ಹುತಾತ್ಮ ಯೋಧನ ಮಗಳ ವಿದ್ಯಾಭ್ಯಾಸದ ಹೊಣೆ ಹೊತ್ತ ಐಎಎಸ್- ಐಪಿಎಸ್‌ ದಂಪತಿ

By Suvarna Web DeskFirst Published May 6, 2017, 2:04 AM IST
Highlights

ಉದಾರತೆ ಮೆರೆದ IAS-IPS ಮುಸ್ಲಿಂ ದಂಪತಿ

ಹುತಾತ್ಮ ಯೋಧನ ಮಗಳ ವಿದ್ಯಾಭ್ಯಾಸದ ಹೊಣೆ ಹೊತ್ತ ದಂಪತಿ

ಯೂನಸ್ ಖಾನ್ ಮತ್ತು ಅಂಜುಮ್‌ ಅರಾ IAS-IPS  ದಂಪತಿ

ಹುತಾತ್ಮ ಯೋಧ ಪರಮ್​ಜಿತ್ ಸಿಂಗ್ ಮಗಳು ಕುಶ್‌ದೀಪ್ ಕೌರ್

7 ನೇ ತರಗತಿ ಓದುತ್ತಿರೋ ಕುಶ್‌ದೀಪ್ ಕೌರ್

ಕೆಲದಿನಗಳ ಹಿಂದೆ ಯೋಧ ಪರಮ್‌ಜಿತ್ ಸಿಂಗ್ ಪಾಕಿಸ್ತಾನ ಸೇನೆಯ ಗುಂಡಿನ ದಾಳಿಯಲ್ಲಿ ಹುತಾತ್ಮರಾಗಿದ್ದರು. ಈಗ ಅವರ 12 ವರ್ಷದ ಶಿಕ್ಷಣದ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳುವುದಾಗಿ ಹಿಮಾಚಲಪ್ರದೇಶದ ಐಎಎಸ್‌ ಹಾಗೂ ಐಪಿಎಸ್‌ ಅಧಿಕಾರಿಗಳಾಗಿರುವ ದಂಪತಿ ಘೋಷಿಸಿದ್ದಾರೆ.

ಐಎಎಸ್ ಅಧಿಕಾರಿ ಯೂನಸ್ ಖಾನ್ ಮತ್ತು ಅವರ ಪತ್ನಿ, ಐಪಿಎಸ್ ಅಧಿಕಾರಿ ಅಂಜುಮ್‌ ಅರಾ ಅವರೇ ಈ ಘೋಷಣೆ ಮಾಡಿದ ದಂಪತಿ. ಹುತಾತ್ಮ ಯೋಧನ ಮಗಳು ಶಿಕ್ಷಣ ಪೂರೈಸಿ ಸ್ವಂತ ದುಡಿಮೆ ಮಾಡಿ ಜೀವನ ಸಾಗಿಸಲು ಸಮರ್ಥಳಾಗುವವರೆಗೆ ಆಕೆಯ ಎಲ್ಲ ಜವಾಬ್ದಾರಿಯನ್ನು ತಾವೂ ವಹಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಹುತಾತ್ಮ ಯೋಧ ಪರಮ್‌ಜಿತ್ ಸಿಂಗ್ ಪತ್ನಿ ಬಳಿಯೂ ಮಾತನಾಡಿರುವುದಾಗಿ ದಂಪತಿ ತಿಳಿಸಿದ್ದಾರೆ. ಸದ್ಯ ಮಗಳು ಕುಶ್‌ದೀಪ್ ಕೌರ್ ಏಳನೇ ತರಗತಿಯಲ್ಲಿ ಓದುತ್ತಿದ್ದಾಳೆ.

click me!