ಜೀವಾವಧಿ ನಿಷೇಧ: ಶ್ರೀಶಾಂತ್’ಗೆ ಬಿಗ್ ಶಾಕ್!

By Suvarna Web DeskFirst Published Oct 17, 2017, 7:49 PM IST
Highlights

ಕೆಲತಿಂಗಳ ಹಿಂದೆ ಕೇರಳ ಉಚ್ಚ ನ್ಯಾಯಾಲಯದ ತೀರ್ಪಿನಿಂದ ನಿರಾಳರಾಗಿದ್ದ ಭಾರತೀಯ ತಂಡದ ಸ್ಪಿನ್ನರ್ ಶ್ರೀಶಾಂತ್’ಗೆ ಇನ್ನೊಂದು ಆಘಾತ ಉಂಟಾಗಿದೆ.

ಕೊಚ್ಚಿ(ಅ.17): ಕೆಲತಿಂಗಳ ಹಿಂದೆ ಕೇರಳ ಉಚ್ಚ ನ್ಯಾಯಾಲಯದ ತೀರ್ಪಿನಿಂದ ನಿರಾಳರಾಗಿದ್ದ ಭಾರತೀಯ ತಂಡದ ಸ್ಪಿನ್ನರ್ ಶ್ರೀಶಾಂತ್’ಗೆ ಇನ್ನೊಂದು ಆಘಾತ ಉಂಟಾಗಿದೆ.

ಸ್ಪಾಟ್-ಪಿಕ್ಸಿಂಗ್ ಆರೋಪದಡಿ ಬಿಸಿಸಿಐಯು ಎಸ್. ಶ್ರೀಶಾಂತ್'ಗೆ  ವಿಧಿಸಿದ್ದ ಜೀವಾವಧಿ ನಿಷೇಧವನ್ನು ಕೇರಳ ಉಚ್ಚ ನ್ಯಾಯಾಲಯ ಕಳೆದ ಆಗಸ್ಟ್’ನಲ್ಲಿ ತೆರವುಗೊಳಿಸಿದ್ದರೂ, ಬಿಸಿಸಿಐಯ ಮೇಲ್ಮನವಿಯಂತೆ ಹೈಕೋರ್ಟಿನ ವಿಭಾಗಿಯ ಪೀಠವು ಇಂದು ನಿಷೇಧವನ್ನು ಮುಂದುವರೆಸಿ ಆದೇಶ ಹೊರಡಿಸಿದೆ.

2015ರಲ್ಲಿ ದೆಹಲಿ ನ್ಯಾಯಾಲಯವು ಶ್ರೀಶಾಂತ್'ರನ್ನು ಆರೋಪ ಮುಕ್ತಗೊಳಿಸಿದ್ದರೂ, ಬಿಸಿಸಿಐ ಮಾತ್ರ ಕೇರಳ ವೇಗಿಯ ಮೇಲಿನ ಜೀವಾವಧಿ ನಿಷೇಧವನ್ನು ಹಿಂತೆಗೆದುಕೊಂಡಿರಲಿಲ್ಲ. ಹೀಗಾಗಿ ಬಿಸಿಸಿಐ ನಿಲುವನ್ನು ಪ್ರಶ್ನಿಸಿ ಶ್ರೀಶಾಂತ್ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು.

ಆದರೆ ಇದೀಗ ನ್ಯಾ. ನವನೀತ್ ಪ್ರಸಾದ್ ಸಿಂಗ್ ನೇತೃತ್ವದ ವಿಭಾಗೀಯ ಪೀಠವು ಬಿಸಿಸಿಐಯ ಕ್ರಮವನ್ನು ಎತ್ತಿ ಹಿಡಿದಿದೆ. ಬಿಸಿಸಿಐನ ಈ ಹಠಮಾರಿ ನಿಲುವು ನನ್ನ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಯಾಗಿದೆ. ನನ್ನ ಮೇಲಿರುವ ಜೀವಾವಧಿ ನಿಷೇಧವನ್ನು ಪ್ರಶ್ನಿಸಿ ಶ್ರೀಶಾಂತ್ ಕೇರಳ ಹೈಕೋರ್ಟ್ ಮೊರೆಹೋಗಿದ್ದರು.

2013ರ ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆ ಎಸ್. ಶ್ರೀಶಾಂತ್ ಸ್ಪಾಟ್-ಪಿಕ್ಸಿಂಗ್ ನಡೆಸಿದ್ದಾರೆ ಎನ್ನುವ ಆರೋಪದಡಿ ಬಿಸಿಸಿಐ ಅವರ ಮೇಲೆ ಜೀವಾವಧಿ ಶಿಕ್ಷೆ ವಿಧಿಸಿತ್ತು.  

click me!