ಹಳೆಯ ಮನಿ ಡೀಲ್ ಪ್ರಕರಣವೊಂದರಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಪೊಲೀಸರು ಶೋಧ ನಡೆಸತ್ತಾ ಇದ್ದಾರೆ. ಇನ್ನೊಂದು ಕಡೆ ಬಿಜೆಪಿ ಆದಿಯಾಗಿ ಯಾವ ರಾಜಕೀಯ ಪಕ್ಷಗಳು ರೆಡ್ಡಿ ವಿಚಾರದಲ್ಲಿ ಪ್ರತಿಕ್ರಿಯೆ ನೀಡುತ್ತಿಲ್ಲ. ಮಾಧ್ಯಮಗಳು ಪ್ರಶ್ನೆ ಮಾಡಿದರೂ ದೂರ ಸರಿಯುತ್ತಿದ್ದಾರೆ.. ಹಾಗಾದರೆ ಯಾಕೆ?
ಬೆಂಗಳೂರು[ನ.07] ರಾಜಕಾರಣವೆ ಹಾಗೆ ಒಂದು ಕಾಲದಲ್ಲಿ ಪ್ರಭಾವಿ ಎಂದು ಕರೆಸಿಕೊಂಡಿದ್ದವರೂ, ಪ್ರಭಾವಿ ಆಗಿದ್ದವರೂ ಜನರಿಂದ ತಿರಸ್ಕಾರಕ್ಕೆ ಒಳಗಾದರೆ ಕೆಲವೇ ದಿನದಲ್ಲಿ ನೇಪಥ್ಯಕ್ಕೆ ಸರಿಯಬೇಕಾಗುತ್ತದೆ. ಹೆಲಿಕಾಪ್ಟರ್ ನಲ್ಲಿ ಓಡಾಡುತ್ತಿರುವವರು ತಲೆ ಮರೆಸಿಕೊಂಡು ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ರೆಡ್ಡಿ ವಿಚಾರದಲ್ಲಿ ಇದು ಮತ್ತೆ ಸತ್ಯ ಆಗಿದೆ.
ವರ್ಷಗಳ ಕಾಲ ಜೈಲಿನಲ್ಲಿದ್ದ ರೆಡ್ಡಿ ಅಂತೂ ಇಂತೂ ಜಾಮೀನು ಪಡೆದುಕೊಂಡು ಹೊರಬಂದಿದ್ದರು. ರೆಡ್ಡಿ ಬಳ್ಳಾರಿ ಪ್ರವೇಶ ಮಾಡಬಾರದು ಎಂದು ನ್ಯಾಯಾಲಯವೇ ಹೇಳಿತ್ತು. ಇಲ್ಲಿಂದಲೇ ರೆಡ್ಡಿ ಅವರಿಗೆ ಕಂಟಕದ ಮೇಲೆ ಕಂಟಕ ಎದುರಾಗಿದ್ದು.
ರೆಡ್ಡಿ ಮುಂದೆ ಇರುವುದು ಇವೆರೆಡೇ ಆಯ್ಕೆ
ಸಂಬಂಧವಿಲ್ಲ ಎಂದ ಅಮಿತ್ ಶಾ: ರಾಜ್ಯದ ವಿಧಾನಸಭೆ ಚುನಾವಣೆ ಎದುರಾಗುವ ಸಂದರ್ಭದಲ್ಲಿ ರೆಡ್ಡಿಗೂ ಬಿಜೆಪಿಗೂ ಸಮಬಂಧ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಒಂದು ಕಡೆ ಹೇಳಿದ್ದರು. ಈ ಮೂಲಕ ಆರೋಪಗಳನ್ನು ಹೊತ್ತ ರೆಡ್ಡಿಯಿಂದ ಬಿಜೆಪಿ ದೂರ ಉಳಿಯುವ ಸೇಫ್ ಗೇಮ್ ಆಡಿತ್ತು.
ಸ್ನೇಹಿತನೂ ದೂರ? : ರೆಡ್ಡಿ ಮೇಲಿರುವ ಪ್ರಕರಣಕ್ಕೆ ಸಂಬಂಧಿಸಿ ಶ್ರೀರಾಮುಲು ಅವರ ಬಳಿ ಪ್ರಶ್ನೆ ಮಾಡಿದಾಗ, ಕಾನೂನಿನ ಮುಂದೆ ಎಲ್ಲೆರೂ ಸಮಾನರು ಎಂಬ ಉತ್ತರ ಬಂತು. ಅಂದರೆ ಒಂದು ಅರ್ಥದಲ್ಲಿ ಶ್ರೀರಾಮುಲು-ರೆಡ್ಡಿ ದೋಸ್ತಿ ಕೊನೆಯಾಯಿತಾ? ಎಂಬ ಮಾತುಗಳು ಎದ್ದಿವೆ.
ಯಾರೂ ಮಾತನಾಡುತ್ತಿಲ್ಲ: ಬಿಜೆಪಿ ಮಾತ್ರ ಅಲ್ಲ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರೂ ಸಹ ರೆಡ್ಡಿ ವಿಚಾರದಲ್ಲಿ ಚಕಾರ ಎತ್ತಿಲ್ಲ. ಮನಿ ಡೀಲ್ ನ ಆರೋಪಿಯೊಬ್ಬರ ಜತೆ ಕಾಂಗ್ರೆಸ್ ನಾಯಕರು ಇದ್ದ ಪೋಟೋ ವೈರಲ್ ಆಗಿತ್ತು. ಕಾಂಗ್ರೆಸ್ ಸಹ ಸೇಫ್ ಗೇಮ್ ಆಡುತ್ತಲೇ ಇದೆ.
ಆಂಧ್ರದಲ್ಲೂ ಗೆಳೆಯರಿಲ್ಲ: ಹಿಂದಿನ ಆಂಧ್ರ ಪ್ರದೇಶ ಸರಕಾರಗಳೊಂದಿಗೆ ಉತ್ತಮ ಬಾಂಧವ್ಯ ಹೊಮದಿದ್ದ ರೆಡ್ಡಿ ಅನೇಕ ಸಾರಿ ರಕ್ಷಣೆ ಪಡೆದುಕೊಂಡಿದ್ದರು. ಆದರೆ ಇದೀಗ ಚಂದ್ರಬಾಬು ನಾಯ್ಡು ಪ್ರಭಾವಕ್ಕೆ ಆಂಧ್ರ ಸಿಕ್ಕ ಮೇಲೆ ರೆಡ್ಡಿಗೆ ಅಲ್ಲಿನ ಬಾಗಿಲು ಸಹ ಮುಚ್ಚಿದೆ.
ಬಳ್ಳಾರಿ ಸೋಲು: ಒಂದು ಕಡೆ ಬಳ್ಳಾರಿ ಸೋಲು ಶ್ರೀರಾಮುಲು ಮತ್ತು ಬಿಜೆಪಿಗೆ ಬಹುದೊಡ್ಡ ಆಘಾತ ನೀಡಿದೆ. ಇದರ ಇನ್ನೊಂದು ಮುಖ ಎಂಬಂತೆ ಜನಾರ್ದನ ರೆಡಡಿಗೂ ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಳ್ಳಾರಿಯನ್ನು ಬಿಜೆಪಿ ಗೆದ್ದಿದ್ದರೆ ಪರಿಸ್ಥಿತಿ ಬದಲಾಗುತ್ತಿತ್ತೇನೋ? ಡಿಕೆಶಿ ಸಹ ಮಾತನಾಡುತ್ತ ಬಳ್ಳಾರಿಯಲ್ಲಿ ಶ್ರೀರಾಮುಲು ಪ್ರಬಾವ ಇದೆ ಆದರೆ ಜನಾರ್ದನ ರೆಡ್ಡಿಯದು ಇಲ್ಲ ಎಂದು ಹೇಳಿದ್ದರು.