ಗಿನ್ನೆಸ್‌ ದಾಖಲೆಗೆ ಸೇರಿದ ‘ಖಿಚಡಿ’

By Suvarna Web DeskFirst Published Nov 5, 2017, 5:53 PM IST
Highlights

ಭಾರತದ ಸಾಂಪ್ರದಾಯಿಕ ಅಡುಗೆ 'ಖಿಚಡಿ' ಗಿನ್ನೆಸ್‌ ದಾಖಲೆಗೆ ಸೇರಿದೆ. ಸೆಲೆಬ್ರಿಟಿ ಶೆಫ್‌ ಸಂಜೀವ್‌ ಕಪೂರ್‌ ನೇತೃತ್ವದ 30 ಜನರ ತಂಡ 918 ಕೆ.ಜಿ ತೂಕದ ಖಿಚಡಿ ತಯಾರಿಸಿದ್ದು, ಇದು ಜಗತ್ತಿನಲ್ಲೇ ಅತಿದೊಡ್ಡ ಖಿಚಡಿ ಎಂಬ ಖ್ಯಾತಿಗೆ ಪಾತ್ರವಾಗಿದೆ.

ನವದೆಹಲಿ (ನ.05): ಭಾರತದ ಸಾಂಪ್ರದಾಯಿಕ ಅಡುಗೆ 'ಖಿಚಡಿ' ಗಿನ್ನೆಸ್‌ ದಾಖಲೆಗೆ ಸೇರಿದೆ. ಸೆಲೆಬ್ರಿಟಿ ಶೆಫ್‌ ಸಂಜೀವ್‌ ಕಪೂರ್‌ ನೇತೃತ್ವದ 30 ಜನರ ತಂಡ 918 ಕೆ.ಜಿ ತೂಕದ ಖಿಚಡಿ ತಯಾರಿಸಿದ್ದು, ಇದು ಜಗತ್ತಿನಲ್ಲೇ ಅತಿದೊಡ್ಡ ಖಿಚಡಿ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಬೃಹತ್‌ ಕಡಾಯಿಯೊಂದರಲ್ಲಿ ರಾತ್ರಿಯಿಡೀ ಶ್ರಮಿಸಿ ಈ ಖಿಚಡಿ ಸಿದ್ಧಪಡಿಸಲಾಗಿದೆ. ಇಂಡಿಯಾ ಗೇಟ್‌ ಎದುರಿನ ಹುಲ್ಲುಹಾಸಿನ ಮೇಲೆ ವರ್ಲ್ಡ್ ಫುಡ್‌ ಇಂಡಿಯಾ ಫೆಸ್ಟಿವಲ್‌ ಭಾಗವಾಗಿ ಈ ಖಿಚಡಿ ತಯಾರಿಸಲಾಗಿದೆ. ಇದನ್ನು ತಯಾರಿಸಲು ನೂರಾರು ಕೆ.ಜಿ ಅಕ್ಕಿ, ದಾಲ್‌, ತರಕಾರಿ ಮತ್ತು ಮಸಾಲೆಗಳನ್ನು ಬಳಸಲಾಗಿದೆ. ದೇಶದ ಎಲ್ಲೆಡೆಯಿಂದ ತರಿಸಲಾದ ವಸ್ತುಗಳನ್ನು ಈ ಪಾಕದ ತಯಾರಿಕೆಗೆ ಬಳಸಿಕೊಳ್ಳಲಾಗಿದೆ. ಈ ಖಿಚಡಿಯನ್ನು ಎತ್ತರದ ಸ್ಟ್ಯಾಂಡ್‌ ಮೇಲಿಡಲಾಗಿದೆ. ಪಾತ್ರೆಯನ್ನು ಬಾಗಿಸಲು, ಮೇಲೆತ್ತಲು ಕ್ರೇನ್‌ ಬಳಸಲಾಗಿದೆ. ಕೇಂದ್ರ ಆಹಾರ ಸಂಸ್ಕರಣೆ ಸಚಿವೆ ಹರ್‌ಸಿಮ್ರತ್‌ ಕೌರ್‌ ಬಾದಲ್‌ ಮತ್ತು ಯೋಗ ಗುರು ಬಾಬಾ ರಾಮ್‌ ದೇವ್‌ ಖಿಚಡಿ ತಯಾರಿಗೆ ಅಂತಿಮ ಸ್ಪರ್ಶ ನೀಡಿದ್ದಾರೆ.

click me!