ಅಮೆರಿಕ ಗ್ರೀನ್ ಕಾರ್ಡ್ ಪಡೆಯಲು ಎಂ.ಬಿ.ಪಾಟೀಲ್ ಪತ್ನಿ ಯತ್ನಿಸಿದ್ದು ಏಕೆ?

Published : Mar 24, 2018, 03:10 PM ISTUpdated : Apr 11, 2018, 12:59 PM IST
ಅಮೆರಿಕ ಗ್ರೀನ್ ಕಾರ್ಡ್ ಪಡೆಯಲು ಎಂ.ಬಿ.ಪಾಟೀಲ್ ಪತ್ನಿ ಯತ್ನಿಸಿದ್ದು ಏಕೆ?

ಸಾರಾಂಶ

ರಾಜ್ಯ ರಾಜಕಾರಣದಲ್ಲಿಯೇ ಬಿರುಗಾಳಿ ಎಬ್ಬಿಸಲಿರುವ ಸುದ್ದಿಯೊಂದನ್ನು ಸುವರ್ಣ ನ್ಯೂಸ್ ಬ್ರೇಕ್ ಮಾಡಿದೆ.

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿಯೇ ಬಿರುಗಾಳಿ ಎಬ್ಬಿಸಲಿರುವ ಸುದ್ದಿಯೊಂದನ್ನು ಸುವರ್ಣ ನ್ಯೂಸ್ ಬ್ರೇಕ್ ಮಾಡಿದೆ.

ಲಿಂಗಾಯತ ಧರ್ಮದ ಮುಂಚೂಣಿ ಹೋರಾಟಗಾರ, ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಪತ್ನಿ ಆಶಾ ಪಾಟೀಲ್ ಅಮೆರಿಕ ಗ್ರೀನ್ ಕಾರ್ಡ್​ ಪಡೆಯಲು ಯತ್ನಿಸುತ್ತಿರುವುದು ಸುವರ್ಣ ನ್ಯೂಸ್‌ಗೆ ಸಂಪೂರ್ಣ ಮಾಹಿತಿ ಲಭ್ಯವಾಗಿದೆ.

ವಿದೇಶದಲ್ಲಿಯೇ ನೆಲೆಸಲು ಶಕ್ತಿ ಮೀರಿ ಆಗರ್ಭ ಶ್ರೀಮಂತ ಪಾಟೀಲ್ ಕುಟುಂಬ ಯತ್ನಿಸುತ್ತಿದ್ದು, ಈ ನಡೆ ಆಶ್ಚರ್ಯ ತಂದಿದೆ. 

ಒಂದೆಡೆ ರಾಜ್ಯಕ್ಕೆ ಬಂಡವಾಳ ಹರಿದು  ಬರಲಿ, ಎಂದು ಕಾಂಗ್ರೆಸ್ ಸರಕಾರ ಯತ್ನಿಸುತ್ತಿದ್ದರೆ, ಪಾಟೀಲ್ ಕುಟುಂಬ ವಿದೇಶದಲ್ಲಿ ಬಂಡವಾಳ ಹೂಡಲು ಆಸಕ್ತವಾಗಿದೆ. ಅಮೆರಿಕದಲ್ಲಿ ಕನಿಷ್ಠ 10 ಜನರಿಗೆ ಪೂರ್ಣ ಪ್ರಮಾಣದ ಉದ್ಯೋಗ ಕೊಟ್ಟರೆ, ಗ್ರೀನ್ ಕಾರ್ಡ್ ಸಿಗಲಿದ್ದು, ಅಲ್ಲಿಯೇ ಶಾಶ್ವತವಾಗಿ ನೆಲೆಸಲು ಅವಕಾಶ ಸಿಗಲಿದೆ. ಅದಕ್ಕೆ ಅಲ್ಲಿ 3.35 ಕೋಟಿ ರೂಪಾಯಿ ಪ್ರಾರಂಭಿಕ ಹಣ ಹೂಡಲೂ ಪಾಟೀಲ್ ಕುಟುಂಬ ಸಿದ್ಧವಿದೆ. 

ಈಗಾಗಲೇ ಗ್ರೀನ್ ಕಾರ್ಡ್ ಕೊಡಿಸುವ ವಿದೇಶಿ ಕಂಪನಿಗೆ 33 ಲಕ್ಷ 50 ಸಾವಿರ ರೂಪಾಯಿ ಕೊಟ್ಟಿದ್ದಾರೆ ಪಾಟೀಲ್ ಪತ್ನಿ. ಪರವಾನಗಿ ಕಲ್ಪಿಸುವ ಮತ್ತೊಂದು ಕಂಪನಿಗೆ 10 ಲಕ್ಷ ರೂಪಾಯಿ​​​​​ ಸಂದಾಯ ಮಾಡಿರುವುದೂ ಪತ್ತೆಯಾಗಿದೆ. 

ನನ್ನ ಮೇಲೆ ಐಟಿ ದಾಳಿ ನಡೆಯುತ್ತೆ ಅಂತ ಪದೇ ಪದೇ ಹೇಳುತ್ತಿದ್ದಾರೆ ಪಾಟೀಲ್, ಗ್ರೀನ್ ಕಾರ್ಡ್​​​ಗೆ  ಹಾಕಿರುವ ಅರ್ಜಿಗೂ ದಾಳಿ ನಡೆಯುವ ಭೀತಿಗೂ ಇದೆಯಾ ಲಿಂಕ್​​ ಎಂಬುವುದ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಾರಾಷ್ಟ್ರದಲ್ಲಿ ಬಿಜೆಪಿ ಗೆದ್ದರೂ ಸೂರ್ಯವಂಶಿ ಕುಟುಂಬಕ್ಕೆ ಅಘಾತ, ಆರಕ್ಕೆ 6 ಸದಸ್ಯರಿಗೆ ಸೋಲು
ಬಿಡದಿ ಟೌನ್ ಶಿಪ್ ಜಿದ್ದಿನಿಂದ ಅನುಷ್ಠಾನ ಮಾಡುತ್ತಿಲ್ಲ: ಶಾಸಕ ಎಚ್.ಸಿ.ಬಾಲಕೃಷ್ಣ