
ನವದೆಹಲಿ(ಏ.29): ಒಂದು ವೇಳೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಗಿಲ್ಗಿಟ್ ಮತ್ತು ಬಲ್ಟಿಸ್ತಾನದಲ್ಲಿ ಜನಮತಗಣನೆ ನಡೆದರೆ ಜನರು ಭಾರತದ ಪರ ಮತಚಲಾಯಿಸಲಿದ್ದಾರೆ. ಏಕೆಂದರೆ ಭಾರತದವರು ಈ ಪ್ರದೇಶವನ್ನು ಯಾವತ್ತೂ ಆಕ್ರಮಣ ಮಾಡಿಲ್ಲ ಎಂದು ಬಲೂಚಿಸ್ತಾನದ ಪ್ರಮುಖ ಮುಖಂಡ ಅಬ್ದಲ್ ಹಮೀದ್ ಖಾನ್ ಹೇಳಿಕೆ ನೀಡಿದ್ದಾರೆ.
ಚೀನಾ ಪ್ರಯೋಜಿತ ಆರ್ಥಿಕ ಕಾರಿಡಾರ್ ವಿಚಾರವಾಗಿ ಸ್ಥಳೀಯರು ಮತ್ತು ಸರ್ಕಾರದ ಮಧ್ಯೆ ಉದ್ವಿಗ್ನ ಪರಿಸ್ಥಿತಿ ನೆಲೆಸಿದ್ದು, ಪಾಕಿಸ್ತಾನ ಹೆಚ್ಚುವರಿ ಭದ್ರತೆಯನ್ನು ನಿಯೋಜಿರುವಾಗಲೇ ಈ ಹೇಳಿಕೆ ಹೊರಬಿದ್ದಿದೆ.
ಅಲ್ಲದೇ ಒಂದು ವೇಳೆ ಬಲೂಚಿಸ್ತಾನದಲ್ಲಿ ಜನಮತಗಣನೆ ನಡೆದರೂ, ಬಲೂಚಿಸ್ತಾನದ ಜನರು ಭಾರತದ ಪರವಾಗಿ ಮತ ಚಲಾಯಿಸಲಿದ್ದಾರೆ. ಏಕೆಂದರೆ ಭಾರತ ನಮ್ಮ ಮೇಲೆ ದೌರ್ಜನ್ಯ ಎಸಗಿಲ್ಲ ಎಂದು ಹಮೀದ್ ಖಾನ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.