ದೂರದರ್ಶನಕ್ಕೀಗ 60,  DD 1 ಜತೆ ಆಡಿ ಬೆಳೆದವರಿಗೆ 40... ಆ ಕಾಲವೇ ಹಾಗಿತ್ತು!

By Web DeskFirst Published Sep 16, 2019, 8:15 PM IST
Highlights

ಹ್ಯಾಪಿ ಬರ್ತಡೆ ಡಿಡಿ 1,  ಇಂದಿಗೂ ನೀನೆ ನಂಬರ್ 1/ ದೂರದರ್ಶನಕ್ಕೀಗ 60,  ಡಿಡಿ 1ಜತೆ ಆಡಿ ಬೆಳೆದವರಿಗೆ 40. ಆ ಕಾಲವೇ ಹಾಗಿತ್ತು/ ದೂರದರ್ಶನದೊಂದಿಗೆ ನೆನಪುಗಳ ಯಾನ

ನವದೆಹಲಿ(ಸೆ.16)  ದೂರದರ್ಶನ, ಡಿಡಿ 1 ಅಥವಾ ಈಗಿನ ಚಂದನ ವಾಹಿನಿ ಎಂದರೆ ಅದೆಷ್ಟೊ ಯುವಜನರಿಗೆ ಗೊತ್ತೆ ಇರಲಿಕ್ಕಿಲ್ಲ ಬಿಡಿ.. ಇದು ಯಾವ ಟಿಆರ್ ಪಿಗಾಗಿಯೂ ಹೋರಾಟ ಮಾಡಲ್ಲ ಬಿಡಿ.. ಇಲ್ಲಿ ಬಿಗ್ ಬ್ರೇಕಿಂಗ್, Exclusive ತಾಪತ್ರಯವೂ ಇಲ್ಲ ಬಿಡಿ.

1980-90 ರ ದಶಕದ ಮಕ್ಕಳ ಬಾಲ್ಯಕ್ಕೂ ದೂರದರ್ಶನಕ್ಕೂ ನಿಕಟಾನಿಕಟ ಸಂಬಂಧ. 1990ರ ದಶಕದ ಮಕ್ಕಳು ಇದನ್ನು ಅನುಭವಿಸಿದ್ದಾರೆ. ಊರಿಗೊಂದೇ ಟಿವಿ.. ಅಂಟೇನಾ ಮೂಲಕ ಮನೆಗೆ ಬರುವ ಒಂದೇ ಒಂದು ವಾಹಿನಿ.. ಒಂದಿಷ್ಟು ಸಮಯ ಮಾತ್ರ ಕನ್ನಡ ಉಳಿದೆಲ್ಲ ಸಮಯ ಹಿಂದಿ... ಹದಿನೈದೇ ನಿಮಿಷದ ವಾರ್ತೆಯಲ್ಲಿ ಸಮಗ್ರ ಸುದ್ದಿಗಳ ಕಟ್ಟಿ ಕೊಡುವ ತಾಕತ್ತು.. ಭಾನುವಾರ ಮಧ್ಯಾಹ್ನಕ್ಕೊಂದು ಕನ್ನಡ ಸಿನಿಮಾ.. ಮಹಾಭಾರತ-ರಾಮಾಯಣ ಧಾರಾವಾಹಿಗಳ ಅನಾವರಣ... ಹೀಗೆ ಅಂದಿನ ದೂರದರ್ಶನ ಜತೆ ಬೆಳೆದು ಬಂದವರಿಗೆ ನೆನಪುಗಳು ಮಧುರವಾಗಿಯೇ ಇರುತ್ತವೆ.

1995  ರ ನಂತರ ಭಾರತಲ್ಲಿ ಖಾಸಗಿ ವಾಹಿನಿಗಳ ಅಬ್ಬರ ಶುರುವಾಯಿತು. ಒಂದೊಂದೆ ಕಂಪನಿಗಳು ಕಾಲಿಟ್ಟವು.. ಜನರಿಗೆ ಚಾನಲ್ ಆಯ್ಕೆ ಸ್ವಾತಂತ್ರ್ಯ ಸಿಕ್ಕಿತು. ದೂರದರ್ಶನದ ಜಾಗದಲ್ಲಿ 24*7 ಗಳು ಕಾಣಿಸಿಕೊಂಡವು. ಮನರಂಜನೆ ಚಾನಲ್ ಗಳು ಹುಟ್ಟಿಕೊಂಡವು. ಹೊಸ ಬಗೆಯ ಧಾರಾವಾಹಿ ಯುಗ ಆರಂಭವಾಯಿತು. ಇದೆಲ್ಲದರ ಪರಿಣಾಮ ಜನ ಅವರವರ ಆಯ್ಕೆ ಎಂದುಕೊಂಡು ಚಾನಲ್ ಬದಲಾಯಿಸತೊಡಗಿದರು.

ಡಿಡಿಯ ಜನಪ್ರಿಯ ಕಾರ‍್ಯಕ್ರಮಗಳ ಹೆಸರಿನ ಉತ್ಪನ್ನ ಅಮೆಜಾನ್‌ನಲ್ಲಿ

ಹಾಗೆಂದ ಮಾತ್ರಕ್ಕೆ ಇಂದು ಜನ ದೂರದರ್ಶನ ನೋಡುವುದೇ ಇಲ್ಲ ಎಂದಲ್ಲ.. ಟಿಆರ್ ಪಿ ರೇಟಿಂಗ್ ಪಟ್ಟಿಯಲ್ಲಿ ಅದರದ್ದೇ ಆದ ಸ್ಥಾನ ಇದ್ದೇ ಇದೆ. ಸೆಲೆಕ್ಟಡ್ ವೀವರ್ಸ್ ಇದ್ದೆ ಇದ್ದಾರೆ. ಚಿತ್ರಮಂಜರಿಯ ಅಭಿಮಾನಿಗಳು ಇಂದಿಗೂ ಜತೆಯಾಗುತ್ತಾರೆ.  

ಅರವತ್ತು ವರುಷ ಪೂರ್ಣಗೊಂಡ ನೆನಪಿಗಾಗಿ ನವದೆಹಲಿಯಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಿದ್ದಾರೆ.  ಬಾಲಿವುಡ್  ಬಿಗ್ ಬಿ ಅಮಿತಾಬ್ ಬಚ್ಚನ್ ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡಿವೆ.

ಬಿಗ್ ಬಿ ದನಿಯಲ್ಲೇ ಮೂಡಿಬಂದಿರುವ ಈ ಕವನದ ಸಾಲನ್ನು ಕೇಳುತ್ತ ನೀವು ಡಿಡಿ 1 ದೂರದರ್ಶನಕ್ಕೆ ಜನ್ಮದಿನದ ಶುಭಾಶಯ ಹೇಳಿಬಿಡಿ... ನಮ್ಮ ಕಡೆಯಿಂದ ಇನ್ನೊಮ್ಮೆ ಹ್ಯಾಪಿ ಬರ್ತ್ ಡೆ ಡಿಡಿ 1.

 


 

click me!