ಸೌದಿ ದೊರೆಯ ವಿಮಾನದಲ್ಲಿ ಅಮೆರಿಕಕ್ಕೆ ಬಂದ ಇಮ್ರಾನ್!

By Web Desk  |  First Published Sep 22, 2019, 3:41 PM IST

ಅಮೆರಿಕಕ್ಕೆ ಬಂದಿಳಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್| ಸೌದಿ ದೊರೆಯ ವಿಶೇಷ ವಿಮಾನದಲ್ಲಿ ಅಮೆರಿಕಕ್ಕೆ ಬಂದ ಇಮ್ರಾನ್| ಇಮ್ರಾನ್ ಗೆ ತಮ್ಮ ವಿಶೇಷ ವಿಮಾನ ಕೊಟ್ಟ ಸೌದಿ ದೊರೆ ಮೊಹ್ಮದ್ ಬಿನ್ ಸಲ್ಮಾನ್| ಸೌದಿ ದೊರೆಯೊಂದಿಗೆ ಕಾಶ್ಮೀರ ವಿಚಾರ ಮಾತನಾಡಿದ ಪಾಕ್ ಪ್ರಧಾನಿ| ಕಾಶ್ಮೀರ ವಿಚಾರದಲ್ಲಿ ಸೌದಿ ಬೆಂಬಲ ಪಾಕಿಸ್ತಾನಕ್ಕಂತೆ|


ವಾಷಿಂಗ್ಟನ್(ಸೆ.22): ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಭಾಗವಹಿಸಲು ಅಮೆರಿಕಕ್ಕೆ ಬಂದಿಳಿದಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಸೌದಿ ದೊರೆ ಮೊಹ್ಮದ್ ಬಿನ್ ಸಲ್ಮಾನ್ ಅವರ ವಿಶೇಷ ವಿಮಾನದಲ್ಲಿ ಬರುವ ಮೂಲಕ ಗಮನ ಸೆಳೆದಿದ್ದಾರೆ.

ಇಮ್ರಾನ್ ಅಮೆರಿಕಕ್ಕೆ ತೆರಳಲು ಸೌದಿ ದೊರೆ ಖುದ್ದಾಗಿ ತಮ್ಮ ವಿಶೇಷ ವಿಮಾನವನ್ನು ನೀಡಿದ್ದಾರೆ ಎನ್ನಲಾಗಿದ್ದು, ಆತ್ಮೀಯ ಗೆಳೆಯ ಇಮ್ರಾನ್ ತಮ್ಮದೇ ವಿಮಾನದಲ್ಲಿ ಪ್ರಯಾಣಿಸಲಿ ಎಂದು ಸಲ್ಮಾನ್ ತಿಳಿಸಿದ್ದಾರೆ ಎನ್ನಲಾಗಿದೆ.

Tap to resize

Latest Videos

ಕಾಶ್ಮೀರ ವಿಚಾರ ಮಾತನನಾಡಲು ಸೌದಿಗೆ ತೆರಳಿದ್ದ ಇಮ್ರಾನ್, ಅಲ್ಲಿಂದ ನೇರವಾಗಿ ಅಮೆರಿಕಕ್ಕೆ ಬಂದಿಳಿದಿದ್ದು, ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನಕ್ಕೆ ಸೌದಿ ಬೆಂಬಲ ಸೂಚಿಸಿದೆ ಎಂದು ವಿದೇಶಾಂಗ ಸಚಿಬ ಮೆಹಮೂದ್ ಖುರೇಷಿ ತಿಳಿಸಿದ್ದಾರೆ.

click me!