ಹಿಂದಿಯಲ್ಲಿ ಮಾತನಾಡುವಂತೆ ಊಬರ್ ಚಾಲಕನ ಮೇಲೆ ಧಮ್ಕಿ

By Suvarna Web DeskFirst Published Nov 5, 2017, 6:36 PM IST
Highlights

ಕನ್ನಡದಲ್ಲಿ ಮಾತನಾಡಿದ ಊಬರ್ ಕ್ಯಾಬ್ ಚಾಲಕನಿಗೆ ಹಿಂದಿಯಲ್ಲಿ ಮಾತನಾಡುವಂತೆ ದುಷ್ಕರ್ಮಿಗಳು ಧಮ್ಕಿ ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.  ಕ್ಯಾಬ್ ಚಾಲಕ ಜಗದೀಶ್ ಎಂಬುವವರ ಮೇಲೆ ನಿನ್ನೆ ತಡರಾತ್ರಿ ಐಟಿಸಿ ಹೊಟೇಲ್ ಬಳಿ ದುಷ್ಕರ್ಮಿಗಳು  ಹಲ್ಲೆ ನಡೆಸಿದ್ದಾರೆ.  

ಬೆಂಗಳೂರು (ನ.05): ಕನ್ನಡದಲ್ಲಿ ಮಾತನಾಡಿದ ಊಬರ್ ಕ್ಯಾಬ್ ಚಾಲಕನಿಗೆ ಹಿಂದಿಯಲ್ಲಿ ಮಾತನಾಡುವಂತೆ ದುಷ್ಕರ್ಮಿಗಳು ಧಮ್ಕಿ ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.  ಕ್ಯಾಬ್ ಚಾಲಕ ಜಗದೀಶ್ ಎಂಬುವವರ ಮೇಲೆ ನಿನ್ನೆ ತಡರಾತ್ರಿ ಐಟಿಸಿ ಹೊಟೇಲ್ ಬಳಿ ದುಷ್ಕರ್ಮಿಗಳು  ಹಲ್ಲೆ ನಡೆಸಿದ್ದಾರೆ.  

ಹೆಬ್ಬಾಳದ ಬಳಿ ಜಗದೀಶ್ ಕಸ್ಟಮರ್'ರನ್ನು ಪಿಕ್ ಮಾಡಿದ್ದರು. ಆತ ತಿಳಿಸಿದ ಸ್ಥಳಕ್ಕೆ ಕರೆದುಕೊಂಡು ಹೋದಾಗ, ತಾನು ಬೇರೆ ಸ್ಥಳಕ್ಕೆ ಕೇಳಿದ್ದಾಗಿ ಕಸ್ಟಮರ್ ಜಗದೀಶ್'ರೊಂದಿಗೆ ಮಾತಿಗಿಳಿದಿದ್ದಾರೆ. ಬಳಿಕ ಆತ ಹೇಳಿದ ಸ್ಥಳಕ್ಕೆ ಜಗದೀಶ್ ಕರೆದೊಯ್ದಿದ್ದಾರೆ. ಈ ಸಂದರ್ಭದಲ್ಲಿ ಕ್ಯಾಬ್'ನಲ್ಲಿದ್ದ ಸಹ ಪ್ರಯಾಣಿಕರು ಜಗದೀಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಹಲ್ಲೆ ವೇಳೆ ಕನ್ನಡ ಮತ್ತು ಕನ್ನಡಿಗರ ಬಗ್ಗೆ ಕೆಟ್ಟದಾಗಿ ಮಾತನಾಡಿ ಹಿಂದಿಯಲ್ಲಿ ಮಾತನಾಡುವಂತೆ ಧಮ್ಕಿ ಹಾಕಿದ್ದಾರೆ. ಜಗದೀಶ್ ಶೇಷಾದ್ರಿಪುರಂ ಠಾಣೆಗೆ ದೂರು ನೀಡಿದ್ದು,  ಪೊಲೀಸರು ಇಬ್ಬರನ್ನು  ವಶಕ್ಕೆ ಪಡೆದಿದ್ದಾರೆ.

 

click me!