ಪ್ರಿಯತಮೆಯೊಂದಿಗೆ ರಾಹುಲ್ ಗಾಂಧಿ ಪಾರ್ಟಿ !

Published : Apr 29, 2017, 02:40 PM ISTUpdated : Apr 11, 2018, 01:04 PM IST
ಪ್ರಿಯತಮೆಯೊಂದಿಗೆ ರಾಹುಲ್ ಗಾಂಧಿ ಪಾರ್ಟಿ !

ಸಾರಾಂಶ

ರಾಹುಲ್‌ ಅವರು ರೆಸ್ಟೋರೆಂಟ್‌ ಒಂದರಲ್ಲಿ ಇತರ ಮೂವರೊಂದಿಗೆ ಕುಳಿತಿದ್ದಾರೆ. ಇತರ ಮೂ​ವ​ರಲ್ಲಿ ಓರ್ವ ಯುವತಿ ರಾಹುಲ್‌ ಪಕ್ಕದಲ್ಲೇ ಕುಳಿತಿ​ದ್ದಾಳೆ. ಇದು ರಾಹುಲ್‌ ಅವರ ಪ್ರೇಯಸಿ ಎಂಬ ಊಹಾಪೋಹಕ್ಕೆ ಇಂಬು ನೀಡುತ್ತದೆ. ಹಾಗಾದರೆ ಈ ಯುವತಿ ನಿಜಕ್ಕೂ ಯಾರು? ಎಲ್ಲಿಯವಳು? ಹೆಸರೇನು ಎಂಬ ಪ್ರಶ್ನೆಯೂ ಕಾಡುತ್ತದೆ.

ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಇನ್ನೂ ಏಕೆ ಮದುವೆಯಾಗಿಲ್ಲ ಎಂಬ ಬಗ್ಗೆ ಆಗಾಗ ಚರ್ಚೆಗಳು ನಡೆದೇ ಇರುತ್ತವೆ. ಈಗ ‘ರಾಹುಲ್‌ ಗಾಂಧಿ ಅವರ ಗರ್ಲ್ ಫ್ರೆಂಡ್ ಇವರು' ಎಂದು ರಾಹುಲ್‌ ಅವರು ವಿದೇಶೀ ಯುವತಿಯೊಬ್ಬಳೊಡನೆ ಕುಳಿತ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.
ರಾಹುಲ್‌ ಅವರು ರೆಸ್ಟೋರೆಂಟ್‌ ಒಂದರಲ್ಲಿ ಇತರ ಮೂವರೊಂದಿಗೆ ಕುಳಿತಿದ್ದಾರೆ. ಇತರ ಮೂ​ವ​ರಲ್ಲಿ ಓರ್ವ ಯುವತಿ ರಾಹುಲ್‌ ಪಕ್ಕದಲ್ಲೇ ಕುಳಿತಿ​ದ್ದಾಳೆ. ಇದು ರಾಹುಲ್‌ ಅವರ ಪ್ರೇಯಸಿ ಎಂಬ ಊಹಾಪೋಹಕ್ಕೆ ಇಂಬು ನೀಡುತ್ತದೆ. ಹಾಗಾದರೆ ಈ ಯುವತಿ ನಿಜಕ್ಕೂ ಯಾರು? ಎಲ್ಲಿಯವಳು? ಹೆಸರೇನು ಎಂಬ ಪ್ರಶ್ನೆಯೂ ಕಾಡುತ್ತದೆ.
ಈ ಬಗ್ಗೆ ಮಾಧ್ಯಮಗಳು ಚಿತ್ರದ ಮೂಲ ಹುಡುಕಲು ಹೊರಟಾಗ ದೊರಕಿದ್ದು ಕುತೂಹಲಕರ ಉತ್ತರ. ಈ ಚಿತ್ರವನ್ನು ಬಿಡುಗಡೆ ಮಾಡಿದ್ದು ಇತ್ತೀಚೆಗೆ ರಾಹುಲ್‌ರನ್ನು ಬೈದಿದ್ದಕ್ಕಾಗಿ ಕಾಂಗ್ರೆಸ್‌ನಿಂದ ಉಚ್ಚಾಟನೆಗೆ ಒಳಗಾದ ದಿಲ್ಲಿ ಕಾಂಗ್ರೆಸ್‌ ನಾಯಕಿ ಬರ್ಖಾ ಶುಕ್ಲಾ. ‘ಗಂಭೀರತೆ ಇಲ್ಲದ ರಾಹುಲ್‌ ಪಾರ್ಟಿ ಮಾಡ್ತಾರೆ' ಎಂದು ಬರ್ಖಾ ಇತ್ತೀಚೆಗೆ ಫೋಟೋ ಸಮೇತ ಆಪಾದಿಸಿದ್ದರು. ಈ ಫೋಟೋ ತೆಗೆದಿದ್ದು ಇಟಲಿಯಲ್ಲಿ. ರಾಹುಲ್‌ ಇತ್ತೀಚೆಗೆ ಇಟಲಿ ಪ್ರವಾಸಕ್ಕೆ ಹೋಗಿದ್ದು, ಅಲ್ಲಿ ಇರುವ ತಮ್ಮ ಬಂಧುಗಳನ್ನು ಭೇಟಿಯಾಗಿ ಹೋಟೆಲಿಗೆ ಊಟಕ್ಕೆ ಹೋಗಿದ್ದರು. ಯುವತಿ ಕೂಡ ರಾಹುಲ್‌ ಬಂಧುವಂತೆ. ಪ್ರೇಯಸಿ ಅಲ್ಲವಂತೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್ ಕೊಟ್ಟ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್! ಖಾತೆಗೆ ಯಾವಾಗ ಬರುತ್ತೆ ಹಣ? ಇಲ್ಲಿದೆ ವಿವರ
ಪ್ರೀತಿ ವಿರೋಧಿಸಿದ ತಂದೆಯನ್ನು ಗೆಳೆಯನ ಜೊತೆ ಸೇರಿ ಮಸಣಕ್ಕೆ ಅಟ್ಟಿದ ಪಾಪಿ ಮಗಳು