ಬಾಂಬ್ ಬೀಳುವಾಗ ಹಕ್ಕುಗಳ ಚಿಂತೆ ಮಾಡ್ತಾರಾ?: ಯುಎಸ್ ಕಾಂಗ್ರೆಸ್‌ನಲ್ಲಿ ರವಿ ಭಾತ್ರಾ!

By Web DeskFirst Published Oct 23, 2019, 1:26 PM IST
Highlights

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ ಹಿನ್ನೆಲೆ| ಅಮೆರಿಕ ಕಾಂಗ್ರೆಸ್‌ನಲ್ಲಿ ಪ್ರತಿಧ್ವನಿಸಿದ ಭಾರತದ ಧ್ವನಿ| ಯುಎಸ್ ಕಾಂಗ್ರೆಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಭಾರತೀಯ ಮೂಲದ ಅಟಾರ್ನಿ ರವಿ ಭಾತ್ರಾ| ಯುಎಸ್ ಕಾಂಗ್ರೆಸ್‌ನಲ್ಲಿ ದಕ್ಷಿಣ ಏಷ್ಯಾದಲ್ಲಿ ಮಾನವ ಹಕ್ಕುಳ ಉಲ್ಲಂಘನೆ ಕುರಿತಾದ ಚರ್ಚೆ| ಭಯೋತ್ಪಾದನೆಯಿಂದ ನಲುಗಿರುವ ಕಣಿವೆ ಜನ ಮಾನವ ಹಕ್ಕುಗಳ ಬಗ್ಗೆ ಚಿಂತಿಸುತ್ತಿಲ್ಲ ಎಂದ ರವಿ| ಪಾಕಿಸ್ತಾನ ಪ್ರೇರಿತ ಸುಳ್ಳು ಸುದ್ದಿ ನಂಬಿ ಭಾರತದ ವಿರುದ್ಧ ಷಡ್ಯಂತ್ರ ಎಂದ ಪತ್ರಕರ್ತೆ ಆರತಿ ಟಿಕೂ| ಕಣಿವೆಗೆ ಸಂಬಂಧಿಸಿದಂತೆ ಭಾರತೀಯರ ಸಮರ್ಥ ವಾದ ಮಂಡನೆಗೆ ಯುಎಸ್ ಕಾಂಗ್ರೆಸ್ ನಿಶ್ಯಬ್ಧ| 

ವಾಷಿಂಗ್ಟನ್(ಅ.23):'ಮನೆಯಿಂದ ಹೊರ ಹೋದರೆ ಗಡಿಯಾಚೆಯಿಂದ ಬಾಂಬ್ ಬೀಳುತ್ತವೆ, ಕಿಟಕಿ ತೆರೆದರೆ ಭಯೋತ್ಪಾದಕರ ಗುಂಡು ಮನೆಯೊಳಗೆ ಹೊಕ್ಕುತ್ತವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಾನವ ತನ್ನ ಜೀವ ರಕ್ಷಣೆಯ ಕುರಿತು ಚಿಂತಿಸುತ್ತಾನೆಯೇ ಹೊರತು, ತನ್ನ ಹಕ್ಕುಗಳ ಬಗ್ಗೆ ಅಲ್ಲ..' 

ಇದು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಭಾರತದ ಕ್ರಮವನ್ನು, ಅಮೆರಿಕದ ಕಾಂಗ್ರೆಸ್‌ನಲ್ಲಿ ಭಾರತೀಯ ಮೂಲದ ವಕೀಲ ರವಿ ಭಾತ್ರಾ ಸಮರ್ಥಿಸಿಕೊಂಡ ಪರಿ.

ಕಾಶ್ಮೀರ ವಿಚಾರವಾಗಿ ಪಾಕ್‌ಗೆ ಬೆಂಬಲ: ಈ ದೇಶದ ಪ್ರವಾಸ ರದ್ದುಗೊಳಿಸಿದ ಮೋದಿ!

ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ದಕ್ಷಿಣ ಏಷ್ಯಾದಲ್ಲಿ ಹೆಚ್ಚುತ್ತಿರುವ   ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಅಮೆರಿಕ ಕಾಂಗ್ರೆಸ್‌ನಲ್ಲಿ ಚರ್ಚೆ ನಡೆಯುತ್ತಿದೆ. ಈ ವೇಳೆ ಕಣಿವೆಯಲ್ಲಿ ಭಾರತ ಸರ್ಕಾರದಿಂದ ನಡೆದಿದೆ ಎನ್ನಲಾದ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಅಪಸ್ವರ ಕೇಳಿ ಬಂದಿದೆ.

ಈ ವೇಳೆ ಕಾಂಗ್ರೆಸ್‌ ಸಭೆ ಉದ್ದೇಶಿಸಿ ಮಾತನಾಡಿದ ನ್ಯೂಯಾರ್ಕ್ ಅಟಾರ್ನಿ, ಭಾರತೀಯ ಮೂಲದ ರವಿ ಭಾತ್ರಾ, ಭಯೋತ್ಪಾದನೆಯಿಂದ ಬಳಲಿ ಬೆಂಡಾಗಿರುವ ರಾಜ್ಯವನ್ನು ರಕ್ಷಿಸಲು ಆರ್ಟಿಕಲ್ 370 ರದ್ದತಿ ಅನಿವಾರ್ಯ ಕ್ರಮ ಎಂದು ಸಮರ್ಥನೆ ನೀಡಿದರು.

ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನದ ಮಾನ ಹರಾಜು ಹಾಕಿದ ಶಶಿ ತರೂರ್!

2008ರಲ್ಲಿ ಮುಂಬೈನ ತಾಜ್ ಹೊಟೇಲ್ ಮೇಲೆ ಪಾಕ್ ಉಗ್ರರು ನಡೆಸಿದ ಅಮಾನವೀಯ ದಾಳಿಯಲ್ಲಿ ಕೇವಲ ಭಾರತೀಯರಲ್ಲದೇ ಅಮೆರಿಕನ್ ಪ್ರಜೆಗಳೂ ಸತ್ತಿದ್ದಾರೆ. ಭಯೋತ್ಪಾದನೆ ಯ ಕರಾಳ ಮುಖವನ್ನು ಅಮೆರಿಕಕ್ಕೆ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ ಎಂದು ರವಿ ಭಾತ್ರಾ ಪರೋಕ್ಷವಾಗಿ 9/11 ದಾಳಿಯನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.

ಪಾಕಿಸ್ತಾನ ಭಾರತದ ಮೇಲೆ ನಿರಂತರ ಯುದ್ಧದಲ್ಲಿ ನಿರತವಾಗಿದ್ದು, ಗಡಿಯಾಚೆಯಿಂದ ನಿರಂತರವಾಗಿ ಕಾಶ್ಮೀರದ ಮೇಲೆ ಬಾಂಬ್ ದಾಳಿ ನಡೆಸುತ್ತಲೇ ಇದೆ. ಇಮತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾಶ್ಮೀರಿ ಜನ ಜೀವ ರಕ್ಷಣೆ ಬಯುಸುತ್ತಿದ್ದಾರೆಯೇ ಹೊರತು ಹಕ್ಕುಗಳ ರಕ್ಷಣೆಯನ್ನಲ್ಲ ಎಂದು ರವಿ ಭಾತ್ರಾ ಹೇಳಿದ್ದಾರೆ.

ಕಾಶ್ಮೀರ ಮನವರಿಕೆಯಲ್ಲಿ ನಾವು ವಿಫಲ: ಇಮ್ರಾನ್ ಆತ್ಮಸಾಕ್ಷಿಗೆ ಸೆಲ್ಯೂಟ್!

ಪ್ರಧಾನಿ ಮೋದಿ ಕಾಶ್ಮೀರಿ ಜನ ಮಾನವ ಹಕ್ಕುಗಳ ರಕ್ಷಣೆಗೆ ಬದ್ಧ ಎಂದು ಸ್ಪಷ್ಟಪಡಿಸಿದ್ದು, ವಿಶೇಷ ಸ್ಥಾನಮಾನ ರದ್ದತಿ ಬಳಿಕ ಕಣಿವೆಯನ್ನು ಅತ್ಯಂತ ಕಾಳಜಿಯಿಂದ ಸಲಹುತ್ತಿದ್ದಾರೆ ಎಂದು ರವಿ ಭಾತ್ರಾ ಯುಎಸ್ ಕಾಂಗ್ರೆಸ್‌ಗೆ ಭರವಸೆ ನೀಡಿದ್ದಾರೆ.

ಇದೇ ವೇಳೆ ಪಾಕಿಸ್ತಾನ ಪ್ರೇರಿತ ಸುಳ್ಳು ಸುದ್ದಿಗಳನ್ನು ನಂಬಿ ಯುಎಸ್ ಕಾಂಗ್ರೆಸ್ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತ ವಿರೋಧಿ ನಿರ್ಣಯ ಕೈಗೊಳ್ಳಲು ಮುಂದಾಗಿದೆ ಎಂದು ಭಾರತೀಯ ಪತ್ರಕರ್ತೆ ಆರತಿ ಟಿಕೂ ಗಂಭೀಊರ ಆರೋಪ ಮಾಡಿದ್ದಾರೆ.

J&K ನೋಡಿ ಸಾಹೇಬ್: ಟ್ರಂಪ್ ಭೇಟಿ ವೇಳೆ ಅಳಲಿರುವ ಖಾನ್ ಸಾಹೇಬ್!

ಕಣಿವೆಯಲ್ಲಿ ನಡೆಯುತ್ತಿರುವ ದೌರ್ಜನ್ಯಕ್ಕೆ ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆ ಕಾರಣ ಎಂದಿರುವ ಆರತಿ, ಮಾನವ ಹಕ್ಕುಗಳ ಉಲ್ಲಂಘನೆ ನೆಪದಲ್ಲಿ ಭಾರತ ವಿರೋಧಿ ನಿರ್ಣಯ  ಕೈಗೊಳ್ಳಲು ಷಡ್ಯಂತ್ರ ನಡೆದಿದೆ ಎಂದು ಆರತಿ ಸಭೆಯಲ್ಲಿ ಹರಿಹಾಯ್ದಿದ್ದಾರೆ. 

ಪಾಕ್ ಉತ್ಪ್ರೇಕ್ಷೆಯ ದೂರು ಕಡೆಗಣಿಸಿ: ವಿಶ್ವಸಂಸ್ಥೆಗೆ ಭಾರತ ಮನವಿ!

click me!