ಬಾಹುಬಲಿ-2 ಗಳಿಕೆ ಆಂಧ್ರ ಬಿಟ್ಟರೆ ಕರ್ನಾಟಕದಲ್ಲೇ ಹೆಚ್ಚು: ಹಾಗಾದರೆ ಸಿನಿಮಾ ನೋಡಿದವರ್ಯಾರು ?

By Suvarna Web DeskFirst Published Apr 29, 2017, 3:48 PM IST
Highlights

ಕೇರಳದಲ್ಲಿ 5.45 ಕೋಟಿ ರೂ. ಬಾಕ್ಸ್ ಆಫೀಸ್'ನಲ್ಲಿ ದಾಖಲಾಗಿದೆ ಎಂದು ಮಾಧ್ಯಮದ ವರದಿಗಳು ತಿಳಿಸಿವೆ.

ಬೆಂಗಳೂರು(ಏ.29): ಬಾಹುಬಲಿ-2 ರಾಜ್ಯದ ಅತೀ ಹೆಚ್ಚುಸಿನಿಮಾ ಮಂದಿರಗಳನ್ನು ಆಕ್ರಮಿಸಿ ಕನ್ನಡ ಚಿತ್ರಗಳಿಗೆ ಅನ್ಯಾಯ ಮಾಡಿದೆ ಎಂದು ರಾಜ್ಯದ ಸಾವಿರಾರು ಕನ್ನಡಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.

ಬಿಡುಗಡೆಯಾದ ಒಂದೇ ದಿನದಲ್ಲಿ ಬಾಹುಬಲಿ-2 ದೇಶದಾದ್ಯಂತ 100 ಕೋಟಿ ರೂ. ಗೂ ಹೆಚ್ಚು ಹಣ ಗಳಿಸುವ ಮೂಲಕ ಇದು ಎಲ್ಲ ಬಾಲಿವುಡ್ ಸಿನಿಮಾ ದಾಖಲೆಗಳನ್ನು ಮುರಿದಿದೆ. ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಿಂದ ತೆಲುಗು ಆವೃತ್ತಿಯಲ್ಲಿ 58 ಕೋಟಿ ಬಾಚಿದ್ದರೆ ಕರ್ನಾಟಕದಲ್ಲಿ ಕೊಳ್ಳೆ ಹೊಡೆದಿದ್ದು 15.5 ಕೋಟಿ.ರೂ, ಇನ್ನು ತಮಿಳುನಾಡಿನ ಗಳಿಕೆ 10.25 ಕೋಟಿ ರೂ. ಇದ್ದರೆ, ಕೇರಳದಲ್ಲಿ 5.45 ಕೋಟಿ ರೂ. ಬಾಕ್ಸ್ ಆಫೀಸ್'ನಲ್ಲಿ ದಾಖಲಾಗಿದೆ ಎಂದು ಮಾಧ್ಯಮದ ವರದಿಗಳು ತಿಳಿಸಿವೆ.

ಕರ್ನಾಟಕದಲ್ಲಿ ದೇಶದಲ್ಲಿ 2ನೇ ಅತೀ ಹೆಚ್ಚು ಹಣ ಗಳಿಕೆಯಾಗಿದ್ದು, ಕನ್ನಡಿಗರಲ್ಲದೆ ಮತ್ತಿನ್ಯಾರು ನೋಡಿದರು ಸೋಷಿಯಲ್ ಮೀಡಿಯಾದಲ್ಲಿ ಮತ್ತೊಂದು ಚರ್ಚೆ ಶುರುವಾಗಿದೆ.

click me!