ಶಿವಸೇನೆ-ಬಿಜೆಪಿ ಸರ್ಕಾರ ರಚಿಸಲಿ: ಅನುಭವಿ ಶರದ್ ಪವಾರ್ ಮಾತು ಕೇಳಲಿ!

Published : Nov 06, 2019, 02:55 PM ISTUpdated : Nov 06, 2019, 03:03 PM IST
ಶಿವಸೇನೆ-ಬಿಜೆಪಿ ಸರ್ಕಾರ ರಚಿಸಲಿ: ಅನುಭವಿ ಶರದ್ ಪವಾರ್ ಮಾತು ಕೇಳಲಿ!

ಸಾರಾಂಶ

ಶಿವಸೇನೆ-ಎನ್‌ಸಿಪಿ ಮೈತ್ರಿಗೆ ಒಲ್ಲೆ ಎಂದ ಶರದ್ ಪವಾರ್| ಬಿಜೆಪಿ-ಶಿವಸೇನೆ ಸರ್ಕಾರ ರಚಿಸಲಿ ಎಂದ ಅನುಭವಿ ರಜಕಾರಣಿ| ಬಿಜೆಪಿ-ಶಿವಸೇನೆ ಪರವಾಗಿ ರಾಜ್ಯದ ಜನತೆ ತೀರ್ಪು ಕೊಟ್ಟಿದ್ದಾರೆ ಎಂದ ಪವಾರ್| ಕಾಂಗ್ರೆಸ್-ಎನ್‌ಸಿಪಿ ಜವಾಬ್ದಾರಿಯುತ ಪ್ರತಿಪಕ್ಷ ಸ್ಥಾನದಲ್ಲಿ ಕೂರಲಿವೆ ಎಂದ ಪವಾರ್| 'ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆ ತಪ್ಪಿಸಲು ಬಿಜೆಪಿ-ಶಿವಸೇನೆ ಸರ್ಕಾರ ರಚೆನಯೊಂದೇ ಮಾರ್ಗ'| ಅಹ್ಮದ್ ಪಟೇಲ್ ಹಾಗೂ ನಿತಿನ್ ಗಡ್ಕರಿ ಭೇಟಿ ಕುರಿತು ನನಗೆ ಗೊತ್ತಿಲ್ಲ ಎಂದ ಎನ್‌ಸಿಪಿ ಮುಖ್ಯಸ್ಥ| 

ಮುಂಬೈ(ನ.06): ಇದು ನಿಜಕ್ಕೂ ಅನುಭವಿ ರಾಜಕಾರಣಿಯ ಮಾತುಗಳು.. ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಅವಕಾಶ ಸಿಕ್ಕರೂ, ಅದನ್ನು ಧಿಕ್ಕರಿಸಿ ಪ್ರತಿಪಕ್ಷ ಸ್ಥಾನದಲ್ಲಿ ಕೂರುವ ಮಾತುಗಳನ್ನಾಡಿದ್ದಾರೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್. 

ಮಹಾರಾಷ್ಟ್ರ ಜನತೆ ಬಿಜೆಪಿ-ಶಿವಸೇನೆಗೆಸರ್ಕಾರ ರಚಿಸುವಂತೆ ಆಜ್ಞೆ ನೀಡಿದ್ದು, ಈ ಆಜ್ಞೆ ಧಿಕ್ಕರಿಸಿ ಶಿವಸೇನೆಯೊಂದಿಗೆ ನಾವು ಸರ್ಕಾರ ರಚಿಸುವ ಪ್ರಶ್ನೆಯೇ ಇಲ್ಲ ಎಂದು ಶರದ್ ಪವಾರ್ ಸ್ಪಷ್ಟಪಡಿಸಿದ್ದಾರೆ.

ಶಿವಸೇನೆಯೇ 'ಮಹಾ ಮುಖ್ಯಸ್ಥ': ಸಂಜಯ್ ರಾವುತ್ ಹೇಳಿಕೆ ಅಸ್ತವ್ಯಸ್ತ!

ಬಿಜೆಪಿ-ಶಿವಸೇನೆ ಪರವಾಗಿ ರಾಜ್ಯದ ಜನತೆ ತೀರ್ಪು ಕೊಟ್ಟಿದ್ದು ಅವರಿಬ್ಬರೇ ಸೇರಿ ಸರ್ಕಾರ ರಚನೆ ಮಾಡಬೇಕು. ಕಾಂಗ್ರೆಸ್ ಹಾಗೂ ಎನ್‌ಸಿಪಿ ಜವಾಬ್ದಾರಿಯುತ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲು ನಿರ್ಧರಿಸಿವೆ ಎಂದು ಪವಾರ್ ಹೇಳಿದ್ದಾರೆ. 

ಶಿವಸೇನೆ-ಎನ್‌ಸಿಪಿ ಸರ್ಕಾರ ರಚನೆಯ ಸಾಧ್ಯತೆಯನ್ನು ತಳ್ಳಿ ಹಾಕಿದ ಪವಾರ್, ಕಳೆದ 25 ವರ್ಷಗಳಿಂದ ಅವರು ಜೊತೆಯಾಗಿ ಇರುವ ಬಿಜೆಪಿ-ಶಿವಸೇನೆ ನಡುವೆ ಮೂಗು ತೂರಿಸಲು ಇಷ್ಟಪಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಶಿವಸೇನೆಯೇ 'ಮಹಾ ಮುಖ್ಯಸ್ಥ': ಸಂಜಯ್ ರಾವುತ್ ಹೇಳಿಕೆ ಅಸ್ತವ್ಯಸ್ತ!

ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆಯನ್ನು ತಪ್ಪಿಸಲು ಉಳಿದಿರುವುದು ಬಿಜೆಪಿ-ಶಿವಸೇನೆ ಸರ್ಕಾರ ರಚನೆಯ ಮಾರ್ಗವೊಂದೇ ಎಂದು ಹಿರಿಯ ರಾಜಕಾರಣಿಒ ಶರದ್ ಪವಾರ್ ಸೂಚ್ಯವಾಗಿ ಹೇಳಿದ್ದಾರೆ. 

ಶಿವಸೇನೆ ನಾಯಕ ಸಂಜಯ್ ರಾವತ್ ಭೇಟಿಯ ಕುರಿತು ಪ್ರತಿಕ್ರಿಯಿಸಿದ ಶರದ್ ಪವಾರ್, ಶಿವಸೇನೆ-ಎನ್‌ಸಿಪಿ ಸರ್ಕಾರ ರಚನೆಯಾದರೂ ಅಗತ್ಯ ಸಮಖ್ಯಾಬಲವನ್ನು ಅವರು ಎಲ್ಲಿಂದ ತರುತ್ತಾರೆ ಎಂದು ಪ್ರಶ್ನಿಸಿದ್ದಾಗಿ ಹೇಳಿದರು.

ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‌ಸಿಪಿ ಸರ್ಕಾರಕ್ಕೆ ಯತ್ನ?

ಇನ್ನು ಕಾಂಗ್ರೆಸ್‌ನ ಅಹ್ಮದ್ ಪಟೇಲ್ ಹಾಗೂ ಬಿಜೆಪಿಯ ನಿತಿನ್ ಗಡ್ಕರಿ ನಡುವಿನ ಮತುಕತೆ ಕುರಿತು ಪ್ರತ್ರಿಕ್ರಿಯಿಸಲು ನಿರಾಕರಿಸಿದ ಶರದ್ ಪವಾರ್, ಅವರ ಭೇಟಿಗೂ ತಮಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ
ಕೇಂದ್ರ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ: ಸಂಸದ ಯದುವೀರ್