HD ರೇವಣ್ಣಗೆ ಬಿಗ್ ಶಾಕ್ ಕೊಟ್ಟ BS ಯಡಿಯೂರಪ್ಪ

Published : Sep 16, 2019, 05:36 PM ISTUpdated : Sep 16, 2019, 05:41 PM IST
HD ರೇವಣ್ಣಗೆ ಬಿಗ್ ಶಾಕ್ ಕೊಟ್ಟ BS ಯಡಿಯೂರಪ್ಪ

ಸಾರಾಂಶ

ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ದೋಸ್ತಿ ಸರ್ಕಾರದ ಹಗರಣಗಳ ತನಿಖೆಗೆ  ಮುಂದಾಗಿದ್ದಾರೆ. ಈಗಾಗಲೇ ಹಲವು ಯೋಜನೆಗಳಲ್ಲಿ ಅವ್ಯವಹಾರಗಳ ನಡೆದಿವೆ ಎಂದು ತನಿಖೆಗೆ ಸೂಚಿಸಲಾಗಿದೆ. ಇದೀಗ ಎಚ್‌ಡಿ ರೇವಣ್ಣ ಅವರಿಗೂ ಸಹ ಬಿಎಸ್‌ವೈ ಬಿಗ್ ಶಾಸಕ ಕೋಟ್ಟಿದ್ದಾರೆ.  

ಬೆಂಗಳೂರು, (ಸೆ.16): ಮೈತ್ರಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಎಲಿವೇಟೆಡ್ ಕಾರಿಡಾರ್ ಯೋಜನೆಯನ್ನು ಬಿಎಸ್‌ವೈ ನೇತೃತ್ವದ ರಾಜ್ಯ ಸರ್ಕಾರ ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ  ಎಚ್.ಡಿ.ರೇವಣ್ಣ ಲೋಕೋಪಯೋಗಿ ಸಚಿವರಾಗಿದ್ದಗ ಎಲಿವೇಟರ್ ಕಾರಿಡಾರ್ ಯೋಜನೆಗೆ ಟೆಂಡರ್ ಕರೆಯಲಾಗಿತ್ತು.  ಹೆಬ್ಬಾಳದ ಬ್ಯಾಪ್ಟಿಸ್ಟ್‌ ಆಸ್ಪತ್ರೆಯಿಂದ ಮೇಕ್ರಿ ಸರ್ಕಲ್‌ ಮಾರ್ಗವಾಗಿ ಸಿಲ್ಕ್‌ಬೋರ್ಡ್‌ವರೆಗೆ ಎಲಿವೇಟೆಡ್‌ ಕಾರಿಡಾರ್‌ 21.54ಕಿ.ಮೀಟರ್ ರಸ್ತೆಯ 6855 ಕೋಟಿ ರು ಅಂದಾಜಿನ ಟೆಂಡರ್ ಇದಾಗಿತ್ತು. 

ಅತ್ತ ಡಿಕೆಶಿಗೆ ಇಡಿ ಉರುಳು.. ಇತ್ತ HDKಗೂ ಎದುರಾಯ್ತು ಕಂಟಕ

ಇದೀಗ  ಬಿಜೆಪಿ ಸರ್ಕಾರ ಅದನ್ನು ರದ್ದು ಮಾಡಿ ಇಂದು (ಸೋಮವಾರ) ಆದೇಶ ಹೊರಡಿಸಿದೆ. ಈ ಮೂಲಕ ಎಚ್‌.ಡಿ. ರೇವಣ್ಣಗೆ ಬಿಎಸ್ ಯಡಿಯೂರಪ್ಪ ಬಿಗ್ ಶಾಸಕ ನೀಡಿದ್ದಾರೆ.

3 ಪ್ಯಾಕೇಜ್‌ಗಳಲ್ಲಿ ಆಹ್ವಾನಿಸಿರುವ ಟೆಂಡರ್ ಪ್ರಕ್ರಿಯೆಯಲ್ಲಿ ಅವ್ಯವಹಾರಗಳು ನಡೆದಿವೆ ಎಂಬ ದೂರುಗಳು ಮತ್ತು ಯೋಜನೆ ಕ್ರಿಯಾ ಯೋಜನೆಯಲ್ಲಿ ತಯಾರಿಕೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಯೋಜನೆಯ ಟೆಂಡರ್‌ನ್ನು ರದ್ದುಗೊಳಿಸಲಾಗುತ್ತಿದೆ ಎಂದು ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಘೋಷಣೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯನ್ನು ಪರಿಹರಿಸುವ ದೃಷ್ಟಿಯಿಂದ ಎಲಿವೇಟೆಡ್ ಕಾರಿಡಾರ್ ಯೋಜನೆಗೆದ ಕುಮಾರಸ್ವಾಮಿ ನೇತೃತ್ವದ ಮೈ[ತ್ರಿ ಸರ್ಕಾರ ಮುಂದಾಗಿತ್ತು.

ಬರೋಬ್ಬರಿ 87.87 ಕಿ.ಮೀಟರ್ ಉದ್ದದ ಎಲಿವೇಟೆಡ್ ಕಾರಿಡಾರ್ ರಸ್ತೆ ನಿರ್ಮಾಣ ಮಾಡವ ಉದ್ದೇಶ ಮೈತ್ರಿ ಸರ್ಕಾರ ನಿರ್ಧರಿಸಿತ್ತು. ಇದರ ಮೊದಲ ಹಂತವಾಗಿ 21.54ಕಿ.ಮೀಟರ್ ರಸ್ತೆಯ 6855 ಕೋಟಿ ರು. ಅಂದಾಜು ಹಣದಲ್ಲಿ ನಿರ್ಮಿಸಲು ಟೆಂಡರ್ ನೀಡಲಾಗಿತ್ತು.

ಡಾ.ಜಿ.ಪರಮೇಶ್ವರ ಅವರು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದರೂ, ರೇವಣ್ಣ ಅವರು ಎಲಿವೇಟೆಡ್ ಕಾರಿಡಾರ್ ಯೋಜನೆಯಲಲ್ಇ ಮೂಗು ತೂರಿಸಿದ್ದರು ಎನ್ನುವ ಮಾತುಗಳು ಸಹ ಕೇಳಿಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಲಾರ: ಅಪ್ಪ- ಅಮ್ಮನ ವಿಚ್ಚೇಧನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!
ಟೊಯೋಟಾ ಹೈಡ್ರೋಜನ್ ಕಾರು ಮೂಲಕ ಸಂಸತ್‌ಗೆ ಬಂದ ಪ್ರಹ್ಲಾದ್ ಜೋಶಿ, ಇದರ ಲಾಭವೇನು?