ಜಿಲ್ಲಾ ಉಸ್ತುವಾರಿ ಸಚಿವರ ನೇಮಕ: ನಿಮ್ಮ ಜಿಲ್ಲೆಗೆ ಯಾರು?

By Web DeskFirst Published Sep 16, 2019, 6:01 PM IST
Highlights

ಕೊನೆಗೂ ಜಿಲ್ಲಾ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆದೇಶ ಹೊರಡಿಸಿದ್ದಾರೆ.ಹಾಗಾದ್ರೆ ನಿಮ್ಮ ಜಿಲ್ಲೆಗೆ ಯಾರು ಉಸ್ತುವಾರಿ ಮಂತ್ರಿ? ಪಟ್ಟಿ ಈ ಕೆಳಗಿನಂತಿದೆ. 

ಬೆಂಗಳೂರು, [ಸೆ.16]: ಕೊನೆಗೂ ಜಿಲ್ಲಾ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿ ಇಂದು [ಸೋಮವಾರ] ಸಿಎಂ ಬಿ.ಎಸ್.ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.

ತೀವ್ರ ಪೈಪೋಟಿಗೆ ಕಾರಣವಾಗಿದ್ದ ಬೆಂಗಳೂರು ನಗರ ಉಸ್ತುವಾರಿ ಹೊಣೆಯನ್ನು ಯಾರಿಗೂ ನೀಡದೇ ಯಡಿಯೂರಪ್ಪ ಅವರು ತಮ್ಮ ಬಳಿ ಇಟ್ಟುಕೊಂಡಿದ್ದಾರೆ.

ಇನ್ನು ಉಪಮುಖ್ಯಮಂತ್ರಿ ಸಿಕಿಲ್ಲ ಬಳ್ಳಾರಿ ಉಸ್ತುವಾರಿಯಾದರೂ ಕೊಡಿ ಎಂದು ಯಡಿಯೂರಪ್ಪ ಬಳಿ ಡಿಮ್ಯಾಂಡ್ ಮಾಡಿದ್ದ ಆರೋಗ್ಯ ಸಚಿವ ಶ್ರೀರಾಮುಲುಗೆ ನಿರಾಸೆಯಾಗಿದೆ. ಹಾಗಾದ್ರೆ ಯಾರಿಗೆ ಯಾವ ಜಿಲ್ಲಾ ಉಸ್ತುವಾರಿ ಎನ್ನುವ ಪಟ್ಟಿ ಈ ಕೆಳಗಿನಂತಿದೆ.       

ಬೆಂಗಳೂರು ನಗರ-ಬಿಎಸ್ ಯಡಿಯೂರಪ್ಪ
ಜಗದೀಶ್ ಶೆಟ್ಟರ್-ಬೆಳಗಾವಿ, ಧಾರವಾಡ
ನಾಗೇಶ್ - ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ
ಸುರೇಶ್ ಕುಮಾರ್ - ಚಾಮರಾಜನಗರ ಜಿಲ್ಲಾ ಉಸ್ತುವಾರಿ
ಶ್ರೀರಾಮುಲು - ಚಿತ್ರದುರ್ಗ, ರಾಯಚೂರು ಉಸ್ತುವಾರಿ
ಸಿ.ಟಿ.ರವಿ - ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ
ಅಶ್ವತ್ ನಾರಾಯಣ - ರಾಮನಗರ ಮತ್ತು ಚಿಕ್ಕಬಳ್ಳಾಪುರ 
ಬಸವರಾಜ ಬೊಮ್ಮಾಯಿ - ಉಡುಪಿ ಮತ್ತು ಹಾವೇರಿ
ವಿ.ಸೋಮಣ್ಣ - ಮೈಸೂರು ಮತ್ತು ಕೊಡಗು
ಮಾಧುಸ್ವಾಮಿ - ತುಮಕೂರು ಮತ್ತು ಹಾಸನ ಉಸ್ತುವಾರಿ
ಕೋಟಾ ಶ್ರೀನಿವಾಸ ಪೂಜಾರಿ - ದಕ್ಷಿಣ ಕನ್ನಡ
ಗೋವಿಂದ ಕಾರಜೋಳ - ಬಾಗಲಕೋಟೆ, ಕಲಬುರಗಿ
ಆರ್.ಅಶೋಕ್ - ಬೆಂಗಳೂರು ಗ್ರಾ. ಮತ್ತು ಮಂಡ್ಯ
ಸಿ.ಸಿ. ಪಾಟೀಲ್ - ಗದಗ ಮತ್ತು ವಿಜಯಪುರ
ಲಕ್ಷ್ಮಣ ಸವದಿ - ಬಳ್ಳಾರಿ ಮತ್ತು ಕೊಪ್ಪಳ ಉಸ್ತುವಾರಿ
ಕೆ.ಎಸ್.ಈಶ್ವರಪ್ಪ - ಶಿವಮೊಗ್ಗ ಮತ್ತು ದಾವಣಗೆರೆ
ಶಶಿಕಲಾ ಜೊಲ್ಲೆ - ಉತ್ತರ ಕನ್ನಡ ಉಸ್ತುವಾರಿ ಸಚಿವೆ
ಪ್ರಭು ಚೌಹಾಣ್ - ಬೀದರ್, ಯಾದಗಿರಿ ಉಸ್ತುವಾರಿ

click me!