ಜಾರಕಿಹೊಳಿ ಬ್ರದರ್ಸ್-ಲಕ್ಷ್ಮೀ ಹೆಬ್ಬಾಳ್ಕರ್‌ ನಡುವೆ ಮತ್ತೊಂದು ವಾರ್ ಶುರು?

By Web DeskFirst Published Oct 12, 2018, 8:58 AM IST
Highlights

ಜಾರಕಿಹೊಳಿ ಬ್ರದರ್ಸ್-ಲಕ್ಷ್ಮೀ ಹೆಬ್ಬಾಳ್ಕರ್‌ ನಡುವೆ ಮತ್ತೊಂದು ವಾರ್ ಶುರು ಆಗುತ್ತಾ? ಇಂತಹದೊಂದು ಪ್ರಶ್ನೆ ಉದ್ಭವಿಸಲು ಮಹತ್ತರ ಕಾರಣವೊಂದು ಇದೆ.

ಬೆಳಗಾವಿ, [ಅ.12]: ಜಾರಕಿಹೊಳಿ ಸಹೋದರರು ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌  ಅವರ ರಾಜಕೀಯ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದ್ದ ಬೆಳಗಾವಿ ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಬಳಿಕ ಇದೀಗ ಮತ್ತೊಂದು ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗಿದೆ. 

ಬೆಳಗಾವಿ ಕೃಷಿ ಮಾರುಕಟ್ಟೆಸಮಿತಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ಅ.15ರಂದು ಮುಹೂರ್ತ ನಿಗದಿಯಾಗಿದ್ದು, ಮತ್ತೊಮ್ಮೆ ಜಾರಕಿಹೊಳಿ ಹಾಗೂ ಹೆಬ್ಬಾಳಕರ ಅವರ ಪ್ರತಿಷ್ಠೆಗೆ ವೇದಿಕೆಯಾಗಲಿದೆಯೇ ಎಂಬ ಕುತೂಹಲ ಹುಟ್ಟಿಕೊಂಡಿದೆ.

ಜಾರಕಿಹೊಳಿ ಬ್ರದರ್ಸ್-ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಇರೋ ಪ್ರಾಬ್ಲಂ ಆದ್ರೂ ಏನು?

ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್‌ ಬಣಕ್ಕೆ ಹಿನ್ನಡೆಯಾಗಿತ್ತು. ಶಾಸಕ ಸತೀಶ ಜಾರಕಿಹೊಳಿ ಬೆಂಬಲಿಗ ವಿಠಲ ಜಾಧವ್ ಅಧ್ಯಕ್ಷರಾಗಿದ್ದರೆ, ಬಿಜೆಪಿಯ ಮಾಜಿ ಶಾಸಕ ಸಂಜಯ ಪಾಟೀಲ ಬೆಂಬಲಿಗರಾದ ರೇಣುಕಾ ಪಾಟೀಲ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು.

ಬೆಳಗಾವಿಯ ಪಿಎಲ್‌ಡಿ ಪಾಲಿಟಿಕ್ಸ್

ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಯುವರಾಜ ಕದಂ, ಸುಧೀರಗಡ್ಡೆ, ತಾನಾಜಿ ಪಾಟೀಲ, ಅನಂತ ಪಾಟೀಲ ಅವರ ಹೆಸರು ಕೇಳಿಬರುತ್ತಿವೆ. ಬಲ್ಲ ಮೂಲಗಳ ಪ್ರಕಾರ ಸತೀಶ ಜಾರಕಿಹೊಳಿ ಹಾಗೂ ಲಕ್ಷ್ಮಿ  ಅವರು ಯುವರಾಜ ಕದಂ ಅವರನ್ನೇ ಒಮ್ಮತದಿಂದ ಆಯ್ಕೆ ಮಾಡಲು ಒಂದು ಸುತ್ತಿನ ಮಾತುಕತೆಯನ್ನೂ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 

ಈ ಮೂಲಕ ಇವರಿಬ್ಬರ ರಾಜಕೀಯ ಕದನಕ್ಕೆ ವಿದಾಯ ಬೀಳುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

click me!