ಕೊರೋನಾ ಭೀತಿ: 6 ದಿನಕ್ಕೆ ವಿಧಾನಮಂಡಲ ಅಧಿವೇಶನ ಮೊಟಕುಗೊಳಿಸಲು ತೀರ್ಮಾನ

By Suvarna News  |  First Published Sep 21, 2020, 4:43 PM IST

ಇಂದಿನಿಂದ ಪ್ರಾರಂಭವಾಗಿರುವ ಅಧಿವೇಶನಕ್ಕೆ ಕೊರೋನಾ ಭೀತಿ ಎದುರಾಗಿದ್ದು, ಆರು ದಿನಗಳಿಗೆ ವಿಧಾನಮಂಡಲ ಅಧಿವೇಶನ ಮುಕ್ತಾಯ ಮಾಡಲು ತೀರ್ಮಾನಿಸಲಾಗಿದೆ.


ಬೆಂಗಳೂರು, (ಸೆ.21): ಜನಪ್ರತಿನಿಧಿಗಳಿಗೆ ಕೊರೋನಾ ಸೋಂಕು ಹಿನ್ನೆಲೆಯಲ್ಲಿ ರಾಜ್ಯ ವಿಧಾನಮಂಡಲ ಅಧಿವೇಶನವನ್ನು ಶನಿವಾರ ಮುಕ್ತಾಯಗೊಳಿಸಲು ಸದನ ಕಾರ್ಯಕಲಾಪ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.ಕೋವಿಡ್-19 ಭೀತಿಯ ಕಾರಣದಿಂದ ಈ ಬಾರಿಯ ವಿಧಾನಮಂಡಲ ಅಧಿವೇಶನವನ್ನು 6 ದಿನಗಳಿಗೆ ಮುಕ್ತಾಯ ಮಾಡಲು ನಿರ್ಧರಿಸಲಾಗಿದೆ.

"

Tap to resize

Latest Videos

ಇಂದು (ಸೋಮವಾರ) ನಡೆದ ಸದನ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ  ರಾಜ್ಯ ವಿಧಾನಮಂಡಲ ಅಧಿವೇಶನವನ್ನು ಶನಿವಾರ (ಸೆ.26)  ಮುಕ್ತಾಯವಾಗಲಿದೆ.

ಅಧಿವೇಶನಕ್ಕೆ ಬರ​ಲು ಕೊರೋನಾ ಟೆಸ್ಟ್‌ ಕಡ್ಡಾಯ: ನೆಗೆಟಿವ್‌ ಬಂದ​ರಷ್ಟೇ ಎಂಟ್ರಿ

ಸಚಿವರು, ಶಾಸಕರಿಗೆ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಮೂರು ದಿನಕ್ಕೆ ಅಧಿವೇಶನ ಮೊಟಕುಗೊಳಿಸುವ ಬಗ್ಗೆ ಸರ್ಕಾರ ಸಲ್ಲಿಸಿದ ಪ್ರಸ್ತಾಪಕ್ಕೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದು, 6 ದಿನಗಳ ಕಾಲವಾದರೂ ಅಧಿವೇಶನ ನಡೆಸಬೇಕು ಎಂದು ಬೇಡಿಕೆ ಇಟ್ಟಿವೆ. ವಿಪಕ್ಷಗಳ ಒತ್ತಾಯಕ್ಕೆ ಮಣಿದು 6 ದಿನಗಳ ಕಾಲ ಅಂದರೆ ಶನಿವಾರದವರೆಗೂ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ನಡೆದ ಸದನ ಕಾರ್ಯಕಲಾಪ ಸಮಿತಿ ಸಭೆಯಲ್ಲಿ ಸಿಎಂ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾನೂನು ಸಚಿವ ಮಾಧುಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.

ಈ ಮೊದಲು ಇಂದು ಅಂದ್ರೆ ಸೆಪ್ಟೆಂಬರ್ 21ರಿಂದ 10 ದಿನಗಳ ಕಾಲ ಅಧಿವೇಶನ ನಡೆಸಲು ತೀರ್ಮಾನಿಸಲಾಗಿತ್ತು. ಇನ್ನು ಶಾಸಕರು, ಪರಿಷತ್ ಸದಸ್ಯರು ಮತ್ತು ಮಂತ್ರಿಗಳಿಗೆ ಕೊರೋನಾ ಸೋಂಕು ತಗುಲಿದೆ.

click me!