
ಬೆಂಗಳೂರು (ಮಾ.24): ಕೈಯಲ್ಲಿ ಪಳಪಳ ಹೊಳೆಯುವ ವಜ್ರದ ಉಂಗುರಗಳ, ತಲೆಯ ಮೇಲೆ ಭಾರದ ಬಂಗಾರದ ಕಿರೀಟ, ಕೊರಳಲ್ಲಿ ಹಗ್ಗದಂತೆ ಬಂಗಾರದ ಹಾರಗಳು, ಕೈಯಲ್ಲಿ ದೊಡ್ಡ ದೊಡ್ಡ ಕಡಗಗಳು, ಮಿಂಚುವ ಸಿಲ್ಕ್ ಬಟ್ಟೆಗಳು ಎಲ್ಲಿ ಸ್ವಾಮಿ ಬಡವರು ನೀವು? ಇದೆಲ್ಲಾ ಯಾರು ಕೊಟ್ಟಿದ್ದು, ಭಕ್ತರಲ್ವೇ? ಎಂದು ಪಂಚಪೀಠಗಳ ವಿರುದ್ಧ ಜಮಾದಾರ್ ವಾಗ್ದಾಳಿ ನಡೆಸಿದ್ದಾರೆ.
ಅಡ್ಡಪಲ್ಲಕ್ಕಿ ನಡೆಸಬಾರದೆಂದರೂ ಪಲ್ಲಕ್ಕಿ ಉತ್ಸವ ನಡೆಸುತ್ತೀರಾ ಎಂದು ಜಾಮಾದಾರ್ ಕಿಡಿ ಕಾರಿದ್ದಾರೆ. ವೀರಶೈವ ಮಹಾಸಭಾ ವೀರಶೈವ ಮಹಸಭಾ ಅಷ್ಟೇ ನಮಗೂ ಅದಕ್ಕೂ ಸಂಬಂಧ ಇಲ್ಲ. ನಿನ್ನೆಗೆ ನಮ್ಮ ಅವರ ಸಂಬಂಧ ಮುಗಿಯಿತು. ಲಿಂಗಾಯತರು ನಿಮ್ಮ ಅಸ್ಮಿತೆಗಾಗಿ ಮಹಾಸಭಾದ ಪದಾಧಿಕಾರಿಗಳ ಸ್ಥಾನದಿಂದ ಹೊರಬನ್ನಿ. ಇಲ್ಲಾ ವೀರಶೈವ ಮಹಾಸಭೆ ನಮ್ಮೊಂದಿಗೆ ಇರಬೇಕು ಅಂದ್ರೆ ನಿನ್ನೆ ಹೊರಡಿಸಿರೋ ಆರು ಅಂಶಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಜಾಮ್ದಾರ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.