ಜನ್ಮದಿನದಂದೇ ಮಹಿಳಾ ಪೊಲೀಸ್ ಆತ್ಮ ಹತ್ಯೆ

By Web Desk  |  First Published Jun 3, 2019, 11:10 AM IST

ಜನ್ಮದಿನದಂದೇ ಮಹಿಳಾ ಪೊಲೀಸ್ ಆತ್ಮ ಹತ್ಯೆ  | ಚಿಕ್ಕಮಗಳೂರು ಜಿಲ್ಲೆಯಲ್ಲಿ ಘಟನೆ  


ಚಿಕ್ಕಮಗಳೂರು (ಜೂ. 03): ತರಬೇತಿ ಮಹಿಳಾ ಪೊಲೀಸ್ ಪೇದೆಯೊಬ್ಬರು ತಮ್ಮ ಹುಟ್ಟುಹಬ್ಬದಂದೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ಶನಿವಾರ ರಾತ್ರಿ ನಡೆದಿದೆ.

ಬಳ್ಳಾರಿ ಜಿಲ್ಲೆಯ ಹೂವಿನಹ ಡಗಲಿ ತಾಲೂಕಿನ ತಳಕಲು ಗ್ರಾಮದ ಕವಿತಾ(೨೬) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇಲ್ಲಿನ ರಾಮನಹ ಳ್ಳಿಯಲ್ಲಿರುವ ಪೊಲೀಸ್ ತರಬೇತಿ ಕೇಂದ್ರದ ಅಡುಗೆ ಕೋಣೆಯಲ್ಲಿ ಕವಿತಾ ತನ್ನ ಚೂಡಿದಾರದ ವೇಲಿನಿಂದ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕವಿತಾ ಬೆಂಗಳೂರಿನಲ್ಲಿ ಪೊಲೀಸ್ ಹುದ್ದೆಗೆ ಆಯ್ಕೆಯಾಗಿದ್ದರು. ಅವರಿಗೆ ಚಿಕ್ಕಮಗಳೂರಿನಲ್ಲಿ ತರಬೇತಿ ನೀಡಲಾಗುತ್ತಿದೆ. 

Tap to resize

Latest Videos

click me!