ಅಣ್ವಸ್ತ್ರ ಯುದ್ಧಕ್ಕೆ ಕ್ಷಣಗಣನೆ ಎಂದ ಉತ್ತರ ಕೊರಿಯಾ

By Suvarna Web DeskFirst Published Oct 17, 2017, 8:08 PM IST
Highlights

ಅಮೆರಿಕವು ನಮ್ಮ ರಾಷ್ಟ್ರದ ಅಧ್ಯಕ್ಷ ಕಿಮ್ ಜಾಂಗ್ ಉನ್ ಹತ್ಯೆಗೆ ರಹಸ್ಯ ಕಾರ್ಯಾಚರಣೆನಡೆಸುತ್ತಿದೆ. ಹೀಗಿರುವಾಗ ನಾವು ನಮ್ಮ ರಕ್ಷಣೆ ಮಾಡಿಕೊಳ್ಳೋದರಲ್ಲಿ ತಪ್ಪೇನಿದೆ..? ಎಂದು ರಾಯಭಾರಿಕಿಮ್ ಇನ್ ಪ್ರಶ್ನಿಸಿದ್ದಾರೆ.

ನ್ಯೂಯಾರ್ಕ್(ಅ.17): ನಮ್ಮ ವಿರುದ್ಧ ಯುದ್ಧ ಕಾರ್ಯಾಚರಣೆ ನಡೆಸಿದರೆ ಅಣ್ವಸ್ತ್ರ ಬಳಸುವುದಕ್ಕೆ ಹಿಂಜರಿಯುವುದಿಲ್ಲ ಎಂದು ಅಮೆರಿಕಾ ಹಾಗೂ ಮಿತ್ರ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದೆ.

 ಈ ಬಗ್ಗೆ ವಿಶ್ವಸಂಸ್ಥೆಯ ಸಭೆಯಲ್ಲಿ ಹೇಳಿಕೆ ನೀಡಿದ ಉ.ಕೊರಿಯಾ ರಾಯಭಾರಿ ಕಿಮ್ ಇನ್ ರೊಂಗ್, ಯಾವ ಕ್ಷಣದಲ್ಲಾದರೂ ಅಣ್ವಸ್ತ್ರ ಯುದ್ಧ ಶುರುವಾಗಬಹುದು' ಎಂದು ನೇರ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕದ ಬೆದರಿಕೆಯಿಂದಾಗಿಯೇ ಅಣ್ವಸ್ತ್ರ ತಯಾರಿಸಿದ್ದೇವೆ. ಅಮೆರಿಕದ ಎಲ್ಲ ಪ್ರದೇಶಗಳೂ ನಮ್ಮ ಗುರಿಯಲ್ಲಿ ಫಿಕ್ಸ್ ಆಗಿವೆ. 1970ರಿಂದಲೂ ಅಮೆರಿಕದಿಂದ ಉ.ಕೊರಿಯಾಗೆ ಬೆದರಿಕೆ ಇದೆ. ನಮ್ಮ ರಕ್ಷಣೆಗಾಗಿ ನಾವು ಅಣ್ವಸ್ತ್ರ ಬಳಸಲೂ ಸಿದ್ಧ. ಅಮೆರಿಕ ಸೇನೆ  ನಮ್ಮ ಗಡಿಯಲ್ಲಿ ಒಂದು ಇಂಚು ಒಳನುಗ್ಗಿದರೂ ಯುದ್ಧ ಸನ್ನಿಹಿತ. ನಮ್ಮ ದಾಳಿಯಿಂದ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ' ಎಂದು ತಿಳಿಸಿದ್ದಾರೆ.

ಅಮೆರಿಕವು ನಮ್ಮ ರಾಷ್ಟ್ರದ ಅಧ್ಯಕ್ಷ ಕಿಮ್ ಜಾಂಗ್ ಉನ್ ಹತ್ಯೆಗೆ ರಹಸ್ಯ ಕಾರ್ಯಾಚರಣೆ ನಡೆಸುತ್ತಿದೆ. ಹೀಗಿರುವಾಗ ನಾವು ನಮ್ಮ ರಕ್ಷಣೆ ಮಾಡಿಕೊಳ್ಳೋದರಲ್ಲಿ ತಪ್ಪೇನಿದೆ..? ಎಂದು ರಾಯಭಾರಿ ಕಿಮ್ ಇನ್  ಪ್ರಶ್ನಿಸಿದ್ದಾರೆ. ನಮ್ಮ ವಿರುದ್ಧ ಕಾರ್ಯಾಚರಣೆ ನಡೆಸಿದವರ ವಿರುದ್ಧ ಮಾತ್ರ ನಾವು ದಾಳಿ ನಡೆಸುತ್ತೇವೆ. ಅನ್ಯ ರಾಷ್ಟ್ರಗಳ ವಿರುದ್ಧ ನಾವು ದಾಳಿ ನಡೆಸುವುದಿಲ್ಲ' ಎಂದು ತಿಳಿಸಿದ್ದಾರೆ.

click me!