ಬಿಜೆಪಿಗೆ ಸೌರಾಷ್ಟ್ರದ್ದೇ ಚಿಂತೆ

By Suvarna Web DeskFirst Published Nov 21, 2017, 5:20 PM IST
Highlights

ಗುಜರಾತ್ ಚುನಾವಣೆಗಾಗಿನ ಕಾಂಗ್ರೆಸ್ ಮತ್ತು ಬಿಜೆಪಿಗಳ ಟಿಕೆಟ್ ಹಂಚಿಕೆ ಪ್ರಕ್ರಿಯೆ ಬಹುತೇಕ ಮುಗಿದಿದ್ದು, ಬಿಜೆಪಿಗೆ ತನ್ನ ಒಂದು ಕಾಲದ ಭದ್ರಕೋಟೆ ಸೌರಾಷ್ಟ್ರ ಮತ್ತು ಉತ್ತರ ಗುಜರಾತ್‌ಗಳಲ್ಲಿ ಕಾಂಗ್ರೆಸ್‌ನ ಬೆಳೆಯುತ್ತಿರುವ ಜನಪ್ರಿಯತೆ ನೋಡಿ ಚಿಂತೆ ಶುರುವಾಗಿದೆ. ಕಾಂಗ್ರೆಸ್‌ಗೆ ತನ್ನ ಭದ್ರಕೋಟೆ ದಕ್ಷಿಣ ಮತ್ತು ಮಧ್ಯ ಗುಜರಾತ್‌ಗಳಲ್ಲಿ ಬಿಜೆಪಿ ಗೆಲುವನ್ನು ನಿಲ್ಲಿಸುವುದು ಹೇಗೆ ಎಂಬುದೇ ತಿಳಿಯುತ್ತಿಲ್ಲ.

ಸೌರಾಷ್ಟ್ರದಲ್ಲಿ 54 ಸೀಟ್‌ಗಳಿದ್ದರೆ ಉತ್ತರ ಗುಜರಾತ್ ನಲ್ಲಿ 53 ಸೀಟ್‌ಗಳಿವೆ. ಈ ಎರಡು ಭಾಗಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಹೆಚ್ಚು ಕಡಿಮೆ ಸಮಬಲದಲ್ಲಿವೆ. ಆದರೆ ದಕ್ಷಿಣ ಮತ್ತು ಮಧ್ಯ ಗುಜರಾತ್‌ಗಳಲ್ಲಿ ಬಿಜೆಪಿ 75 ಸ್ಥಾನಗಳಲ್ಲಿ ಸಿಂಹಪಾಲನ್ನು ಪಡೆಯುವ ಸಾಧ್ಯತೆ ಕಾಣುತ್ತಿದೆ. ಪಾಟಿದಾರ ಪಟೇಲರ ಬಾಹುಳ್ಯ ಇರುವ ಸೌರಾಷ್ಟ್ರದ 54 ಸೀಟ್‌ಗಳಲ್ಲಿ ಎಷ್ಟು ಗೆಲ್ಲಬಹುದು ಎಂಬುದು ಬಹುತೇಕ ಗುಜರಾತ್ ಭವಿಷ್ಯ ಬರೆಯಲಿದೆ.

ಕಳೆದ ಬಾರಿ ಕೇಶುಭಾಯಿ ಪಟೇಲರ ಪರಿವರ್ತನಾ ಪಾರ್ಟಿ 8 ಪ್ರತಿಶತ ಮತ ಪಡೆದಿದ್ದರೂ ಕೂಡ ಬಿಜೆಪಿ 45 ಪ್ರತಿಶತ ಮತಗಳೊಂದಿಗೆ 34 ಸ್ಥಾನ ಗೆದ್ದುಕೊಂಡಿತ್ತು. ಆದರೆ ಸೌರಾಷ್ಟ್ರದಲ್ಲಿ ಪಟೇಲರ ಬಿಜೆಪಿ ಮೇಲಿನ ಸಿಟ್ಟು ಉಳಿದ ಪ್ರದೇಶಗಳಲ್ಲಿ ಬಿಜೆಪಿ ಜೊತೆಗೆ ಇತರ ಸಣ್ಣ ಸಣ್ಣ ಸಮುದಾಯಗಳು ಬರಲು ಸಹಾಯ ಮಾಡುತ್ತಿದೆ. ಗುಜರಾತ್‌ನಲ್ಲಿ

ಓಡಾಡಿ ಬರುತ್ತಿರುವ ದೆಹಲಿ ಪತ್ರಕರ್ತರು ಹೇಳುವ ಪ್ರಕಾರ ನಗರ ಪ್ರದೇಶಗಳಲ್ಲಿ ಬಿಜೆಪಿಗೆ ಅಷ್ಟೇನೂ ಸಮಸ್ಯೆ ಇಲ್ಲ. ಆದರೆ ಗ್ರಾಮೀಣ ಗುಜರಾತಿಗಳು ಮಾತ್ರ ಬಿಜೆಪಿ ಬಗ್ಗೆ ಖುಷಿಯಾಗಿಲ್ಲವಂತೆ. ಅಂದ ಹಾಗೆ ಮೋದಿ ಸಾಹೇಬರು ಮೊದಲ ಹಂತದ ಚುನಾವಣೆಯ ಪ್ರಚಾರದ ಕೊನೆಯ ಮೂರು ದಿನ ಸೌರಾಷ್ಟ್ರದ ಸೂರತ್‌ನಲ್ಲಿಯೇ ಬೀಡು ಬಿಡಲಿದ್ದಾರಂತೆ.

ಇಂಡಿಯಾ ಗೇಟ್’ನಲ್ಲಿ ಪ್ರಶಾಂತ್ ನಾತು

click me!