ಬೈಕ್‌ ಅಪಘಾತ: ಕಬಡ್ಡಿ ಕ್ರೀಡಾಪಟು ಸಾವು

By Web Desk  |  First Published Nov 29, 2018, 9:17 AM IST

ತಾಲೂಕಿನ ಉದ್ಗಟ್ಟಿದೊಡ್ಡತಾಂಡ (ಬಾಪೂಜಿನಗರ)ದ ನಿವಾಸಿ ಅಶೋಕ (22) ಮೃತಪಟ್ಟ ಕ್ರೀಡಾಪಟು. ಬೈಕ್‌ ಹಿಂಬದಿ ಸವಾರ ಶಿವನಾಯ್ಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.


ಹರಪನಹಳ್ಳಿ: ದಾವಣಗೆರೆ ವಿವಿ ಅಂತಾರಾಷ್ಟ್ರೀಯ ಮಟ್ಟದ ಕಬಡ್ಡಿ ಕ್ರೀಡಾಪಟು ಬೈಕ್‌ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ತಾಲೂಕಿನ ತೊಗರಿಕಟ್ಟಿ ಸಮೀಪ ಬುಧವಾರ ಸಂಜೆ ಜರುಗಿದೆ.

ತಾಲೂಕಿನ ಉದ್ಗಟ್ಟಿದೊಡ್ಡತಾಂಡ (ಬಾಪೂಜಿನಗರ)ದ ನಿವಾಸಿ ಅಶೋಕ (22) ಮೃತಪಟ್ಟ ಕ್ರೀಡಾಪಟು. ಬೈಕ್‌ ಹಿಂಬದಿ ಸವಾರ ಶಿವನಾಯ್ಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಅಶೋಕ, ಈಚೆಗೆ ನಡೆದ ರಾಷ್ಟ್ರಮಟ್ಟದ ಅಂತರ್‌ ಕಾಲೇಜು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ. 2018ರ ಆಗಸ್ಟ್‌ 29, 30ರಂದು ನೇಪಾಳದ ಕಠ್ಮಂಡುನಲ್ಲಿ ನಡೆದ ಪಂದ್ಯಾವಳಿಯಲ್ಲಿ ಟೀಮ್‌ ಲೀಡರ್‌ ಆಗಿ ಪಾಲ್ಗೊಂಡು ಚಿನ್ನದ ಪದಕ ಪಡೆದಿದ್ದ.

Tap to resize

Latest Videos

ಸೆಮಿಸ್ಟರ್‌ ಪರೀಕ್ಷೆ ಆರಂಭವಾಗಿದ್ದು, ಮಂಗಳವಾರ ಕಂಪ್ಯೂಟರ್‌ ಸೈನ್ಸ್‌ ಪರೀಕ್ಷೆ ಬರೆದಿದ್ದ ಅಶೋಕ್‌, ಬುಧವಾರ ಇಂಗ್ಲೀಷ್‌ ಪರೀಕ್ಷೆಗೆ ಹಾಜರಾಗಬೇಕಿತ್ತು. ವಿದ್ಯಾರ್ಥಿ ಅಗಲಿಕೆಗೆ ಕಾಲೇಜು ಸಿಬ್ಬಂದಿ, ಸ್ನೇಹಿತರು ಹಾಗೂ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ. ಹರಪನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!