ವಿಕ್ರಂ ಲ್ಯಾಂಡರ್ ಪತ್ತೆ, ನಟಿಗೆ ಬಾತ್‌ರೂಂ ಕನ್ಫ್ಯೂಸ್ ; ಇಲ್ಲಿವೆ ಸೆ.08ರ ಟಾಪ್ 10 ಸುದ್ದಿ!

By Web DeskFirst Published Sep 8, 2019, 6:05 PM IST
Highlights

ಭಾನುವಾರದ ರಜಾ ದಿನ ಭಾರತೀಯರಿಗೆ ಡಬಲ್ ಖುಷಿ. ಕಾರಣ ಚಂದ್ರಯಾನ 2 ಯೋಜನೆ ಅಂತಿಮ ಕ್ಷಣದಲ್ಲಿ ಅಲ್ಪ ಹಿನ್ನಡೆ ಅನುಭವಿಸಿತ್ತು. ಇದು ಭಾರತೀಯರ ನಿರಾಸೆಗೆ ಕಾರಣವಾಗಿತ್ತು. ಆದರೆ ಇಸ್ರೋ ಸತತ ಪ್ರಯತ್ನದಿಂದ ಇದೀಗ ವಿಕ್ರಮ್ ಲ್ಯಾಂಡರ್ ಪತ್ತೆ ಹಚ್ಚಲಾಗಿದೆ. ಶೀಘ್ರದಲ್ಲೇ ಲ್ಯಾಂಡರ್ ಜೊತೆ ಸಂಪರ್ಕ ಸಾಧ್ಯವಾಗಲಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ  ದಿನದ 18 ಗಂಟೆ ಕೆಲಸ ಕಾರ್ಯದಲ್ಲಿ ಮಗ್ನರಾಗಿರುತ್ತಾರೆ ಕೇವಲ 4 ಗಂಟೆ ವಿಶ್ರಾಂತಿ ಪಡೆಯುತ್ತಾರೆ ಅನ್ನೋದು ಮತ್ತೆ ಸಾಬೀತಾಗಿದೆ. ಈ ಬೆಳವಣಿಗೆಗೆ ನಡುವೆ ಬಾಲಿವುಡ್ ನಟಿ ನುಶ್ರತ್ ಭರುಚಾ ಗಂಡಸರ ಬಾತ್ ರೂಂ ಒಳಹೊಕ್ಕು ಪೇಚಿಗೆ ಸಿಲುಕಿದ್ದಾರೆ.  ಸೆ.08ರ ರಜಾದಿನವೂ ಹಲವು ಸುದ್ದಿಗಳು ಸಂಚಲನ ಮೂಡಿಸಿದೆ. ಇದರಲ್ಲಿ ಆಯ್ದ ಟಾಪ್ 10 ಸುದ್ದಿಗಳ ವಿವರ ಇಲ್ಲಿವೆ. 

1 ಭರವಸೆಯ ಬೆಳಕು: ವಿಕ್ರಮ್ ಲ್ಯಾಂಡರ್ ಪತ್ತೆ ಹಚ್ಚಿದ ಇಸ್ರೋ!

ಚಂದ್ರಯಾನ-2 ಯೋಜನೆಯ ಹಿನ್ನಡೆಯಿಂದಾಗಿ ನಿರಾಸೆಯಲ್ಲಿದ್ದ ಇಸ್ರೋ, ಸಂಪರ್ಕ ಕಡಿದುಕೊಂಡಿರುವ ವಿಕ್ರಮ್ ಲ್ಯಾಂಡರ್’ನ್ನು ಪತ್ತೆ ಹಚ್ಚಿ ಹೊಸ ಆಶಾವಾದ ಮೂಡಿಸಿದೆ. ಶೀಘ್ರದಲ್ಲೇ ವಿಕ್ರಮ್ ಲ್ಯಾಂಡರ್ ಜೊತೆ ಇಸ್ರೋ ಸಂಪರ್ಕ ಸಾಧಿಸಲಿದೆ ಅನ್ನೋ ಮಾತು ಭಾರತೀಯರ ನಿರೀಕ್ಷೆಗಳನ್ನು ಗರಿಗೆದರಿಸಿದೆ.


2 ‘ಮೋದಿ ಸರ್ವಾಂತರ್ಯಾಮಿ: ಪ್ರಧಾನಿ ಓಡಾಟವೇ ಸುನಾಮಿ’!

ಪ್ರಧಾನಿ ಮೋದಿ ದಿನದ 18 ಗಂಟೆ ಕೆಲಸ ಕಾರ್ಯದಲ್ಲಿ ಮಗ್ನರಾಗಿರುತ್ತಾರೆ ಕೇವಲ 4 ಗಂಟೆ ವಿಶ್ರಾಂತಿ ಪಡೆಯುತ್ತಾರೆ ಎಂಬ ಮಾತುಗಳು ಚುನಾವಣೆ ಸಂದರ್ಭದಲ್ಲಿ ಸದ್ದು ಮಾಡಿದ್ದವು. ಇದನ್ನು ಅನೇಕರು ವ್ಯಂಗ್ಯವಾಡಿದ್ದರು. ಆದರೆ ಕಳೆದ ಎರಡು ಮೂರು ದಿನಗಳಲ್ಲಿ ಪಿಎಂ ಮೋದಿಗೆ ತಮ್ಮ ಕೆಲಸಕ್ಕೆ ಎಷ್ಟು ಮಹತ್ವ ನೀಡುತ್ತಾರೆ ಎಂಬುವುದು ಬಹಿರಂಗವಾಗಿದೆ. ಅಲ್ಲದೇ ಮೋದಿ ಕೆಲಸದ ಮೇಲಿನ ಶ್ರದ್ಧೆಗೆ ಸಂಬಂಧಿಸಿದಂತೆ ಆಪ್ ನಾಯಕ ಮಾಡಿರುವ ಟ್ವೀಟ್ ಕೂಡಾ ಭಾರೀ ವೈರಲ್ ಆಗಿದೆ.


3 ಮಾಜಿ ಕಾನೂನು ಸಚಿವ, ಖ್ಯಾತ ವಕೀಲ ಜೇಠ್ಮಲಾನಿ ವಿಧಿವಶ


ಮಾಜಿ ಕಾನೂನು ಸಚಿವ ಹಾಗೂ ಖ್ಯಾತ ವಕೀಲ ರಾಮ್ ಜೇಠ್ಮಲಾನಿ ಭಾನುವಾರ ಮುಂಜಾನೆ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಜೇಠ್ಮಲಾನಿ ಕಳೆದೆರಡು ವಾರಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಇಂದು ಭಾನುವಾರ ಮುಂಜಾನೆ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ರಾಮ್ ಜೇಠ್ಮಲಾನಿಗೆ 96 ವರ್ಷ ವಯಸ್ಸಾಗಿತ್ತು.

4 'ಚಂದ್ರಯಾನ-2 ವೈಫಲ್ಯದ ಹಿಂದೆ ರಷ್ಯಾ ಕೈವಾಡ'

ಚಂದ್ರಯಾನ-2 ಯೋಜನೆ ವೈಫಲ್ಯದ ಹಿಂದೆ ರಷ್ಯಾ ಇದೆಯೇ? ಇಂಥದ್ದೊಂದು ಅನುಮಾವನ್ನು ಈಗ ಮಾಜಿ ಸಚಿವ ಯು.ಟಿ.ಖಾದರ್‌ ವ್ಯಕ್ತಪಡಿಸಿದ್ದಾರೆ.ಯುಟಿ ಖಾದರ್ ಅನುಮಾನಕ್ಕೆ ಹಲವು ಕಾರಣಗಳನ್ನೂ ನೀಡಿದ್ದಾರೆ. 


5 ಇಂಡೋ-ಆಫ್ರಿಕಾ ಟಿ20: ಬೆಂಗಳೂರು ಪಂದ್ಯದ ಟಿಕೆಟ್ ಕೇವಲ ₹500 ಮಾತ್ರ..!

ಐಪಿಎಲ್ ಬಳಿಕ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಕ್ರಿಕೆಟ್ ನೋಡಲು ಅಭಿಮಾನಿಗಳು ಕಾಯುತ್ತಿದ್ದರು. ಇದೀಗ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಪಂದ್ಯಕ್ಕೆ ಬೆಂಗಳೂರು ಆತಿಥ್ಯ ವಹಿಸಲಿದೆ. ಕ್ರಿಕೆಟ್ ಪಂದ್ಯದ ಆರಂಭಿಕ ಬೆಲೆ 500 ರುಪಾಯಿ ನಿಗದಿ ಪಡಿಸಲಾಗಿದೆ. 


6 ಕನ್ಫ್ಯೂಸ್ ಆಗಿ ಗಂಡಸರ ಬಾತ್ ರೂಮ್ ಒಳಹೊಕ್ಕ ’ಡ್ರೀಮ್ ಗರ್ಲ್’

ಡ್ರೀಮ್ ಗರ್ಲ್ ಸಿನಿಮಾ ಬಿಡುಗಡೆಯ ಸಂಭ್ರಮದಲ್ಲಿರುವ  ಬಾಲಿವುಡ್ ನಟಿ ನುಶ್ರತ್ ಭರುಚಾ ಚಿತ್ರದಂತೆಯೇ ಕನ್ಫ್ಯೂಸ್ ಮಾಡಿಕೊಂಡು ಗಂಡಸರ ಬಾತ್ ರೂಂ ಒಳ ಹೊಕ್ಕಿದ್ದಾರೆ.

7 ಕಿಚ್ಚನಿಗಾಗಿ ಕನ್ನಡ ಕಲಿತು ಬಂದ ತೆಲುಗು ನಿರೂಪಕಿ!


ಕನ್ನಡದ ಪೈಲ್ವಾನ್ ಗೆ ಟಾಲಿವುಡ್ ಸಾಥ್ ನೀಡಿದೆ. ಇನ್ನು ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ. ಹಾಗಾಗಿ ಚಿತ್ರತಂಡ ಪ್ರಮೋಶನ್ ನಲ್ಲಿ ಬ್ಯುಸಿಯಾಗಿದೆ. ಹೈದರಾಬಾದ್ ನಲ್ಲಿ ಪ್ರಮೋಶನ್ ವೇಳೆ ಕನ್ನಡದಲ್ಲಿಯೇ ಮಾತು ಆರಂಭಿಸಿದರು. ಈ ಕಾರ್ಯಕ್ರಮದಲ್ಲಿ ಪಿ ವಿ ಸಿಂಧು ಭಾಗುಯಾಗಿದ್ದರು. ಪೈಲ್ವಾನ್ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ.


8 ಮಾನವೀಯತೆ ಮಾತನಾಡಿದ್ದ Zomato: ಮನುಷ್ಯರನ್ನೇ ಹೊರ ದಬ್ಬಿದ್ದೇಕೋ?

 ಆನ್ ಲೈನ್ ಫುಡ್ ಡೆಲಿವರಿ ಸಂಸ್ಥೆ Zomato ಶನಿವಾರದಂದು ಮಹತ್ತರ ನಿರ್ಧಾರವನ್ನು ಪ್ರಕಟಿಸಿದ್ದು, ತನ್ನ 541 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ. ಗ್ರಾಹಕ, ವ್ಯಾಪಾರಿ ಹಾಗೂ ಡೆಲಿವರಿ ಸಪೋರ್ಟ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಉದ್ಯೋಗಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆಗೆದು ಹಾಕಲಾಗಿದೆ. ಕಂಪೆನಿಯ ಈ ನಿರ್ಧಾರ Zomatoನಲ್ಲಿ ಕೆಲಸ ಮಾಡಿಕೊಂಡಿದ್ದ ಶೇ. 10ರಷ್ಟು ಉದ್ಯೋಗಿಗಳ ಮೇಲೆ ಪರಿಣಾಮ ಬಿದ್ದಿದೆ.


9 ಕಾರು ಕಂಪನಿಗಳಿಂದ ಭರ್ಜರಿ ಆಫರ್‌: ಬೆಲೆಯಲ್ಲಿ ಭಾರೀ ಕಡಿತ!


ಉತ್ಪಾದಿತ ವಾಹನಗಳ ಮಾರಾಟ ಆಮೆಗತಿಯಲ್ಲಿ ಸಾಗಿದ್ದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ವಾಹನ ಉತ್ಪಾದನಾ ಕಂಪನಿಗಳು ಭರ್ಜರಿ ರಿಯಾಯ್ತಿ ದರ ಘೋಷಣೆ ಮಾಡುವ ಮೂಲಕ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ. ಮಾರುತಿ, ಟೊಯೊಟಾ, ಹ್ಯುಂಡೈ, ಹೋಂಡಾದಂಥ ಪ್ರತಿಷ್ಠಿತ ಕಂಪನಿಗಳು ಗೋಡೌನ್‌ನಲ್ಲಿ ನಿಂತಿರುವ ಕಾರುಗಳ ಮಾರಾಟಕ್ಕೆ ತೀವ್ರ ಸ್ಪರ್ಧೆಗಿಳಿದಿವೆ. ಹೀಗಾಗಿ ಭರ್ಜರಿ ಆಫರ್ ಘೋಷಿಸಿವೆ.

10 ಮೋದಿ - ಇಮ್ರಾನ್ ಖಾನ್ ಒಂದೇ ತಾಯಿ ಮಕ್ಕಳಿದ್ದಂತೆ..!

ಪ್ರಧಾನಿ ನರೇಂದ್ರ ಮೋದಿ, ಪಾಕ್ ಪ್ರಧಾನಿ ಇಮ್ರಾನ್ ಖಾನ ಒಂದೇ ತಾಯಿ ಮಕ್ಕಳಿದ್ದಂತೆ. ಮೋದಿ ಇಮ್ರಾನ್ ಖಾನ್ ಒಳಒಪ್ಪಂದ ಮಾಡಿಕೊಂಡಿದ್ದಾರೆ. ಇಮ್ರಾನ್ ಪಾಕಿಸ್ತಾನದಲ್ಲಿ ಭಾರತವನ್ನು ಬೈಯುತ್ತಾರೆ. ಮೋದಿ ಗೆಲ್ಲಲು ಭಾರತದಲ್ಲಿ ಪಾಕಿಸ್ತಾನವನ್ನು ಬೈಯುತ್ತಾರೆ ಎಂದು ರಮಾನಾಥ್ ರೈ ಹೇಳಿದ್ದಾರೆ. 
 

click me!