ಭಾರತದ ಮೇಲಿನ ಪ್ರೀತಿಗೆ ಮತ್ತೆ ಬರುವುದಾಗಿ ಮೋದಿಗೆ ಪತ್ರ ಬರೆದ ಪೋಲೆಂಡ್ ಬಾಲೆ

By Web DeskFirst Published Jun 3, 2019, 11:18 AM IST
Highlights

 ಹಿಂದು ಸಂಸ್ಕೃತಿಗೆ ಮಾರು ಹೋಗಿದ್ದ ಪೋಲೆಂಡ್ ಮೂಲದ 11 ವರ್ಷದ ಬಾಲಕಿಯೊಬ್ಬಳು ಮತ್ತೆ ಭಾರತಕ್ಕೆ ಹಿಂತಿರುಗಲು ನೆರವು ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾಳೆ. 

ಪಣಜಿ: ಭಾರತದ ಹಿಂದು ಸಂಸ್ಕೃತಿಗೆ ಮಾರು ಹೋಗಿದ್ದ ಪೋಲೆಂಡ್ ಮೂಲದ 11 ವರ್ಷದ ಬಾಲಕಿಯೊಬ್ಬಳು ಮತ್ತೆ ಭಾರತಕ್ಕೆ ಹಿಂತಿರುಗಲು ನೆರವು ಕೋರಿ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ಕೈಬರಹದಲ್ಲಿ ಭಾವನಾತ್ಮಕ ಪತ್ರ ಬರೆದು ಗಮನ ಸೆಳೆದಿದ್ದಾಳೆ.

ಸದ್ಯ ಕಾಂಬೋಡಿಯಾದಲ್ಲಿರುವ ಬಾಲಕಿ ಅಲಿಕ್ಜಾ ವಾನಟ್ಕೋ(11) ಭಾರತಕ್ಕೆ ಹಿಂದಿರುಗಬೇಕು ಎಂಬ ತನ್ನ ಇಂಗಿತ, ನಂದಾದೇವಿ ಶಿಖರದಲ್ಲಿರುವ ಶಿವನ ಕುರಿತಾಗಿ ತನಗಿರುವ ಭಕ್ತಿ, ತಾನು ಈ ಹಿಂದೆ ಗೋವಾದಲ್ಲಿ ಕಳೆದಿದ್ದ ಅವಿಸ್ಮರಣೀಯ ದಿನಗಳ ವಿವರಣೆ ಹಾಗೂ ಇದೀಗ ತನಗೆ ಭಾರತಕ್ಕೆ ಪುನಃ ಮರಳಲು ಅನುಮತಿ ನೀಡಬೇಕೆಂದು ಕೋರಿ ಮೋದಿ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನುದ್ದೇಶಿಸಿ ಬರೆದ ಪತ್ರವನ್ನು ಆಕೆಯ ತಾಯಿ ಮಾರ್ಟಾ ಕೊಟ್ಲಾರ್ ಸ್ಕಾ ಟ್ವೀಟ್ ಮಾಡಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?: ಕಲಾವಿದೆ ಹಾಗೂ ಫೋಟೋಗ್ರಾಫರ್ ಆದ, ಬಾಲಕಿ ಅಲಿಕ್ಜಾ ಅವರ ತಾಯಿ ಮಾರ್ಟಾ ಅವರು ಭಾರತದಲ್ಲಿ ನೆಲೆಸುವ ಬಿ- 2  ಬ್ಯುಸಿನೆಸ್ ವೀಸಾ ವನ್ನು ಹೊಂದಿದ್ದರು. ಆದರೆ, ಈ ವೀಸಾದ ನವೀಕರಣಕ್ಕಾಗಿ ಶ್ರೀಲಂ ಕಾಕ್ಕೆ ಹೋಗಿ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಅವಧಿ ಮೀರಿ ಭಾರತದಲ್ಲಿ ನೆಲೆಸಿದ್ದೀರಿ ಎಂಬ ಕಾರಣ ನೀಡಿ ಅವರನ್ನು ವಾಪಸ್ ಕಳುಹಿಸಲಾಗಿತ್ತು. 

ಗೋವಾದಲ್ಲಿ ವ್ಯಾಸಂಗ ಮಾಡುತ್ತಿದ್ದ ಅಲಿಕ್ಜಾಳನ್ನು ಬಿಟ್ಟು ಮಾರ್ಥಾ ಥಾಯ್ಲೆಂಡ್‌ಗೆ ತೆರಳಿದ್ದರು. ಹಲವು ದಿನಗಳ ಬಳಿಕ ಭಾರತಕ್ಕೆ ಮರಳಿ ಮಗಳನ್ನು ಕರೆದೊಯ್ದಿದ್ದರು. ಈಗ ಕಾಂಬೋಡಿಯಾದಲ್ಲಿ ನೆಲೆಸಿದ್ದಾರೆ. ಭಾರತಕ್ಕೆ ಮರಳಲು ಅವಕಾಶ ನೀಡಬೇಕು ಎಂದು ಈಗ
ಅಲಿಕ್ಜಾ ಕೈ ಬರಹದಲ್ಲಿ ಪತ್ರ ಬರೆದಿದ್ದಾಳೆ. ನಾನು ಭಾರತೀಯ ಪ್ರಜೆ ಅಲ್ಲದಿರಬಹುದು. ಭಾರತ ನನ್ನ ಮನೆ ಎಂದು ಹೇಳಿದ್ದಾಳೆ.

click me!