ಜಾರ್ಜ್ ಭ್ರಷ್ಟಾಚಾರದ ಬಗ್ಗೆ ಯಾವುದಾದರೂ ಸಾಕ್ಷಿಗಳಿದ್ದರೆ ಬಿಜೆಪಿ ತೋರಿಸಲಿ: ಪರಮೇಶ್ವರ್

Published : Nov 05, 2017, 07:35 PM ISTUpdated : Apr 11, 2018, 12:37 PM IST
ಜಾರ್ಜ್ ಭ್ರಷ್ಟಾಚಾರದ ಬಗ್ಗೆ ಯಾವುದಾದರೂ ಸಾಕ್ಷಿಗಳಿದ್ದರೆ ಬಿಜೆಪಿ ತೋರಿಸಲಿ: ಪರಮೇಶ್ವರ್

ಸಾರಾಂಶ

ಬಿಜೆಪಿಯ ಐದು ವಷ೯ದ ಆಡಳಿತದಲ್ಲಿ ಭ್ರಮ ನಿರಸನವಾಗಿದೆ.  ಮೂರು ಜನ ಮುಖ್ಯ ಮಂತ್ರಿಗಳಾದರೂ ಅಭಿವೃದ್ಧಿ ಮಾತ್ರ  ಶೂನ್ಯ. ಆರಂಭದಲ್ಲೇ ಯಾವ ರೀತಿ ಪ್ರತಿಕ್ರಿಯೆ ಸಿಕ್ಕಿದೆ ಅನ್ನೋದು  ಅವರಿಗೆ ಗೊತ್ತಿದೆ ಎಂದು   ತುಮಕೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ತುಮಕೂರು (ನ.05): ಬಿಜೆಪಿಯ ಐದು ವಷ೯ದ ಆಡಳಿತದಲ್ಲಿ ಭ್ರಮ ನಿರಸನವಾಗಿದೆ.  ಮೂರು ಜನ ಮುಖ್ಯ ಮಂತ್ರಿಗಳಾದರೂ ಅಭಿವೃದ್ಧಿ ಮಾತ್ರ  ಶೂನ್ಯ. ಆರಂಭದಲ್ಲೇ ಯಾವ ರೀತಿ ಪ್ರತಿಕ್ರಿಯೆ ಸಿಕ್ಕಿದೆ ಅನ್ನೋದು  ಅವರಿಗೆ ಗೊತ್ತಿದೆ ಎಂದು   ತುಮಕೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಜಕೀಯ ಸ್ಥಿರತೆ ಇದ್ದರೆ  ಬಂಡವಾಳ ಹೂಡಿಕೆದಾರರು ಬರುತ್ತಾರೆ. ಇದು ರಾಜ್ಯದಲ್ಲಿ ಆಗಿದೆ. ಸಿಎಂ ಸಿದ್ಧರಾಮಯ್ಯ ರಾಜ್ಯದ ಜನತೆಗೆ ಉತ್ತಮ ಬಜೆಟ್  ನೀಡಿದ್ದಾರೆ ಎಂದು ಪರಮೇಶ್ವರ್ ಸಿಎಂ ಪರ ಬ್ಯಾಟಿಂಗ್ ನಡೆಸಿದ್ದಾರೆ.  ಜಾಜ್೯ ರಾಜೀನಾಮೆ ವಿಚಾರವಾಗಿ, ಜಾರ್ಜ್ ಯಾಕೆ ರಾಜಿನಾಮೆ ಕೊಡಬೇಕು. ಇದರ  ಹಿಂದೆ ಕೇಂದ್ರ ಸರಕಾರದ ಹುನ್ನಾರ ಇದೆ. ಒಂದೇ ಪ್ರಕರಣದಲ್ಲಿ ಎರಡು ಎಫ್'ಐಆರ್ ಹಾಕುವಂತಿಲ್ಲ. ಅದಕ್ಕೆ ಮರು ತನಿಖೆಗೆ ಆದೇಶಿಸಲಾಗಿದೆ. ಭ್ರಷ್ಟಾಚಾರ ಬಗ್ಗೆ ಯಾವುದಾದರೂ  ಸಾಕ್ಷಿಗಳಿದ್ರೆ ತೋರಿಸಲಿ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲ.  ಪರಮೇಶ್ವರ್  ಸೋಲಿಗೆ ಸಿದ್ದರಾಮಯ್ಯ ಕಾರಣ ಅನ್ನೋಕೆ ದಾಖಲೆ ಇದ್ರೆ ಬಿಡುಗಡೆ ಮಾಡಲಿ.  20 ಜನ ಬಿಜೆಪಿ ಶಾಸಕರು ಕಾಂಗ್ರೆಸ್'ಗೆ ಸದ್ಯದಲ್ಲೇ ಬರಲಿದ್ದಾರೆ ಎಂದು ಪರಮೇಶ್ವರ್ ತುಮಕೂರಿನಲ್ಲಿಂದು ಹೇಳಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದ್ವೇಷ ಭಾಷಣ ತಡೆಗೆ ಕಾನೂನು ಯತ್ನ: ಕಾಂಗ್ರೆಸ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ
ದ್ವೇಷ ಭಾಷಣ ಶಾಸನ ಕಾಂಗ್ರೆಸ್ ಕ್ರೂರ ಸಂಪ್ರದಾಯದ ಪ್ರತಿಬಿಂಬ: ಪ್ರಲ್ಹಾದ್ ಜೋಶಿ ಕಿಡಿ