ ಬೆಳಗ್ಗೆಯೇ ಮೃತಪಟ್ಟಿದ್ದರೂ ಘೋಷಣೆ ವಿಳಂಬವಾಗಿದ್ದೇಕೆ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದಾಗ  ಜಯಲಲಿತಾ ಸಾವಿನ ಸುದ್ದಿ ಘೋಷಣೆ ವಿಳಂಬಕ್ಕೆ ಭಿನ್ನಮತವೇ ಕಾರಣ ಎಂಬ ಆಘಾತಕಾರಿ ಸುದ್ದಿ ಬೆಳಕಿಗೆ ಬಂದಿದೆ.

ಜಯಲಲಿತಾ ಸಾವಿನ ಬೆನ್ನಲ್ಲೇ ಎಐಎಡಿಎಂಕೆ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿತ್ತು. ಜಯಾ ಸಾವಿನ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ಪನ್ನೀರ್ ಸೆಲ್ವಂ ಆಯ್ಕೆ ವಿರೋಧ ಎದುರಾಗಿತ್ತು. ಕೊನೆಯುಸಿರೆದು ಮಲಗಿದ್ದ ಜಯಾ ಎದುರೇ ಅಧಿಕಾರಕ್ಕಾಗಿ ಕಿತ್ತಾಟ ಶುರುವಾಗಿತ್ತು. ಸಚಿವರಾದ ತಂಬಿದೊರೈ, ಎಡಪ್ಪಾಡಿ ಪಳನಿಸ್ವಾಮಿ ಸೇರಿ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಮಧ್ಯಪ್ರವೇಶಿಸಿದ ವೆಂಕಯ್ಯ ನಾಯ್ಡು ವಿವಾದ ಬಗೆಹರಿಸಿದ್ದರು.

ಜಯಾ ಸಾವಿನ ಸುತ್ತ ಶಶಿಕಲಾ ಹುತ್ತ: ಜಯಲಲಿತಾ ಬದುಕಿದ್ದಾರೆ ಎಂದೇ ಕಥೆ ಹೆಣೆದಿದ್ದ ಶಶಿಕಲಾ ಡಿಸೆಂಬರ್​ 5ರ ಬೆಳಗ್ಗೆ 11 ಗಂಟೆಗೆ ಶಾಸಕರೊಂದಿಗೆ ಸಭೆ ನಡೆಸಿ, ಎಲ್ಲ ಶಾಸಕರಿಂದ 3 ಪುಟಗಳ ಖಾಲಿ ಪತ್ರಕ್ಕೆ ಸಹಿ ಪಡೆದಿದ್ದರು ಎನ್ನಲಾಗಿದೆ. ಇದಾದ ಬಳಿಕ ತಮ್ಮ ಆಪ್ತ ವಲಯದ 5 ಸಚಿವರೊಂದಿಗೆ ಶಶಿಕಲಾ ರಹಸ್ಯ ಸಭೆ ನಡೆಸಿದ್ದರು.ಅಧಿಕಾರ ಹಂಚಿಕೆ ಮಾತುಕತೆ ಮುಗಿಯುವವರೆಗೂ ಜಯಾ ಸಾವಿನ ಸುದ್ದಿ ಬಹಿರಂಗಪಡಿಸಲಿಲ್ಲ ಎನ್ನಲಾಗಿದೆ.

click me!