IPL ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೋರಾಟ ಇಂದು ಆರಂಭಗೊಳ್ಳಲಿದೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಗೆಲುವಿಗಾಗಿ RCB ಅಭ್ಯಾಸ ನಡೆಸಿದೆ. ಇತ್ತ ವಿಧಾನಸಭೆಯಲ್ಲಿ ಬಿಜೆಪಿ ನಾಯಕರ ಒಳಜಗಳ ಸ್ಫೋಟಗೊಂಡಿದೆ. ಕೃಷಿ ಮಸೂದೆ ಗೊಂದಲಗಳಿಗೆ ಪ್ರಧಾನಿ ಮೋದಿ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ನಟ ದಿಗಂತ್‌ಗೆ ಶುರುವಾಯ್ತು ಟೆನ್ಶನ್, ರಾಜ್ಯಸಭೆಯಿಂದ 8 ಸದಸ್ಯರ ಅಮಾನತು ಸೇರಿದಂತೆ ಸೆಪ್ಟೆಂಬರ್ 21ರ ಟಾಪ್ 10 ಸುದ್ದಿ ಇಲ್ಲಿವೆ.
ರಾಜ್ಯಸಭೆಯಲ್ಲಿ ಕೋಲಾಹಲ: 8 ಸದಸ್ಯರನ್ನು 1 ವಾರ ಅಮಾನತು ಮಾಡಿದ ವೆಂಕಯ್ಯ ನಾಯ್ಡು!...
ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಎರಡು ಕೃಷಿ ಮಸೂದೆ ವಿರೋಧಿಸಿ ರಾಜ್ಯಸಭೆಯಲ್ಲಿ ಭಾನುವಾರ ಉಂಟಾದ ವಾಗ್ವಾದ, ಗದ್ದಲ ಘಟನೆಗೆ ಸಂಬಂಧಿಸಿದಂತೆ ರಾಜ್ಯಸಭೆ ಅಧ್ಯಕ್ಷ ವೆಂಕಯ್ಯನಾಯ್ಡು ಅವರು 8 ಮಂದಿ ರಾಜ್ಯಸಭಾ ಸದಸ್ಯರನ್ನು ಅಮಾನತು ಮಾಡಿದ್ದಾರೆ.
ಪ್ರಧಾನಿ ಇಮ್ರಾನ್ ಖಾನ್ ಉಚ್ಚಾಟನೆಗೆ ಬಿಗಿ ಪಟ್ಟು; ಪಾಕಿಸ್ತಾನ ವಿರೋಧ ಪಕ್ಷಗಳ ಮೈತ್ರಿ!...
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತಕ್ಷಣವೇ ರಾಜೀನಾಮೆಗೆ ಒತ್ತಾಯ ಹೆಚ್ಚಾಗುತ್ತಿದೆ. ರಾಜೀನಾಮೆ ನೀಡದಿದ್ದರೆ ಉಚ್ಚಾಟನೆಗೆ ಪಾಕಿಸ್ತಾನ ವಿರೋಧ ಪಕ್ಷಗಳು ಮೈತ್ರಿ ಮಾಡಿಕೊಂಡಿದೆ. ಇಷ್ಟೇ ಅಲ್ಲ ದೇಶವ್ಯಾಪಿ ಬೃಹತ್ ಪ್ರತಿಭಟನೆಗೆ ಸಜ್ಜಾಗಿದೆ.
ಕೃಷಿ ಮಸೂದೆ ಬಗ್ಗೆ ಮೋದಿ ಮಾತು: ಮಾರುಕಟ್ಟೆಗಳು ಈ ಹಿಂದಿನಂತೆ ಕಾರ್ಯ ನಿರ್ವಹಿಸಲಿವೆ!...
ಬಿಹಾರ ವಿಧಾನಸಭಾ ಚುನಾವಣೆ 2020 ರ ಮೊದಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ರಾಜ್ಯಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಪ್ರಧಾನ ಮಂತ್ರಿ 14,258 ಕೋಟಿ ರೂಪಾಯಿ 9 ಹೆದ್ದಾರಿ ಯೋಜನೆಗಳಿಗೆ ಶಿಲಾಬನ್ಯಾಸ ನೆರವೇರಿಸಿದ್ದಾರೆ. ಅಲ್ಲದೇ 45,945 ಹಳ್ಳಿಗಿಗೆ ಆಪ್ಟಿಕಲ್ ಫೈಬರ್ ಇಂಟರ್ನೆಟ್ ಸೇವೆಗಳ ಜಾರಿಗೊಳಿಸಲು 'ಘರ್ ತಕ್ ಫೈಬರ್' ಎಂಬ ಯೋಜನೆಯನ್ನೂ ಉದ್ಘಾಟಿಸಿದ್ದಾರೆ.
38 ವರ್ಷಗಳ ದಾಖಲೆ ಮಳೆ, ಉಡುಪಿ ಸಂಪೂರ್ಣ ಜಲಾವೃತ!...
38 ವರ್ಷಗಳ ನಂತರ, ಭಾನುವಾರ ಉಡುಪಿ ನಗರ ಸಂಪೂರ್ಣ ಜಲಾವೃತಗೊಂಡಿತು. ನಗರದ ಎಲ್ಲ ರಸ್ತೆಗಳಲ್ಲಿ ಒಂದು ಅಡಿಗಳಷ್ಟುನೀರು ತುಂಬಿಕೊಂಡಿತ್ತು. ಮುಖ್ಯವಾಗಿ ಉಡುಪಿ - ಮಣಿಪಾಲ ರಾ.ಹೆ.ಯಲ್ಲಿ ಇಂದ್ರಾಣಿ ಹೊಳೆಯಿಂದ ಪ್ರವಾಹ ಉಕ್ಕಿ, ಮೊಣಕಾಲಿನ ವರೆಗೆ ನೀರು ಹರಿಯಿತು. ಇದರಿಂದ ದಿನವಿಡೀ ಪ್ರಥಮ ಬಾರಿಗೆ ಈ ರಾ.ಹೆ.ಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು.
ಹೈದರಾಬಾದ್ ಬಗ್ಗುಬಡಿಯಲು ರೆಡಿಯಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು..!...
ಇಂದಿನ ಪಂದ್ಯ ಮೇಲ್ನೋಟಕ್ಕೆ ಇದು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಬ್ಯಾಟಿಂಗ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಬೌಲಿಂಗ್ ನಡುವಿನ ಹೋರಾಟ ಎಂದೇ ಬಿಂಬಿಸಲಾಗುತ್ತಿದೆ. ದಕ್ಷಿಣ ಭಾರತದ ಎರಡು ಪ್ರಬಲ ತಂಡಗಳ ನಡುವಿನ ಹೋರಾಟಕ್ಕೆ ದುಬೈ ಅಂತಾರಾಷ್ಟ್ರೀಯ ಮೈದಾನ ಸಾಕ್ಷಿಯಾಗಲಿದೆ.
ಡ್ರಗ್ಸ್ ಮಾಫಿಯಾ: ಕೂಲ್ ಆಗಿದ್ದ ದಿಗಂತ್ ಈಗ ಫುಲ್ ಟೆನ್ಶನ್
ಏನಗ್ತಾ ಇದೆ ಡ್ರಗ್ಸ್ ಮಾಫಿಯಾದಲ್ಲಿ, ಇಬ್ಬರು ತಾರೆಯರೇ ಟಾರ್ಗೆಟ್ ಆಗ್ತಿರೋದೇಕೆ..? ದೂದ್ಪೇಡ ದಿಂಗತ್‌ಗೆ ನಿದ್ದೆ ಇಲ್ಲ, ಕೆಲ್ಸ ಇಲ್ಲ ಫುಲ್ ಟೆನ್ಶನ್. ಸ್ಯಾಂಡಕ್‌ವುಡ್ ಹ್ಯಾಂಡ್‌ಸಂ ಗಯ್ ಕಳೆದ ಕೆಲವು ದಿನಗಳಿಂದ ಕೂಲ್ ಆಗಿಲ್ಲ.
ಏರಿಕೆ ಕಂಡಿದ್ದ ಚಿನ್ನದ ದರದಲ್ಲಿ ಭಾರಿ ಇಳಿಕೆ, ಇಲ್ಲಿದೆ ಸೆ. 21ರ ಬೆಲೆ!...
ಕೊರೋನಾ ನಡುವೆ ಚಿನ್ನದ ಬೇಡಿಕೆ ಕಡಿಮೆ ಇದ್ದರೂ ಉದ್ಯಮಗಳು ನೆಲ ಕಚ್ಚಿದ ಪರಿಣಾಮ ಅನೇಕ ಮಂದಿ ಹಳದಿ ತಾಮ್ರದಲ್ಲಿ ಹೂಡಿಕೆ ಮಾಡಿದ್ದರು. ಇದರ ಪರಿಣಾಮವೆಂಬಂತೆ ಬಂಗಾರ ದರ ಮಹಾಮಾರಿ ನಡುವೆಯೂ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು. ಹೀಗಿದ್ದರೂ ಕಳೆದ ಕೆಲ ದಿನಗಳಿಂದ ಏರಿಕೆ, ಇಳಿಕೆಯಾಗುಡುತ್ತಿದ್ದ ಚಿನ್ನದ ದರ ಗ್ರಾಹಕರನ್ನು ಗೊಂದಲಕ್ಕೀಡು ಮಾಡಿತ್ತು. ಆದರೀಗ ಮತ್ತೆ ಚಿನ್ನದ ಇಳಿಕೆಯಾಗಿದೆ.
ದೂರವಾದರೂ ಗಂಡನ ಬಿಡದ ಕಶ್ಯಪ್ ಪತ್ನಿ, #MeToo ಎಲ್ಲಾ ಸುಳ್ಳೇ ಸುಳ್ಳು!
ಬಾಲಿವುಡ್ ನಲ್ಲಿ ಮತ್ತೆ ಮೀಟೂ ಘಾಟು ಆರಂಭವಾಗಿದೆ. ನಟಿ ಪಾಯಲ್ ಘೋಷ್ ನಿರ್ದೇಶಕ ಅನುರಾಗ್ ಕಶ್ಯಪ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದು ಕಂಗನಾ ಸಹ ಪಾಯಲ್ ಗೆ ಬೆಂಬಲವಾಗಿ ನಿಂತಿದ್ದರು. ಆದರೆ ಈಗ ಅನುರಾಗ್ ಮಾಜಿ ಪತ್ನಿ ಮಾಜಿ ಗಂಡನ ಬೆಂಬಲಕ್ಕೆ ಬಂದಿದ್ದಾರೆ.
NLSIU ಪ್ರವೇಶ ಪರೀಕ್ಷೆ ರದ್ದು : ಸುಪ್ರೀಂಕೋರ್ಟ್ ಮಹತ್ವದ ಆದೇಶ...
ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿರ್ವಸಿಟಿ (ಎನ್ ಎಲ್ ಎಸ್ ಐಯು) ಸೆಪ್ಟೆಂಬರ್ 12ರಂದು ನಡೆಸಿದ್ದ ನ್ಯಾಷನಲ್ ಲಾ ಆಪ್ಟಿಟ್ಯೂಡ್ ಪರೀಕ್ಷೆ-2020 ಇದರ ಪ್ರತ್ಯೇಕ ಪ್ರವೇಶ ಪರೀಕ್ಷೆಯ ಅಧಿಸೂಚನೆಯನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ.
ರಾಜ್ಯದ ಬಿಜೆಪಿ ನಾಯಕರ ಒಳಜಗಳ ವಿಧಾನಸೌಧದಲ್ಲೇ ಸ್ಪೋಟವಾಗಿದೆ. ಇಂದು (ಸೋಮವಾರ) ವಿಧಾನಸೌಧದಲ್ಲಿ ಸಚಿವ ಹಾಗೂ ಶಾಸಕರೊಬ್ಬರು ಕಿತ್ತಾಡಿಕೊಂಡಿದ್ದು, ಅದರಕ್ಕೆ ಅಸಲಿ ಕಾರಣ ಈ ಕೆಳಗನಂತಿದೆ ನೋಡಿ.