ಕೊರೋನಾ ಲಸಿಕೆ ಮೂಲಕ ಇತರ ರಾಷ್ಟ್ರಗಳಿಗೆ ನೆರವಾಗುತ್ತಿರುವ ಭಾರತಕ್ಕೆ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಬ್ರೆಜಿಲ್, ವಿಶ್ವ ಆರೋಗ್ಯ ಸಂಸ್ಥೆ ಭಾರತಕ್ಕೆ ಧನ್ಯವಾದ ಹೇಳಿದ್ದಾರೆ. ಕೇರಳದಲ್ಲಿ ಚಿರತೆ ಕೊಂದು ಅಡುಗೆ ಮಾಡಿ ತಿಂದ ಅಮಾನವೀಯ ಘಟನೆ ನಡೆದಿದೆ. ರಚಿತಾ ರಾಮ್ ಮದುವೆಯಾಗುತ್ತಿದ್ದಾರಾ? 3 ದಿನವಾದರೂ ರಾಗಿಣಿಗೆ ಬಿಡುಗಡೆ ಭಾಗ್ಯ ಇಲ್ಲ ಸೇರಿದಂತೆ ಜನವರಿ 22ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.
ಚಿರತೆ ಹಿಡಿದು ಕೊಂದು ಅಡುಗೆ ಮಾಡಿ ತಿಂದರು..! ಐವರು ಅರೆಸ್ಟ್...
undefined
ಗರ್ಭಿಣಿ ಆನೆಗೆ ಸ್ಫೋಟಕವಿಟ್ಟು ಕೊಂದ ಅಮಾನವೀಯ ಘಟನೆ ನಡೆದ ಕೇರಳದಲ್ಲಿ ಈಗ ಮತ್ತೊಂದು ಕ್ರೂರ ಘಟನೆ ನಡೆದಿದೆ. ಚಿರತೆಯೊಂದನ್ನು ಹಿಡಿದು ತಂದು, ಕೊಂದು ಮಾಂಸ ಮಾಡಿ ಬೇಯಿಸಿ ಅಡುಗೆ ಮಾಡಿ ತಿಂದಿರುವ ಘಟನೆ ನಡೆದಿದೆ.
ಸಂಜೀವಿನಿ ಹೊತ್ತ ಹನುಮಂತನ ಫೋಟೋ ಜೊತೆ ಮೋದಿಗೆ ಥ್ಯಾಂಕ್ಸ್ ಹೇಳಿದ ಬ್ರೆಜಿಲ್ ಅಧ್ಯಕ್ಷ...
ಜಗತ್ತಿನಲ್ಲಿಯೇ ಅತ್ಯಧಿಕ ವ್ಯಾಕ್ಸಿನ್ ತಯಾರಿಸುವ ಭಾರತ ಈಗಾಗಲೇ ಬಹಳಷ್ಟು ದೇಶಗಳಿಗೆ ನೆರವಾಗಿದೆ. ಇದೀಗ ಕೊರೋನಾ ಲಸಿಕೆಗಾಗಿ ಬ್ರೆಜಿಲ್ ಅಧ್ಯಕ್ಷ ಮೋದಿಗೆ ಥ್ಯಾಂಕ್ಸ್ ಹೆಳಿದ್ದಾರೆ.
ಗೂಗಲ್‌ನಲ್ಲಿ India National Cricket Team ಸರ್ಚ್ ಮಾಡಿ, ನಿಮಗೊಂದು ಸರ್ಪ್ರೈಸ್ ಇದೆ..!...
ಪ್ರಮುಖ ಆಟಗಾರರ ಅನುಪಸ್ಥಿತಿಯ ಹೊರತಾಗಿಯೂ ಟೀಂ ಇಂಡಿಯಾದ ಈ ಸಾಧನೆಗೆ ಜಗತ್ತಿನ ನಾನಾ ಮೂಲೆಗಳಿಂದ ಶಹಬ್ಬಾಸ್‌ಗಿರಿ ವ್ಯಕ್ತವಾಗಿದೆ. ಇದೀಗ ನೀವು ಗೂಗಲ್‌ನಲ್ಲಿ India National Cricket Team ಅಂತ ಸರ್ಚ್ ಮಾಡಿದರೆ, ನಿಮಗೂ ಅಚ್ಚರಿ ಕಾದಿದೆ.
ಬೇಲ್ ಸಿಕ್ಕು 3 ದಿನವಾದ್ರೂ ರಾಗಿಣಿಗಿಲ್ಲ ಬಿಡುಗಡೆ ಭಾಗ್ಯ, ಜೈಲಲ್ಲೇ ತುಪ್ಪದ ಬೆಡಗಿ ಪರದಾಟ...
ಡ್ರಗ್ಸ್ ಕೇಸ್‌ನಲ್ಲಿ ಸುಪ್ರೀಂ ಕೋರ್ಟ್‌ನಿಂದ ಬೇಲ್ ಸಿಕ್ಕಿ ಮೂರು ದಿನವಾದರೂ ನಟಿ ರಾಗಿಣಿಗೆ ಬಿಡುಗಡೆ ಭಾಗ್ಯವಿಲ್ಲ. ಇದಿರಂದ ತುಪ್ಪದ ಬೆಡಗಿ ಹೊರಬರಲು ಪರದಾಡುತ್ತಿದ್ದಾರೆ.
ಹಳೆ 100 ರೂ ನೋಟು ಮಾರ್ಚ್‌ಗೆ ಅಮಾನ್ಯ : ನಿಮ್ಮ ಮುಂದಿರುವ ಆಯ್ಕೆ ಇದು.!...
100 ರು. ಮುಖಬೆಲೆಯ ಹಳೆಯ ನೋಟುಗಳು ಮಾರ್ಚ್‌ನಲ್ಲಿ ಅಮಾನ್ಯಗೊಳ್ಳಲಿವೆ. ಸ್ವಚ್ಛವಾದ ಹೊಸ ಸೀರಿಸ್‌ನ ನೋಟುಗಳು ಜನತೆಯಲ್ಲಿ ಚಲಾವಣೆಯಲ್ಲಿ ಇರುವಂತೆ ಮಾಡುವ ಉದ್ದೇಶ ಹೊಂದಿರುವ ಭಾರತೀಯ ರಿಸರ್ವ್ ಬ್ಯಾಂಕ್ ಹಳೆಯ ಸೀರಿಸ್‌ನ ಎಲ್ಲ ನೋಟುಗಳನ್ನು ಹಿಂಪಡೆಯುವ ನಿರ್ಧಾರಕ್ಕೆ ಬಂದಿದೆ.
ಭಾರತದಲ್ಲಿ ಡುಕಾಟಿ BS6 ಸ್ಕ್ರಾಂಬ್ಲರ್ ಎಡಿಶನ್ ಬೈಕ್ ಬಿಡುಗಡೆ!...
ಡುಕಾಟಿ ಮಲ್ಟಿಸ್ಟ್ರಾಡಾ 950 ಎಸ್ ರೂ.15.49 ಲಕ್ಷಗಳಿಗೆ ಬಿಡುಗಡೆ(ಭಾರತದಾದ್ಯಂತ ಎಕ್ಸ್-ಶೋರೂಂ) ಎಲ್ಲ ಡುಕಾಟಿ ಡೀಲರ್‍ಶಿಪ್‍ಗಳಲ್ಲಿ ಬುಕಿಂಗ್‍ಗಳು ಈಗ ತೆರೆದಿವೆ ಮತ್ತು ಡೆಲಿವರಿಗಳು ನವೆಂಬರ್ 2ನೇ ವಾರದಿಂದ ಪ್ರಾರಂಭವಾಗುತ್ತವೆ.
ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶಕ!...
ವಿಶ್ವವೇ ಕೊರೋನಾ ವೈರಸ್‌ನಿಂದ ತತ್ತರಿಸಿ ಹೋಗಿದೆ. ಎಲ್ಲಾ ದೇಶಗಳು ಲಸಿಕೆಗಾಗಿ ಕಾಯುತ್ತಿವೆ. ಭಾರತದಲ್ಲಿ ಈಗಾಗಲೇ ಲಸಿಕೆ ವಿತರಣೆ ಕಾರ್ಯ ನಡೆಯುತ್ತದೆ. ಕೊರೋನಾ ವಿರುದ್ದ ಭಾರತದ ಹೋರಾಟ ಇಷ್ಟಕ್ಕೆ ಸಿಮೀತವಾಗಿಲ್ಲ. ಇದೀಗ ಭಾರತ ಇತರ ದೇಶಗಳಿಗೂ ಲಸಿಕೆ ಪೂರೈಕೆ ಮಾಡುತ್ತಿದೆ. ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ಕೆ ಇದೀಗ ವಿಶ್ವ ಆರೋಗ್ಯ ಸಂಸ್ಥೆ ಧನ್ಯವಾದ ಹೇಳಿದೆ.
ಶಿವಮೊಗ್ಗ-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್...
ಶಿವಮೊಗ್ಗ ಹಾಗೂ ಬೆಂಗಳೂರು ರೈಲು ಪ್ರಯಾಣಿಕರಿಗೆ ಇಲ್ಲಿದೆ ಗುಡ್ ನ್ಯೂಸ್. ಜನಶತಾಬ್ದಿ ಹಾಗೂ ಮೈಸೂರು ರೈಲ್ವೆ ಸೇವೆಯಲ್ಲಾಗಿದೆ ಅನುಕೂಲಕರ ಬದಲಾವಣೆ. ಏನದು..?
ಸೇವೆ ಸ್ಥಗಿತ : ಗೂಗಲ್ ಎಚ್ಚರಿಕೆ...
ಗೂಗಲ್ ತನ್ನ ಸೇವೆ ಸ್ಥಗಿತ ಮಾಡುವ ಬಗ್ಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಸುದ್ದಿಗಳಿಗೆ ಹಣ ನೀಡಬೇಕು ಎನ್ನುವ ವಿಚಾರದ ಬಗ್ಗೆ ಗೂಗಲ್ ಎಚ್ಚರಿಸಿದೆ.
ಅರೆ ರಚ್ಚು ಮದುವೆಗೆ ಮುಹೂರ್ತ ಫಿಕ್ಸ್ ಆಯ್ತಾ..? ಆಮಂತ್ರಣ ನೋಡಿ...
ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಮದ್ವೆಯಾಗ್ತಿದ್ದಾರಾ..? ಮದ್ವೆ ಮುಹೂರ್ತವೂ ಫಿಕ್ಸ್ ಆಯ್ತಾ..?