
ಬೆಂಗಳೂರು[ಸೆ.30]: ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿಕೆಶಿ ಇಡಿ ಸುಳಿಯಲ್ಲಿ ಸಿಲುಕಿ ಹೊರಬರಲಾರದೆ ಪರದಾಡುತ್ತಿದ್ದಾರೆ. ಹೀಗಿರುವಾಗಲೇ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಡಿಕೆ ಕುಟುಂಬಕ್ಕೆ ಮತ್ತೊಂದು ಶಾಕ್ ನೀಡಿದ್ದಾರೆ.
ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ: ಮತ್ತೆ 14 ದಿನ ಡಿಕೆಶಿಗೆ ಜೈಲೇ ಗತಿ..!
ಹೌದು ಸದ್ಯ ಡಿಕೆ ಸುರೇಶ್‌ಗೂ ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ನೀಡಿದೆ. ಈ ಹಿಂದೆ ಡಿಕೆ ಶಿವಕುಮಾರ್ ದೆಹಲಿ ಫ್ಲಾಟ್ನಲ್ಲಿ ಸಿಕ್ಕಿದ್ದ 40 ಲಕ್ಷ ಪೈಕಿ 21 ಲಕ್ಷ ಹಣ ನನ್ನದು ಎಂದು ಡಿ. ಕೆ ಸುರೇಶ್ ಹೇಳಿದ್ದರು. ಅಲ್ಲದೇ ಚುನಾವಣಾ ಅಫಿಡವಿಟ್ನಲ್ಲಿ 21 ಲಕ್ಷ ರೂ.ಲೆಕ್ಕ ತೋರಿಸಿದ್ದರು. ಈ ಹಿನ್ನೆಲೆಯಲ್ಲಿ ಡಿ. ಕೆ. ಸುರೇಶ್‌ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
2017 ಆಗಸ್ಟ್‌ನಲ್ಲಿ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ಐಟಿ ದಾಳಿ ನಡೆದಿತ್ತು. ಈ ದಾಳಿ ವೇಳೆ ಐಟಿ ಇಲಾಖೆ 11. 86 ಕೋಟಿ ರೂ. ವಶಪಡಿಸಿಕೊಂಡಿತ್ತು. ಡಿಕೆಶಿ ದೆಹಲಿ ಫ್ಲಾಟ್‌ನಲ್ಲೇ ದಾಖಲೆ ಇಲ್ಲದ 40 ಲಕ್ಷ ರೂಪಾಯಿ ಪತ್ತೆಯಾಗಿತ್ತು. ಈ ಪ್ರಕರಣ ದಾಖಲಾದ ಎರಡು ವರ್ಷಗಳ ಬಳಿಕ ಸಂಸದ ಡಿ.ಕೆ.ಸುರೇಶ್ 21 ಲಕ್ಷ ರೂ. ನನ್ನದು ಎಂದಿದ್ದರು. ಈ ಹಿನ್ನೆಲೆಯಲ್ಲಿ 2018ರ ಸೆಪ್ಟೆಂಬರ್‌ನಲ್ಲಿ ಡಿ.ಕೆ.ಸುರೇಶ್ ವಿರುದ್ಧ ಇಡಿ ಪ್ರಕರಣ ದಾಖಲಿಸಿತ್ತು.
ಡಿಕೆಶಿ ಭೇಟಿಯಾದ ಅಹ್ಮದ್ ಪಟೇಲ್, ಮಹತ್ವದ ಸಂದೇಶ ತಲುಪಿಸಿದ ಸೋನಿಯಾ ಆಪ್ತ!
ಈಗಾಗಲೇ ತಿಹಾರ್ ಜೈಲಿನಲ್ಲಿರುವ ಡಿ. ಕೆ. ಶಿವಕುಮಾರ್ ಜಾಮೀನು ಪಡೆಯಲು ಹರ ಸಾಹಸ ಪಡುತ್ತಿದ್ದಾರೆ. ಹೀಗಿರುವಾಗಲೇ ಡಿ. ಕೆ. ಸುರೇಶ್ ಗೂ ನೋಟಿಸ್ ಸಿಕ್ಕಿರುವುದು ಮತ್ತಷ್ಟು ಆತಂಕ ಹುಟ್ಟು ಹಾಕಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.