
ಟೋಕಿಯೋ : ನಮ್ಮಲ್ಲಿ ಚಾಲಕರ ಅಚಾತುರ್ಯದಿಂದ ರಸ್ತೆ ಅಪಘಾತಗಳು ನಡೆಯುವುದು ಸಾಮಾನ್ಯ. ಹಾಗಾಗಿ, ವಿದೇಶಗಳಲ್ಲಿ ಇಂಥ ಅಚಾತುರ್ಯಗಳು ನಡೆಯಬಾರದು ಎಂಬ ಕಾರಣಕ್ಕಾಗಿ ಡ್ರೈವರ್‌ಲೆಸ್ ಕಾರು, ರೈಲುಗಳೆಲ್ಲ ಕಾರ್ಯಾಚರಿಸುತ್ತಿವೆ.
ಆದಾಗ್ಯೂ, ಜಪಾನ್‌ನಲ್ಲಿ ಚಾಲಕ ರಹಿತ ರೈಲು ತಪ್ಪಾದ ರೈಲ್ವೆ ಮಾರ್ಗದಲ್ಲಿ ಚಲಿಸಿದ ಪರಿಣಾಮ ರೈಲ್ವೆ ಅಪಘಾತ ಸಂಭವಿಸಿದೆ. ಇದರಿಂದ 14 ಮಂದಿ ಗಾಯಗೊಂಡಿದ್ದಾರೆ.
ಹೌದು, ಟೋಕಿಯೋದಲ್ಲಿ ರೈಲು ನಿಲ್ದಾಣದಿಂದ ತಪ್ಪಾದ ಮಾರ್ಗದಲ್ಲಿ ಚಲಿಸಿದ ಚಾಲಕ ರಹಿತ ರೈಲು ಮತ್ತೊಂದು ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ರೈಲಿಗೆ ಡಿಕ್ಕಿ ಹೊಡೆದಿದೆ.
ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. 30 ವರ್ಷಗಳ ಇತಿಹಾಸದಲ್ಲಿ ಇಂಥ ದುರಂತ ಸಂಭವಿಸಿದ್ದು ಇದೇ ಮೊದಲು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.