ಭಾರತ ಮೂಲದ ಹುಡುಗ ಬ್ರಿಟನ್ ದೇಶದ ಅತ್ಯಂತ ಕಿರಿಯ ಶ್ರೀಮಂತನಾದ ರೋಚಕ ಕಥೆ

Published : Oct 17, 2017, 08:17 PM ISTUpdated : Apr 11, 2018, 01:00 PM IST
ಭಾರತ ಮೂಲದ ಹುಡುಗ ಬ್ರಿಟನ್ ದೇಶದ ಅತ್ಯಂತ ಕಿರಿಯ ಶ್ರೀಮಂತನಾದ ರೋಚಕ ಕಥೆ

ಸಾರಾಂಶ

ಈತನ ಅಪ್ಪ-ಅಮ್ಮ ಇಬ್ಬರೂ ಕಿವುಡರು. ಈತನ ತಂದೆ 57 ವರ್ಷದ ಕೌಶಿಕ್ ಅವರು ಮನೆಗೆಲಸ ಮಾಡುತ್ತಾರೆ. ತಾಯಿ ರೇಣುಕಾ ಅವರು ಕಿವುಡರ ಶಾಲೆಯಲ್ಲಿ ಸಹಾಯಕ ಟೀಚರ್ ಆಗಿ ಕೆಲಸ ಮಾಡುತ್ತಾರೆ. ಇಂಥ ಹಿನ್ನೆಲೆಯಿಂದ ಬಂದ ಅಕ್ಷಯ್ ಈಗ ಈ ಎತ್ತರಕ್ಕೆ ಬೆಳೆಯುತ್ತಿರುವುದು ನಿಜಕ್ಕೂ ಸ್ಫೂರ್ತಿದಾಯಕ ಕಥೆ.

ಲಂಡನ್(ಅ. 17): ಭಾರತ ಮೂಲದ 19 ವರ್ಷದ ಅಕ್ಷಯ್ ರುಪಾರೇಲಿಯಾ ಎಂಬಾತ ಈಗ ಬ್ರಿಟನ್ ದೇಶದ ಹಾಟ್ ಸೆನ್ಸೇಶನ್ ಎನಿಸಿದ್ದಾನೆ. ಈತ ಆ ದೇಶದ ಅತ್ಯಂತ ಕಿರಿಯ ಶ್ರೀಮಂತರಲ್ಲೊಬ್ಬನೆನಿಸಿದ್ದಾನೆ. ಒಂದೇ ವರ್ಷದಲ್ಲಿ ಈತ 1.2 ಕೋಟಿ ಪೌಂಡ್(102 ಕೋಟಿ ರೂ) ವ್ಯವಹಾರ ನಡೆಸಿದ್ದಾನೆ. ಅಂದಹಾಗೆ ಈತನದ್ದು ಆನ್'ಲೈನ್ ರಿಯಲ್ ಎಸ್ಟೇಟ್ ಕಂಪನಿ. ಕೇವಲ ಒಂದೂಕಾಲು ವರ್ಷದಲ್ಲಿ ಈತನ ಕಂಪನಿಯು ಬ್ರಿಟನ್'ನ 18ನೇ ಅತಿದೊಡ್ಡ ರಿಯಲ್ ಎಸ್ಟೇಟ್ ಸಂಸ್ಥೆಯಾಗಿ ಬೆಳೆದಿದೆ.

ಕಂಪನಿ ಬೆಳೆದ ಕಥೆ..!
ಡೋರ್'ಸ್ಟೆಪ್ಸ್ doorsteps.co.uk ಎಂಬುದು ಈತನ ರಿಯಲ್ ಎಸ್ಟೇಟ್ ವ್ಯಾಪಾರದ ವೆಬ್'ಸೈಟ್. ಸಂಬಂಧಿಕರು ಹಾಗೂ ಅವರಿವರಿಂದ 7 ಸಾವಿರ ಪೌಂಡ್ಸ್(6 ಲಕ್ಷ ರೂ.) ಹಣದೊಂದಿಗೆ 2016ರಲ್ಲಿ ಶುರುವಾಯಿತು ಈತನ ಕಂಪನಿ. ವೆಬ್'ಸೈಟ್ ಶುರುವಾದ ಒಂದೆರಡು ವಾರಗಳಲ್ಲಿ ಸಸ್ಸೆಕ್ಸ್'ನಿಂದ ಒಬ್ಬ ಗ್ರಾಹಕ ಕರೆ ಮಾಡಿ ತನ್ನ ಜಮೀನನ್ನು ಮಾರಾಟ ಮಾಡಿಸಿಕೊಡುವಂತೆ ಕೇಳಿಕೊಳ್ಳುತ್ತಾರೆ. ಲಂಡನ್'ನಿಂದ ಸಸ್ಸೆಕ್ಸ್ ನೂರಕ್ಕೂ ಹೆಚ್ಚು ಕಿಮೀ ದೂರವಿದೆ. ಅಕ್ಷಯ್ ರುಪಾರೇಲಿಯಾ ಇನ್ನೂ ಶಾಲಾ ವಿದ್ಯಾರ್ಥಿ. ಕಾರ್ ಇರಲಿಲ್ಲ. ಲೈಸೆನ್ಸ್ ಕೂಡ ಇರಲಿಲ್ಲ. ಆತನ ಅಕ್ಕನ ಬಾಯ್'ಫ್ರೆಂಡ್'ಗೆ 40 ಪೌಂಡ್ ಹಣ ಕೊಟ್ಟು ಆತನ ಕಾರಿನಲ್ಲಿ ಹೋಗಿ ಗ್ರಾಹಕನ ಮನೆ ಮತ್ತು ಜಮೀನಿನ ಫೋಟೋಗಳನ್ನು ಪಡೆದು ಬರುತ್ತಾನೆ. ಇದಾಗಿ ಮೂರು ವಾರಗಳಲ್ಲಿ ಆ ಆಸ್ತಿ ಮಾರಾಟವಾಗುತ್ತದೆ. ಇದು ಆ ಹದಿಹರೆಯದ ಯುವಕನ ಮೊದಲ ಬ್ಯುಸಿನೆಸ್. ಅದೊಂದು ರೀತಿ ಸ್ಟೆಪಿಂಗ್ ಸ್ಟೋನ್. ಒಂದೇ ವರ್ಷದ ಅವಧಿಯಲ್ಲಿ 100 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿಪಾಸ್ತಿಗಳ ಮಾರಾಟ ಮಾಡಿಸಿದ್ದಾನೆ. 12 ಮಂದಿ ಈತನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಕಾಲ್'ಸೆಂಟರ್ ನೆರವು:
ಮೊದಮೊದಲು ತನ್ನ ಕಂಪನಿಗೆ ಬ್ಯುಸಿನೆಸ್ ಸಂಭಾಳಿಸಲು ನೆಚ್ಚಿಕೊಂಡಿದ್ದು ಕಾಲ್'ಸೆಂಟರ್'ನ್ನು. ತಾನು ಶಾಲೆಗೆ ಹೋಗುತ್ತಿದ್ದರಿಂದ ಕರೆಗಳನ್ನು ಸ್ವೀಕರಿಸಿ ವ್ಯವಹರಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ಕಾಲ್'ಸೆಂಟರ್'ಗೆ ತನ್ನ ಕರೆ ಸ್ವೀಕರಿಸುವ ಗುತ್ತಿಗೆ ನೀಡಿದೆ. ಶಾಲೆ ಮುಗಿದ ಬಳಿಕ, ಕರೆ ಮಾಡಿದವರಿಗೆ ಮರಳಿ ಕಾಲ್ ಮಾಡಿ ವ್ಯವಹಾರ ವಿಚಾರಿಸುತ್ತಿದ್ದ.

ಹೆಂಗಸರೇ ಶಕ್ತಿ:
ರಿಯಲ್ ಎಸ್ಟೇಟ್ ವ್ಯವಹಾರ ಎಂದರೆ ಏಜೆಂಟ್ ಅಥವಾ ಮಧ್ಯವರ್ತಿಗಳದ್ದೇ ಕಾರುಬಾರು. ಇಂಗ್ಲೆಂಡ್'ನಲ್ಲಿ ಸೂಟು ಬೂಟು ಟೈ ಹಾಕಿಕೊಂಡ ಏಜೆಂಟ್'ಗಳಿಗೆ ಸಿಕ್ಕಾಪಟ್ಟೆ ಕಮಿಷನ್ ಕೊಡಬೇಕು. ಆದರೆ, ಅಕ್ಷಯ್ ರುಪಾರೆಲಿಯಾ ವಿನೂತನ ತಂತ್ರ ರೂಪಿಸಿದ. ಬ್ರಿಟನ್'ನಾದ್ಯಂತ ಫ್ರೀಲ್ಯಾನ್ಸ್ ಆಗಿ ಕೆಲಸ ಮಾಡುವ ತಾಯಂದಿರ ನೆಟ್ವರ್ಕ್ ಕಟ್ಟಿದ. ತನ್ನ ಕ್ಲಯಂಟ್'ಗಳಿಗೆ ಮನೆ-ಜಮೀನಿನ ಸ್ಥಳ ತೋರಿಲುವ ಕೆಲಸವನ್ನು ಈ ತಾಯಂದಿರಿಗೆ ವಹಿಸಿದ. ಈತನ ಈ ನಿರ್ಧಾರಕ್ಕೆ ಬಲವಾದ ಕಾರಣವಿತ್ತು.

ತಾಯಂದಿರು ಪ್ರಾಮಾಣಿಕವಾಗಿರುತ್ತಾರೆ; ಸತ್ಯವನ್ನು ಹೇಳುತ್ತಾರೆ. ಇದು ತನಗೆ ಬಹಳ ಮುಖ್ಯ ಎಂದು ಅಕ್ಷಯ್ ಹೇಳುತ್ತಾನೆ.

ಕರುಣಾಜನಕ ಹಿನ್ನೆಲೆ:
ಅಂದಹಾಗೆ, ಅಕ್ಷಯ್'ನ ಕುಟುಂಬದ ಬಗ್ಗೆ ತಿಳಿಸದೇ ಹೋದರೆ ಆತನಿಗೆ ಅನ್ಯಾಯ ಮಾಡಿದಂತಾಗುತ್ತದೆ. ಈತನ ಅಪ್ಪ-ಅಮ್ಮ ಇಬ್ಬರೂ ಕಿವುಡರು. ಈತನ ತಂದೆ 57 ವರ್ಷದ ಕೌಶಿಕ್ ಅವರು ಮನೆಗೆಲಸ ಮಾಡುತ್ತಾರೆ. ತಾಯಿ ರೇಣುಕಾ ಅವರು ಕಿವುಡರ ಶಾಲೆಯಲ್ಲಿ ಸಹಾಯಕ ಟೀಚರ್ ಆಗಿ ಕೆಲಸ ಮಾಡುತ್ತಾರೆ. ಇಂಥ ಹಿನ್ನೆಲೆಯಿಂದ ಬಂದ ಅಕ್ಷಯ್ ಈಗ ಈ ಎತ್ತರಕ್ಕೆ ಬೆಳೆಯುತ್ತಿರುವುದು ನಿಜಕ್ಕೂ ಸ್ಫೂರ್ತಿದಾಯಕ ಕಥೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಾಲೀಕನ ನಿಧನಕ್ಕೆ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ ಶ್ವಾನ; ವಿಡಿಯೋ ನೋಡಿ ಭಾವುಕರಾದ ಜನರು
ವಿದೇಶದಲ್ಲಿ ಇರುವವರಿಗೂ ಗ್ಯಾರಂಟಿ ಲಾಭ ಬಗ್ಗೆ ಸಿಎಲ್ಪೀಲಿ ಪ್ರಸ್ತಾಪ: ಸಚಿವ ಮಧು ಬಂಗಾರಪ್ಪ