ಪ್ರಜಾತಂತ್ರದಲ್ಲಿ ರಾಜ್ಯಶಕ್ತಿಗಿಂತ ಜನಶಕ್ತಿ ದೊಡ್ಡದು: ಮೋದಿ

By Suvarna Web DeskFirst Published Dec 7, 2016, 2:56 PM IST
Highlights

 ದೇಶದ ಜನತೆ ಕೇಂದ್ರ ಸರ್ಕಾರದ ನೋಟು ಅಮಾನ್ಯ ಕ್ರಮವನ್ನು ಬೆಂಬಲಿಸಿರುವುದನ್ನು ಪುನರಾವರ್ತಿಸಿ, ನಮ್ಮ ಸರ್ಕಾರ ಜನಶಕ್ತಿಗೆ ಮನ್ನಣೆ ನೀಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ನವದೆಹಲಿ (ಡಿ.07): ದೇಶದ ಜನತೆ ಕೇಂದ್ರ ಸರ್ಕಾರದ ನೋಟು ಅಮಾನ್ಯ ಕ್ರಮವನ್ನು ಬೆಂಬಲಿಸಿರುವುದನ್ನು ಪುನರಾವರ್ತಿಸಿ, ನಮ್ಮ ಸರ್ಕಾರ ಜನಶಕ್ತಿಗೆ ಮನ್ನಣೆ ನೀಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ನೋಟು ನಿಷೇಧದ ಬಗ್ಗೆ ರಾಜ್ಯ ಸಭೆಯಲ್ಲಿ ಚರ್ಚಿಸಲು ಭಾಗವಹಿಸದ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿ ಈ ಮೂಲಕ ಅವರ ಬಣ್ಣ ಬಯಲಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ್ಯಶಕ್ತಿಗಿಂತ ಜನಶಕ್ತಿಯೇ ದೊಡ್ಡದು. ನಮ್ಮ ಸರ್ಕಾರ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡುತ್ತದೆ  ಎಂದು  ಮೋದಿ ಹೇಳಿದ್ದಾರೆ.

ಈ ಹಿಂದಿನ ಸರ್ಕಾರಗಳು ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಸಲಾಗುತ್ತಿತ್ತು. ಆದರೆ ಆರ್ಥಿಕ ವಲಯದಲ್ಲಿ ಬಹುದೊಡ್ಡ ಕ್ರಾಂತಿ ಎನ್ನಲಾಗುವ ನೋಟು ನಿಷೇಧದ ಬಗ್ಗೆ ಚರ್ಚಿಸಲು ಪ್ರತಿಪಕ್ಷಗಳು ಅವಕಾಶವನ್ನೇ ನೀಡಲಿಲ್ಲ ಎಂದು ಸಂಸದೀಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್, ನಗದು ರಹಿತ ಆರ್ಥಿಕತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಎಂದು ಮೋದಿ ಎಲ್ಲಾ ಪಕ್ಷದವರಿಗೂ ಕರೆ ನೀಡಿದ್ದಾರೆ ಎಂದು ಹೇಳಿದರು.

click me!