
ವಿಶಾಖಪಟ್ಟಣಂ: ದೊಡ್ಡ ಹುದ್ದೆಯಲ್ಲಿರುವ ಅಧಿಕಾರಿಗಳು ಮಕ್ಕಳ ಮದುವೆಯನ್ನು ಲಕ್ಷಾಂತರ ರು. ಖರ್ಚು ಮಾಡಿ ಅದ್ದೂರಿಯಾಗಿ ನೆರವೇರಿಸುತ್ತಾರೆ.
ಆದರೆ, ವಿಶಾಖಪಟ್ಟಣಂ ಮೆಟ್ರೋಪಾಲಿಟನ್ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಪಟ್ನಾಲ ಬಸಂತ್ ಕುಮಾರ್ ಅವರು, ಕೇವಲ 18000 ರು.ಯಲ್ಲಿ ತಮ್ಮ ಮಗನ ಮದುವೆ ನೆರವೇರಿಸಲು ನಿರ್ಧರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಹುಡುಗಿ ಮನೆಯವರಿಗೂ ಗರಿಷ್ಠ 18000 ರು. ವೆಚ್ಚ ಮಾಡುವಂತೆ ಪಟ್ನಾಲ ಸೂಚಿಸಿದ್ದಾರೆ.
ಇದೇ ಭಾನುವಾರ(ಫೆ.10)ದಂದು ಈ ಮದುವೆ ನೆರವೇರಲಿದೆ. ಈ ನಡುವೆ, ನವ ದಾಂಪತ್ಯಕ್ಕೆ ಕಾಲಿಡಲಿರುವ ಐಎಎಸ್ ಅಧಿಕಾರಿಯ ಪುತ್ರ ಹಾಗೂ ವಧುವಿಗೆ ತೆಲಂಗಾಣ ರಾಜ್ಯಪಾಲ ಇ.ಎಸ್.ಎಲ್ ನರಸಿಂಹನ್ ಅವರು ಆಶಿರ್ವಾದ ಮಾಡಲಿದ್ದಾರೆ. 2017ರಲ್ಲಿಯೂ ಬಸಂತ್ ಕುಮಾರ್ ಅವರು, ಕೇವಲ 16100 ರು. ವೆಚ್ಚದಲ್ಲಿ ತಮ್ಮ ಪುತ್ರಿ ವಿವಾಹವನ್ನು ನೆರವೇರಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ