500 ಕೋಟಿ ಕೊಡದಿದ್ದರೆ ಸಾಮೂಹಿಕ ಹತ್ಯೆ: ಬೆಂಗಳೂರು ವಿಪ್ರೋ ಉದ್ಯೋಗಿಗಳಿಗೆ ಬೆದರಿಕೆ ಇಮೇಲ್

By Suvarna Web DeskFirst Published May 6, 2017, 12:16 AM IST
Highlights

ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಂಸ್ಥೆಯು ಸೈಬರ್ ಭಯೋತ್ಪಾದನೆಯಡಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದೆ. 20 ದಿನಗಳೊಳಗೆ ಅಂದರೆ ಮೇ.25ರೊಳಗೆ ಹಣ ಪಾವತಿಯಾಗದಿದ್ದರೆ  ರಾಸಾಯನಿಕ ವಿಷಾನಿಲ 'ಬಿಟ್'ಕಾಯ್ನಸ್' ಬಳಸಿ ಸಂಸ್ಥೆಯ ಸಿಬ್ಬಂದಿಗಳನ್ನು ಕೊಲ್ಲಲಾಗುವುದು' ಎಂದು ಮೇಲ್'ನಲ್ಲಿ ತಿಳಿಸಲಾಗಿದೆ. ಬೆದರಿಕೆಯ ಇಮೇಲ್ ಶುಕ್ರವಾರ ಬಂದಿದ್ದು, ಹಿರಿಯ ಅಧಿಕಾರಿಗಳು ಸೇರಿದಂತೆ ಹಲವು ಮಂದಿಗೆ ಮೇಲ್ ಕಳುಹಿಸಲಾಗಿದೆ.

ಬೆಂಗಳೂರು(ಮೇ.06): ಡಿಜಿಟಲ್ ಪೇಮೆಂಟ್'ನಲ್ಲಿ 500 ಕೋಟಿ ನೀಡದಿದ್ದರೆ ವಿಷ  ಅನಿಲದ ಮೂಲಕ ಬೆಂಗಳೂರಿನ ವಿಪ್ರೋ ಕಚೇರಿಯ ಎಲ್ಲ ಉದ್ಯೋಗಿಗಳನ್ನು ಕೊಲ್ಲುವುದಾಗಿ ಅನಾಮದೇಯ ಬೆದರಿಕೆಯ ಇಮೇಲ್ ಬಂದಿದೆ.

ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಂಸ್ಥೆಯು ಸೈಬರ್ ಭಯೋತ್ಪಾದನೆಯಡಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದೆ. 20 ದಿನಗಳೊಳಗೆ ಅಂದರೆ ಮೇ.25ರೊಳಗೆ ಹಣ ಪಾವತಿಯಾಗದಿದ್ದರೆ  ರಾಸಾಯನಿಕ ವಿಷಾನಿಲ ' ಬಳಸಿ ಸಂಸ್ಥೆಯ ಸಿಬ್ಬಂದಿಗಳನ್ನು ಕೊಲ್ಲಲಾಗುವುದು' ಎಂದು ಮೇಲ್'ನಲ್ಲಿ ತಿಳಿಸಲಾಗಿದೆ. ಬೆದರಿಕೆಯ ಇಮೇಲ್ ಶುಕ್ರವಾರ ಬಂದಿದ್ದು, ಹಿರಿಯ ಅಧಿಕಾರಿಗಳು ಸೇರಿದಂತೆ ಹಲವು ಮಂದಿಗೆ ಮೇಲ್ ಕಳುಹಿಸಲಾಗಿದೆ.

ರಾಸಾಯನಿಕ ವಿಷಾನಿಲವನ್ನು  ಕಚೇರಿಯ ಕೆಪೆಟೇರಿಯಾದಲ್ಲಿ ಆಹಾರದ ಮೂಲಕ , ಡ್ರೋನ್ ಬಳಕೆ, ಶೌಚಾಲಯ ಅಥವಾ ಶೌಚಾಲಯದ ಪೇಪರ್ ಮೂಲಕ ಸಿಂಪಡಿಸಿ ಸಿಬ್ಬಂದಿಯನ್ನು ಕೊಲ್ಲಲಾಗುವುದು. ಒಂದು ಕೇಜಿ ರಾಸಾಯನಿಕ ವಿಷಾನಿಲವನ್ನು ಬಳಸಲಿದ್ದು, ಇದರಲ್ಲಿ ಎನ್ವಲಪ್ ಕವರ್' ಮೂಲಕ 2 ಗ್ರಾಮ್ ಬಳಸಿ ಹತ್ಯೆ ಮಾಡಲಾಗುವುದು ಎಂದು ಬೆದರಿಕೆ ಮೇಲ್'ನಲ್ಲಿ ತಿಳಿಸಲಾಗಿದೆ.

ಬೆದರಿಕೆ ಕಳುಹಿಸಿರುವ ವ್ಯಕ್ತಿಯು ಈ ವರ್ಷದ ಜನವರಿ 21ರಂದು  ಕೋಲ್ಕತ್ತಾದ ಬಾರ್ನಾಗರ್ ಪ್ರದೇಶದಲ್ಲಿ 22 ಬೀದಿ ನಾಯಿಗಳು ಒಮ್ಮೊಂದೊಮ್ಮೆ ಮೃತಪಟ್ಟಿದ್ದವು. ಇದು ಪತ್ರಿಕೆಗಳಲ್ಲೂ ಸುದ್ದಿಯಾಗಿತ್ತು. ಇದಕ್ಕೆ ವಿಷಾನಿಲವೆ ಕಾರಣ ಎಂಬುದನ್ನು' ಕೋಟ್ ಮಾಡಿದ್ದಾನೆ. Ramesh2@protonmail.com ಐಡಿಯಿಂದ ಬೆದರಿಕೆ ಸಂದೇಶ ಬಂದಿದೆ. ವಿಪ್ರೋ ಸಿಬ್ಬಂದಿ ಐಟಿ ಕಾಯಿದೆ ಸೆಕ್ಷನ್ 66 ಎಫ್'ನಡಿ  ಪ್ರಕರಣ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ರಾಸಾಯನಿಕ ವಿಷಾನಿಲಾವಾದ 'ರೆಸಿನ್'ಅನಿಲವನ್ನು ಶತ್ರುಗಳನ್ನು ಕೊಲ್ಲಲು ಬಳಸಲಾಗುತ್ತದೆ. ಈ ವಿಷಾನಿಲವು ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಸೇರಿದಂತೆ ಹಲವು ರಾಜಕಾರಣಿಗಳನ್ನು ಕೊಲ್ಲಲು ಕಳುಹಿಸಲಾಗಿತ್ತು' ಎಂಬುದು ಎಫ್'ಬಿಐ ತನಿಖೆಯಿಂದ ತಿಳಿದು ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್'ಐ'ಆರ್ ದಾಖಲಿಸಲಾಗಿದ್ದು, ತನಿಖೆಯನ್ನು ಚುರುಕುಗೊಳಿಸುತ್ತೇವೆ ಎಂದು ಅಪರಾಧ ವಿಭಾಗದ ಹೆಚ್ಚುವರಿ ಆಯುಕ್ತ ಎಸ್.ರವಿ ತಿಳಿಸಿದ್ದಾರೆ.

click me!