
ಲಂಡನ್: ವಿಶ್ವದ ಅತಿ ಪ್ರಾಚೀನ ರಾಜಮನೆತನವೆಂದೇ ಖ್ಯಾತವಾಗಿರುವ ಬ್ರಿಟಿಷ್ ರಾಜಮನೆತನದ ರಾಣಿ ಎರಡನೇ ಎಲಿಜೆಬೆತ್ ಅವರು ಇಸ್ಲಾಂ ಧರ್ಮ ಸಂಸ್ಥಾಪಕ ಪ್ರವಾದಿ ಮಹಮ್ಮದ್ ವಂಶಸ್ಥರು ಎಂಬುದಾಗಿ ಅಧ್ಯಯನವೊಂದು ತಿಳಿಸಿದ ವಿಚಾರ ಇದೀಗ ಬಹಿರಂಗವಾಗಿದೆ.
ವಿಶೇಷವೆಂದರೆ ರಾಣಿ ಎಲಿಜಬೆತ್ ಕ್ರೈಸ್ತ ಧರ್ಮೀಯರಾಗಿದ್ದರೆ, ಅವರ ಮೂಲ ಇಸ್ಲಾಂ ಎಂಬುದು.
ಬ್ರಿಟನ್ ರಾಜಮನೆತನದ ಇತಿಹಾಸಗಳ ಕುರಿತು ಸಮಗ್ರ ಮಾಹಿತಿ ಹೊಂದಿರುವ ಪ್ರಸಿದ್ಧ ಪುಸ್ತಕ ಪ್ರಕಟಣೆ ಸಂಸ್ಥೆ ಬೂರ್ಕೇಸ್ ಪೀರೆಜ್ ನಡೆಸಿದ ಅಧ್ಯಯನದಲ್ಲಿ ರಾಣಿ ಎಲಿಜೆಬೆತ್, ಮಹಮ್ಮದ್ ಅವರ 43ನೇ ತಲೆಮಾರಿನ ಕುಡಿ ಎಂದು 1986ರಲ್ಲೇ ತಿಳಿಸಿದೆ. ಇದರ ಸಮರ್ಥನೆಗಾಗಿ ಸಂಸ್ಥೆ ಪ್ರವಾದಿ ಮಹಮ್ಮದ್‌ರಿಂದ ಹಿಡಿದು ಇದೀಗ ಬ್ರಿಟನ್ ರಾಣಿ 2ನೇ ಎಲಿಜಬೆತ್‌ವರೆಗಿನ ವಂಶವೃಕ್ಷದ ಸಮಗ್ರ ಮಾಹಿತಿಯನ್ನು ದಾಖಲೆಗಳ ರೂಪದಲ್ಲಿ ನೀಡಿದೆ. ಇದೀಗ ಮೊರಾಕ್ಕೋ ದೇಶದ ಪತ್ರಿಕೆಯೊಂದು ಈ ವಿಷಯವನ್ನು ಮತ್ತೆ ಪ್ರಸ್ತಾಪಿಸುವುದರೊಂದಿಗೆ ವಿಷಯ ಮತ್ತೆ ಚರ್ಚೆಗೆ ಬಂದಿದೆ.
ಕ್ರೈಸ್ತೆ ಆಗಿದ್ದು ಹೀಗೆ: 11ನೇ ಶತಮಾನದಲ್ಲಿ ಪ್ರವಾದಿ ಮಹಮ್ಮದ್‌ರ ಕುಟುಂಬಕ್ಕೆ ಸೇರಿದ ರಾಣಿ ಝಾದಿಯಾ ಎಂಬಾಕೆ ಮನೆಯಿಂದ ಓಡಿಹೋಗಿ ಕ್ರೈಸ್ತಧರ್ಮಕ್ಕೆ ಮತಾಂತರವಾಗಿ ತನ್ನ ಹೆಸರನ್ನು ಇಸ್ಬೆಲ್ಲಾ ಎಂದು ಬದಲಿಸಿಕೊಂಡಿದ್ದರು. ನಂತರ ಈಕೆಯ ಕುಟುಂಬದ ಕುಡಿಯಾಗಿ ರಾಣಿ 2ನೇ ಎಲಿಜಬೆತ್ ಕೂಡಾ ಜನಿಸಿದ್ದಾರೆ. ಹೀಗಾಗಿ ಮುಸ್ಲಿಂ ಮೂಲದ ರಾಣಿಗೆ ಕ್ರೈಸ್ತ ಧರ್ಮದ ನಂಟು ಬಂದಿದೆ ಎಂದು ಪುಸ್ತಕ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.