
ಬೆಂಗಳೂರು[ನ.29]: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಭಾರತದ ಭೂ ವೀಕ್ಷಣಾ ಉಪಗ್ರಹವೊಂದರ ಜೊತೆ 8 ದೇಶಗಳ 30 ಸಣ್ಣ ಉಪಗ್ರಗಳನ್ನು ಇಂದು ಉಡಾವಣೆ ಮಾಡಲಿದೆ.
ಈ ಮಹತ್ವಾಕಾಂಕ್ಷಿ ಉಡಾವಣೆಗೆ ಬುಧವಾರ ಮುಂಜಾನೆ 5.58 ನಿಮಿಷದಿಂದ ಕೌಂಟ್‌ಡೌನ್ ಆರಂಭವಾಗಲಿದ್ದು, ಗುರುವಾರ ಮುಂಜಾನೆ 9.58 ನಿಮಿಷಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ನೆಲೆಯಿಂದ ಉಪಗ್ರಹ ಉಡಾವಣೆಗೊಳ್ಳಲಿದೆ.
ಪಿಎಸ್‌ಎಲ್‌ವಿ- ಸಿಎ ಉಡಾವಣಾ ವಾಹಕವು 380 ಕೆ.ಜಿ. ತೂಕದ ಎಚ್‌ವೈಎಸ್‌ಐಎಸ್ ಉಪಗ್ರಹ ಹಾಗೂ 261.5 ಕೆ.ಜಿ. ತೂಕದ ಇತರ ದೇಶಗಳ 30 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.